ಡೊನಾಲ್ಡ್ ಟ್ರಂಪ್‌ಗೆ ನೀಡಲಾಗಿದ್ದ ಆಂಟಿಬಾಡಿ ಕಾಕ್‌ಟೇಲ್ ಔಷಧ ಪಡೆದ ಐವರು ರೋಗಿಗಳು

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್‌ನಿಂದ ಗುಣಮುಖರಾಗಲು ನೆರವಾಗಿದ್ದ ಆಂಟಿಬಾಡಿ ಕಾಕ್‌ಟೇಲ್ ಔಷಧವನ್ನು ಮುಂಬೈನ ಐವರು ರೋಗಿಗಳಿಗೆ ನೀಡಲಾಗಿದೆ. ಈ ಔ‍ಷಧ ಬಲು ದುಬಾರಿಯಾಗಿದೆ.

ಡೊನಾಲ್ಡ್ ಟ್ರಂಪ್‌ಗೆ ನೀಡಲಾಗಿದ್ದ ಆಂಟಿಬಾಡಿ ಕಾಕ್‌ಟೇಲ್ ಔಷಧ ಪಡೆದ ಐವರು ರೋಗಿಗಳು
Linkup
ಮುಂಬಯಿ: ಕೋವಿಡ್ ಚಿಕಿತ್ಸೆಯ ಮತ್ತೊಂದು ಪ್ರಯೋಗವಾಗಿರುವ ಭಾರತದಲ್ಲಿ ಈಗ ಲಭ್ಯವಾಗುತ್ತಿದೆ. ಮುಂಬಯಿಯಲ್ಲಿ ಐವರು ರೋಗಿಗಳಿಗೆ ಈ ಅಭಿಧಮನಿ ಮೂಲಕ ನೀಡಲಾಗುವ ಔಷಧವನ್ನು ಶುಕ್ರವಾರ ಕೊಡಲಾಗಿದೆ. ಬಾಂದ್ರಾದ ಲೀಲಾವತಿ ಆಸ್ಪತ್ರೆಯಲ್ಲಿರುವ 40ರ ಪ್ರಾಯದ ಇಬ್ಬರು ರೋಗಿಗಳಿಗೆ ಮತ್ತು ಸಾನ್‌ಪಾಡಾದಲ್ಲಿನ ಎಂಪಿಸಿಟಿ ಆಸ್ಪತ್ರೆಯಲ್ಲಿ 40 ವರ್ಷದ ಪುರುಷ ಹಾಗೂ ಮೂತ್ರಪಿಂಡ ವೈಫಲ್ಯವಿರುವ 74 ವರ್ಷದ ರೋಗಿಗೆ ಮಾನೊಕ್ಲೊನಲ್ ಆಂಟಿಬಾಡಿಗಳನ್ನು ನೀಡಲಾಗಿದೆ. ಮಧುಮೇಹ, ಹೈಪರ್‌ಟೆನ್ಷನ್ ಮತ್ತು ಫಿಲಾರಿಯಾಸಿಸ್ ಸಮಸ್ಯೆಗಳಿಂದ ಬಳಲುತ್ತಿರುವ 79 ವರ್ಷದ ರೋಗಿಗೆ ಚೆಂಬೂರ್‌ನ ಸುರಾನಾ ಆಸ್ಪತ್ರೆಯಲ್ಲಿ IV ಶಾಟ್ ಲಸಿಕೆಯನ್ನು ನೀಡಲಾಗಿದೆ. ಪ್ರತಿ ಶಾಟ್‌ಗೆ ಸುಮಾರು 60,000 ರೂ ವೆಚ್ಚವಾಗುತ್ತದೆ. ಔಷಧ ತಯಾರಕ ಕಂಪೆನಿ ರೋಚೆ, ತನ್ನ ಆಂಟಿಬಾಡಿ ಕಾಕ್‌ಟೇಲ್ ಔಷಧದ ಆವೃತ್ತಿಯನ್ನು ಭಾರತದಲ್ಲಿ ಸೋಮವಾರ ಬಿಡುಗಡೆ ಮಾಡಿತ್ತು. ಇದು ಲಘುದಿಂದ ಮಧ್ಯಮ ಲಕ್ಷಣದ ರೋಗಿಗಳಲ್ಲಿ ಅಪಾಯಕಾರಿ ಕಾಯಿಲೆ ಉಂಟಾಗುವ ಸಾಧ್ಯತೆ ಇರುವಂತಹ ತುರ್ತು ಸನ್ನಿವೇಶದಲ್ಲಿ ಮಾತ್ರ ಬಳಕೆಗಾಗಿ ಇದನ್ನು ನಿರ್ಬಂಧಿಸಲಾಗಿದೆ. 2020ರ ಅಕ್ಟೋಬರ್‌ನಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್ 19 ಸೋಂಕಿಗೆ ಒಳಗಾಗಿದ್ದ ಸಂದರ್ಭದಲ್ಲಿ ಅದರಿಂದ ಚೇತರಿಸಿಕೊಳ್ಳಲು ಅವರು ಈ ಕಾಕ್‌ಟೇಲ್ ಆಂಟಿಬಾಡಿಯ ಔಷಧವನ್ನು ಪಡೆದುಕೊಂಡಿದ್ದರು. ಆರಂಭದಲ್ಲಿ ಈ ಚಿಕಿತ್ಸೆ ಪಡೆದ ಕೆಲವೇ ರೋಗಿಗಳಲ್ಲಿ ಟ್ರಂಪ್ ಕೂಡ ಒಬ್ಬರಾಗಿದ್ದರು. ಮಾನೊಕ್ಲೊನಲ್ ಆಂಟಿಬಾಡಿಗಳನ್ನು ಪ್ಲಾಸ್ಮಾ ಕೋವಿಡ್ ಚಿಕಿತ್ಸೆಗೆ ಪರ್ಯಾಯವಾಗಿ ಬಳಸಲಾಗುತ್ತಿದೆ. ಆದರೆ ಇದು ದುಬಾರಿ ಚಿಕಿತ್ಸೆಯಾಗಿರುವುದರಿಂದ ಜನಸಾಮಾನ್ಯರಿಗೆ ಸುಲಭವಾಗಿ ಎಟುಕುವುದಿಲ್ಲ. ಅಲ್ಲದೆ, ಹೊಸ ರೂಪಾಂತರಿಗಳ ವಿರುದ್ಧ ಇದು ಯಾವಾಗಲೂ ಪರಿಣಾಮಕಾರಿಯಾಗುವುದಿಲ್ಲ ಎಂದು ಬ್ರಿಟನ್‌ನ ಅಧ್ಯಯನವೊಂದು ತಿಳಿಸಿದೆ.