ಟ್ವಿಟರ್ ನ ಲೋಗೋ ಬದಲಾವಣೆಗೆ ಕಾರಣವೇನು?: ಮಸ್ಕ್ ಹಳೆಯ ಟ್ವೀಟ್ ಬಿಚ್ಚಿಡುತ್ತಿರುವ ಮಾಹಿತಿ ಇಂತಿದೆ...

ಎಲಾನ್ ಮಸ್ಕ್ ಟ್ವಿಟರ್ ನ ಲೋಗೋವನ್ನು ಬದಲಾವಣೆ ಮಾಡಿದ್ದು, ಸಾಮಾಜಿಕ ಜಾಲತಾಣಗಳ ಲೋಕದಲ್ಲಿ ದೊಡ್ಡ ಸುದ್ದಿಯಾಗಿ ಚರ್ಚೆಯಲ್ಲಿದೆ. ವಾಷಿಂಗ್ ಟನ್: ಎಲಾನ್ ಮಸ್ಕ್ ಟ್ವಿಟರ್ ನ ಲೋಗೋವನ್ನು ಬದಲಾವಣೆ ಮಾಡಿದ್ದು, ಸಾಮಾಜಿಕ ಜಾಲತಾಣಗಳ ಲೋಕದಲ್ಲಿ ದೊಡ್ಡ ಸುದ್ದಿಯಾಗಿ ಚರ್ಚೆಯಲ್ಲಿದೆ.
ಅತ್ಯಂತ ಜನಪ್ರಿಯತೆ, ಬ್ರಾಂಡ್ ಆಗಿದ್ದ ಟ್ವಿಟರ್ ನ ಪಕ್ಷಿಯ ಲೋಗೋವನ್ನು ಡಾಗ್ ಮೀಮ್ (ನಾಯಿ) ಲೋಗೋದೊಂದಿಗೆ ಬದಲಾಯಿಸಿದ್ದು, ಏಕಾ ಏಕಿ ಬದಲಾವಣೆಯಾಗಿದ್ದರ ಹಿಂದಿನ ಕಾರಣವೇನು ಎಂಬ ಬಗ್ಗೆ ಜನ ತಲೆಕೆಡಿಸಿಕೊಂಡಿದ್ದಾರೆ. ಈ ನಡುವೆ ಎಲಾನ್ ಮಸ್ಕ್ ನಿರ್ಧಾರದ ಹಿಂದಿರುವ ಕಾರಣದ ಬಗ್ಗೆ ಹಲವಾರು ರೀತಿಯ ವಿಶ್ಲೇಷಣೆಗಳು ಪ್ರಕಟಗೊಳ್ಳುತ್ತಿದೆ. ಆ ಪೈಕಿ ಗಮನ ಸೆಳೆಯುತ್ತಿರುವುದು ಟ್ವಿಟರ್ ಸಂಸ್ಥೆ ಖರೀದಿಗೂ ಮುನ್ನ ಮಸ್ಕ್ ಮಾಡಿರುವ ಹಳೆಯ ಟ್ವೀಟ್.
As promised pic.twitter.com/Jc1TnAqxAV
— Elon Musk (@elonmusk) April 3, 2023
ಟ್ವಿಟರ್ ಲೋಗೋ ಬದಲಾವಣೆ ಜಾರಿಯಾಗಿರುವ ಮಾಹಿತಿಯನ್ನು ಹಳೆಯ ಟ್ವೀಟ್ ನ ಸ್ಕ್ರೀನ್ ಶಾಟ್ ಮೂಲಕ ಘೋಷಿಸಿರುವ ಎಲಾನ್ ಮಸ್ಕ್, ಈ ಹಿಂದೆ ನೀಡಿದ್ದ ಭರವಸೆಯಂತೆಯೇ ಲೋಗೋವನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಹಿಂದೊಮ್ಮೆ ಟ್ವೀಟ್ ಮಾಡಿದ್ದ ಎಲಾನ್ ಮಸ್ಕ್, ಮತ್ತೊಂದು ಸಾಮಾಜಿಕ ಜಾಲತಾಣದ ಅವಶ್ಯಕತೆ ಇದೆಯೇ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಚೇರ್ ಮನ್ ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್ ಬಳಕೆದಾರರೊಬ್ಬರು ಸಲಹೆ ನೀಡಿ, ಟ್ವಿಟರ್ ನ್ನು ಖರೀದಿ ಮಾಡಿ ನಾಯಿಯ ಲೋಗೋ ಹಾಕಿ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಸ್ಕ್ ಹಾಗೆ ಆದಲ್ಲಿ ಅದು ಅತ್ಯುತ್ತಮ ಎಂಬ ಅರ್ಥದ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಟ್ವಿಟ್ಟರ್ ಲೋಗೋ ಬದಲಿಸಿದ ಎಲಾನ್ ಮಸ್ಕ್: ನೀಲಿ ಹಕ್ಕಿ ಬದಲು ಬಂತು ಡಾಗ್!
ಈಗ ಆ ಲೋಗೋ ಬದಲಾವಣೆ ಹಿನ್ನೆಲೆಯಲ್ಲಿ ಮಸ್ಕ್, ಹಳೆಯ ಸಂಭಾಷಣೆಯ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ಭರವಸೆ ನೀಡಿದ್ದಂತೆಯೇ ಮಾಡಲಾಗಿದೆ ಎಂದು ಹೇಳಿದ್ದಾರೆ.