ಟ್ವಿಟ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೇಂದ್ರಕ್ಕಿದೆ: ದಿಲ್ಲಿ ಹೈಕೋರ್ಟ್

ನೂತನ ಐಟಿ ನಿಮಯಗಳ ಅನುಸಾರ ನಡೆದುಕೊಳ್ಳಲು ಟ್ವಿಟ್ಟರ್ ವಿಫಲವಾದರೆ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರಕಾರ ಮುಕ್ತವಾಗಿದೆ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ. ಇದು ಟ್ವಿಟ್ಟರ್‌ಗೆ ಎಚ್ಚರಿಕೆಯ ಸೂಚನೆಯಾಗಿದೆ.

ಟ್ವಿಟ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೇಂದ್ರಕ್ಕಿದೆ: ದಿಲ್ಲಿ ಹೈಕೋರ್ಟ್
Linkup
ಹೊಸದಿಲ್ಲಿ: ನೂತನ ಐಟಿ ನಿಯಮಗಳನ್ನು ಉಲ್ಲಂಘಿಸಿದರೆ ಅದಕ್ಕೆ ಅನುಗುಣವಾಗಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರಕಾರಕ್ಕೆ ಅಧಿಕಾರವಿದೆ ಎಂದು ಗುರುವಾರ ಹೇಳಿದೆ. ಐಟಿ ನಿಯಮಗಳಿಗೆ ಅನುಸಾರ ನೇಮಿಸಬೇಕಾದ ಅಧಿಕಾರಿಗಳನ್ನು ಮಧ್ಯಂತರ ಅವಧಿಗೆ ನೇಮಕ ಮಾಡುವ ಟ್ವಿಟ್ಟರ್ ಕ್ರಮವನ್ನು ಕೂಡ ಅದು ಪ್ರಶ್ನಿಸಿದೆ. ಟ್ವಿಟ್ಟರ್ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪದ ಕುರಿತಾದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೇಖಾ ಪಲ್ಲಿ, ಸಂಬಂಧಿತ ಅಧಿಕಾರಿಯ ನೋಟರಿಯುಳ್ಳ ಪ್ರತಿಗಳನ್ನು ಸಲ್ಲಿಸಲು ಟ್ವಿಟ್ಟರ್‌ಗೆ ಎರಡು ವಾರಗಳ ಕಾಲಾವಕಾಶ ನೀಡಿದರು. ಟ್ವಿಟ್ಟರ್ ಸಲ್ಲಿಸಬೇಕಿರುವ ಅಫಿಡವಿಟ್‌ನಲ್ಲಿ ಅದಾಗಲೇ ಅಧಿಕಾರಿಯನ್ನು ನೇಮಿಸುವ ಪ್ರಕ್ರಿಯೆ ಆರಂಭಿಸಿರುವ ಹಾಗೂ ಯಾರು ನೇಮಕವಾಗುತ್ತಿದ್ದಾರೆ ಎಂಬ ವಿವರಗಳೂ ಇರಬೇಕು ಎಂದು ಸೂಚನೆ ನೀಡಿದ್ದಾರೆ. 'ನಿಯಮಗಳ ಪಾಲನೆಯನ್ನು ತೋರಿಸುವುದಕ್ಕಾಗಿ ಟ್ವಿಟ್ಟರ್ ತನ್ನ ಅಫಿಡವಿಟ್‌ಗಳನ್ನು ಸಲ್ಲಿಸಲು ಮಾತ್ರವೇ ಈ ನ್ಯಾಯಾಲಯ ಸಮಯ ನೀಡುತ್ತಿದೆ. ನಿಯಮಗಳ ಯಾವುದೇ ಉಲ್ಲಂಘನೆಯಾದರೆ ಅದಕ್ಕೆ ಅನುಗುಣವಾಗಿ ಟ್ವಿಟ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಕ್ತವಾಗಿದೆ. ಈ ವಿಚಾರದಲ್ಲಿ ಟ್ವಿಟ್ಟರ್ ಕಾನೂನು ರಕ್ಷಣೆಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ' ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಮೇ 26ರಿಂದ ಜೂನ್ 25ರ ಅವಧಿಯ ಮೊದಲ ಅನುಸರಣಾ ವರದಿಯನ್ನು ಜುಲೈ 11ಕ್ಕಿಂತ ತಡವಾಗದಂತೆ ಸಲ್ಲಿಸಲಾಗುವುದಾಗಿ ಟ್ವಿಟ್ಟರ್ ತಿಳಿಸಿದೆ.