ಚಿಂಪಾಂಜಿ ಜೊತೆ ಅಫೇರ್ ಇಟ್ಟುಕೊಂಡಿದ್ದೇನೆ ಎಂದ ಮಹಿಳೆಗೆ ಪ್ರವೇಶ ನಿಷೇಧ ಮಾಡಿದ ಮೃಗಾಲಯ:

ಚಿಂಪಾಂಜಿ ಜೊತೆ ಅಫೇರ್ ಇಟ್ಟುಕೊಂಡಿದ್ದೇನೆ ಎಂದ ಮಹಿಳೆಗೆ ಪ್ರವೇಶ ನಿಷೇಧ ಮಾಡಿದ ಮೃಗಾಲಯ:
Linkup

ತಮಗೆ ಇಷ್ಟವಿಲ್ಲದವನೊಂದಿಗೆ ತಮ್ಮ ಮಗಳು ಓಡಾಡುತ್ತಿದ್ದರೆ ಹೆತ್ತವರು ಇಬ್ಬರೂ ಪ್ರೇಮಿಗಳನ್ನು ಬೇರೆ ಮಾಡುವ ಘಟನೆಗಳು ನಮ್ಮ ನಡುವೆ ಜರುಗುತ್ತಲೇ ಇರುತ್ತದೆ. ಆದರೆ ಇಲ್ಲೊಂದು ವಿಚಿತ್ರ ಕಥಾನಕದಲ್ಲಿ ಮೃಗಾಲಯದ ಆಡಳಿತ ಮಂಡಳಿ ಮಹಿಳೆಯೊಬ್ಬಳನ್ನು ಗಂಡು ಚಿಂಪಾಂಜಿಯಿಂದ ದೂರ ಮಾಡಿದೆ. ಈ ಘಟನೆ ನಡೆದಿರುವುದು ಬೆಲ್ಜಿಯಂನಲ್ಲಿ. ಮಹಿಳೆಗೆ ಪ್ರವೇಶ ನಿಷೇಧಿಸಿರುವ ಮೃಗಾಲಯ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಮಹಿಳೆ ಒಂದು ಚಿಂಪಾಂಜಿಯೊಂದಿಗೆ ಹೆಚ್ಚು ಸಲುಗೆಯಿಂದ ಇದ್ದಿದ್ದೇ ನಿಷೇಧಕ್ಕೆ ಕಾರಣ ಎಂದು ಮೃಗಾಲಯ ಅಧಿಕಾರಿಗಳು ತಿಳಿಸಿದ್ದಾರೆ. 

ಅಡೀ ಟಿಮ್ಮರ್ ಮ್ಯಾನ್ಸ್ ಎನ್ನುವ ಮಹಿಳೆ ಚಿಟಾ ಎನ್ನುವ ಹೆಸರಿನ 38 ವರ್ಷದ ಗಂಡು ಚಿಂಪಾಂಜಿಯನ್ನು ನೋಡಲು ಕಳೆದ 4 ವರ್ಷಗಳಿಂದ ಸತತವಾಗಿ ಬರುತ್ತಿದ್ದಳು. ಆಕೆ ತನ್ನ ಹಾಗೂ ಚಿಟಾ ಚಿಂಪಾಂಜಿ ನಡುವೆ ಉತ್ತಮ ಬಾಅಂಧವ್ಯ ಬೆಳೆದಿರುವುದಾಗಿ ಹೇಳಿಕೊಂಡಿದ್ದಳು. ಅಷ್ಟಕ್ಕೆ ಸುಮ್ಮನಾಗದ ಅಡೀ ತಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವುದಾಗಿಯೂ  ತಾವು ಅಫೇರ್ ಹೊಂದಿರುವುದಾಗಿಯೂ ಹೇಳಿಕೆ ನೀಡಿದ್ದಳು. 

ಅಚ್ಚರಿಯ ಸಂಗತಿ ಎಂದರೆ ಚಿಟಾ ಚಿಂಪಾಂಜಿಯನ್ನು ಅದರ ಸಹವರ್ತಿಗಳು ಗುಂಪಿನಿಂದ ದೂರ ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದಕ್ಕೆ ಚಿಂಪಾಂಜಿ ಈ ಮಹ್ಹಿಳೆಯನ್ನು ಹಚ್ಚಿಕೊಂಡಿರುವುದ ಕಾರಣ ಇರಬಹುದು ಎಂದು ಶಂಕಿಸಿದ್ದಾರೆ. ಹೀಗಾಗಿ ಚಿಟಾ ಚಿಂಪಾಂಜಿಯ ಸುರಕ್ಷತೆ ಸಲುವಾಗಿ ಆ ಮಹಿಳೆ ಆತನಿಂದ ದೂರ ಇರುವುದು ಒಳ್ಳೆಯದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಕೇಳಿ ಮಹಿಳೆ ವಿರಹ ವೇದನೆಯಿಂದ ಅತ್ತಿರುವ ದೃಶ್ಯಾವಳಿ ವೈರಲ್ ಆಗಿದೆ.