ಗಾಜಾ ಪಟ್ಟಿ ಮೇಲೆ ವೈಮಾನಿಕ ದಾಳಿ ನಡೆಸಿದರೆ ಇಸ್ರೇಲ್‌ ಒತ್ತೆಯಾಳುಗಳ ಹತ್ಯೆ: ಹಮಾಸ್ ಬೆದರಿಕೆ

ಇಸ್ರೇಲ್ ಸೇನೆ ಪೂರ್ವ ಎಚ್ಚರಿಕೆ ನೀಡದೆ ಗಾಜಾ ಪಟ್ಟಿಯ ನಿವಾಸಿಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ಹಮಾಸ್ ಸೋಮವಾರ ಬೆದರಿಕೆ ಹಾಕಿದೆ. ಗಾಜಾ ಸಿಟಿ: ಇಸ್ರೇಲ್ ಸೇನೆ ಪೂರ್ವ ಎಚ್ಚರಿಕೆ ನೀಡದೆ ಗಾಜಾ ಪಟ್ಟಿಯ ನಿವಾಸಿಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ಹಮಾಸ್ ಸೋಮವಾರ ಬೆದರಿಕೆ ಹಾಕಿದೆ. ಯಾವುದೇ ಎಚ್ಚರಿಕೆ ನೀಡದೇ ನಮ್ಮ ಜನರನ್ನು ಗುರಿಯಾಸಿಕೊಂಡು ನಡೆಸುವ ದಾಳಿಗೆ ಪ್ರತಿಯಾಗಿ, ಒತ್ತೆಯಾಳುಗಳಾಗಿರುವ ಇಸ್ರೇಲಿನ ಒಬ್ಬೊಬ್ಬ ನಾಗರಿಕರನ್ನು ಹತ್ಯೆ ಮಾಡಲಾಗುವುದು ಎಂದು ಹಮಾಸ್‌ನ ಸಶಸ್ತ್ರ ವಿಭಾಗವಾದ ಎಝೆಡಿನ್ ಅಲ್-ಕಸ್ಸೆಮ್ ಬ್ರಿಗೇಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನು ಓದಿ: ಗಾಜಾ ಮುತ್ತಿಗೆಗೆ ಇಸ್ರೇಲ್ ಆದೇಶ: 2.3 ಮಿಲಿಯನ್ ಜನರಿಗೆ ವಿದ್ಯುತ್‌, ಆಹಾರ, ನೀರು ಪೂರೈಕೆ ಸ್ಥಗಿತ​ "ಶತ್ರುಗಳಿಗೆ(ಇಸ್ರೇಲ್) ಮಾನವೀಯತೆ ಮತ್ತು ನೈತಿಕತೆಯ ಭಾಷೆ ಅರ್ಥವಾಗುವುದಿಲ್ಲ. ಆದ್ದರಿಂದ ನಾವು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸುತ್ತೇವೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಳೆದ ಮೂರು ದಿನಗಳಿಂದ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸುತ್ತಿದೆ. ಹಮಾಸ್ ಬಂಡುಕೋರರು, ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಆಶ್ಚರ್ಯಕರ ರೀತಿಯಲ್ಲಿ ದಾಳಿ ಮಾಡಿದ ಬಳಿಕ, ಸೇನಾ ಕಾರ್ಯಾಚರಣೆಯನ್ನು ಇಸ್ರೇಲ್ ತೀವ್ರಗೊಳಿಸಿದೆ.

ಗಾಜಾ ಪಟ್ಟಿ ಮೇಲೆ ವೈಮಾನಿಕ ದಾಳಿ ನಡೆಸಿದರೆ ಇಸ್ರೇಲ್‌ ಒತ್ತೆಯಾಳುಗಳ ಹತ್ಯೆ: ಹಮಾಸ್ ಬೆದರಿಕೆ
Linkup
ಇಸ್ರೇಲ್ ಸೇನೆ ಪೂರ್ವ ಎಚ್ಚರಿಕೆ ನೀಡದೆ ಗಾಜಾ ಪಟ್ಟಿಯ ನಿವಾಸಿಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ಹಮಾಸ್ ಸೋಮವಾರ ಬೆದರಿಕೆ ಹಾಕಿದೆ. ಗಾಜಾ ಸಿಟಿ: ಇಸ್ರೇಲ್ ಸೇನೆ ಪೂರ್ವ ಎಚ್ಚರಿಕೆ ನೀಡದೆ ಗಾಜಾ ಪಟ್ಟಿಯ ನಿವಾಸಿಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ಹಮಾಸ್ ಸೋಮವಾರ ಬೆದರಿಕೆ ಹಾಕಿದೆ. ಯಾವುದೇ ಎಚ್ಚರಿಕೆ ನೀಡದೇ ನಮ್ಮ ಜನರನ್ನು ಗುರಿಯಾಸಿಕೊಂಡು ನಡೆಸುವ ದಾಳಿಗೆ ಪ್ರತಿಯಾಗಿ, ಒತ್ತೆಯಾಳುಗಳಾಗಿರುವ ಇಸ್ರೇಲಿನ ಒಬ್ಬೊಬ್ಬ ನಾಗರಿಕರನ್ನು ಹತ್ಯೆ ಮಾಡಲಾಗುವುದು ಎಂದು ಹಮಾಸ್‌ನ ಸಶಸ್ತ್ರ ವಿಭಾಗವಾದ ಎಝೆಡಿನ್ ಅಲ್-ಕಸ್ಸೆಮ್ ಬ್ರಿಗೇಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನು ಓದಿ: ಗಾಜಾ ಮುತ್ತಿಗೆಗೆ ಇಸ್ರೇಲ್ ಆದೇಶ: 2.3 ಮಿಲಿಯನ್ ಜನರಿಗೆ ವಿದ್ಯುತ್‌, ಆಹಾರ, ನೀರು ಪೂರೈಕೆ ಸ್ಥಗಿತ​ "ಶತ್ರುಗಳಿಗೆ(ಇಸ್ರೇಲ್) ಮಾನವೀಯತೆ ಮತ್ತು ನೈತಿಕತೆಯ ಭಾಷೆ ಅರ್ಥವಾಗುವುದಿಲ್ಲ. ಆದ್ದರಿಂದ ನಾವು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸುತ್ತೇವೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಳೆದ ಮೂರು ದಿನಗಳಿಂದ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸುತ್ತಿದೆ. ಹಮಾಸ್ ಬಂಡುಕೋರರು, ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಆಶ್ಚರ್ಯಕರ ರೀತಿಯಲ್ಲಿ ದಾಳಿ ಮಾಡಿದ ಬಳಿಕ, ಸೇನಾ ಕಾರ್ಯಾಚರಣೆಯನ್ನು ಇಸ್ರೇಲ್ ತೀವ್ರಗೊಳಿಸಿದೆ. ಗಾಜಾ ಪಟ್ಟಿ ಮೇಲೆ ವೈಮಾನಿಕ ದಾಳಿ ನಡೆಸಿದರೆ ಇಸ್ರೇಲ್‌ ಒತ್ತೆಯಾಳುಗಳ ಹತ್ಯೆ: ಹಮಾಸ್ ಬೆದರಿಕೆ