ಕರ್ನಾಟಕದ ತೆರಿಗೆದಾರರ ಹಣ ತೆಲಂಗಾಣ ಪತ್ರಿಕೆಗಳಿಗೆ ಜಾಹಿರಾತು: ಕಾಂಗ್ರೆಸ್‌ ಢೋಂಗಿತನ ಕಳಚುತ್ತಿದೆ- ಬಿಜೆಪಿ

ಸಿದ್ದರಾಮಯ್ಯ ಸರ್ಕಾರ ಕರ್ನಾಟಕದ ತೆರಿಗೆದಾರರ ಹಣವನ್ನು ತೆಲಂಗಾಣ ಪತ್ರಿಕೆಗಳಿಗೆ ಜಾಹಿರಾತು ನೀಡುವ ಮೂಲಕ ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಕರ್ನಾಟಕದ ತೆರಿಗೆದಾರರ ಹಣವನ್ನು ತೆಲಂಗಾಣ ಪತ್ರಿಕೆಗಳಿಗೆ ಜಾಹಿರಾತು ನೀಡುವ ಮೂಲಕ ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ಸಿ.ಎಂ ಸಿದ್ದರಾಮಯ್ಯ ತೆಲಂಗಾಣದಲ್ಲಿ ಮತದಾರರಿಗೆ ಅಮಿಷವೊಡ್ಡುವ ಕಾನೂನುಬಾಹಿರ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಚುನಾವಣೆಗೂ ಮುನ್ನಾ ಸುಳ್ಳು ಹೇಳಿಕೆ ನೀಡಲು ತೆರಿಗೆದಾರರ ಹಣದಿಂದ ಹಾಕಲಾದ ಕಾಂಗ್ರೆಸ್ ಜಾಹಿರಾತುಗಳ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ. ಕಾಂಗ್ರೆಸ್ ಕರ್ನಾಟಕಕ್ಕೆ ಅವಮಾನ ಎಂದು ಟೀಕಾ ಪ್ರಹಾರ ನಡೆಸಿದೆ.  ಇದನ್ನೂ ಓದಿ: ತೆಲಂಗಾಣ ಪತ್ರಿಕೆಗಳಲ್ಲಿ ಗ್ಯಾರಂಟಿ ಬಗ್ಗೆ ಜಾಹಿರಾತು: ಕರ್ನಾಟಕ ಸರ್ಕಾರಕ್ಕೆ ಚುನಾವಣಾ ಆಯೋಗ ನೋಟಿಸ್ C.M @siddaramaiah violates MCC by indulging in illegal practises of bribing voters in Telangana! EC takes cognizance of @INCKarnataka's paper ads put out on taxpayers' money to make false claims ahead of elections. Congress is a disgrace to Karnataka! https://t.co/x1fkcAFqKX — BJP Karnataka (@BJP4Karnataka) November 27, 2023 ಕರ್ನಾಟಕವನ್ನು ಕಾಂಗ್ರೆಸ್ ತನ್ನ ಪಾಲಿನ ATM ಮಾಡಿಕೊಂಡಿದೆ‌ ಎಂಬುದು ವೃಥಾ ಆರೋಪವಲ್ಲ. ಈ ಬಗ್ಗೆ ಕಣ್ಣಿಗೆ ಕಾಣುವ ಸಾಕ್ಷ್ಯಗಳೇ ಇವೆ.ತೆಲಂಗಾಣ ಚುನಾವಣೆಗೆ ಪ್ರಚಾರಕ್ಕಾಗಿ @INCKarnataka ನಮ್ಮ ರಾಜ್ಯದ ಸರ್ಕಾರಿ ಖಜಾನೆಯಿಂದ ಖರ್ಚು ಮಾಡಿ, ರಾಜ್ಯ ಸರ್ಕಾರದ ಹೆಸರಿನಲ್ಲಿ ತೆಲಂಗಾಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಕಾಂಗ್ರೆಸ್… https://t.co/56MKEOcRr9— BJP Karnataka (@BJP4Karnataka) November 27, 2023 ಮತ್ತೊಂದೆಡೆ ಟ್ವೀಟ್ ಮಾಡಿರುವ ಬಿಜೆಪಿ ಹಿರಿಯ ನಾಯಕ ಅರವಿಂದ್ ಬೆಲ್ಲದ್, ಕರ್ನಾಟಕದ ತೆರಿಗೆದಾರರ ಹಣವನ್ನು ತೆಲಂಗಾಣ ಪತ್ರಿಕೆಗಳಿಗೆ ಜಾಹೀರಾತು ನೀಡಲು ಪೋಲು ಮಾಡಿದ ಕರ್ನಾಟಕ ಸರ್ಕಾರಕ್ಕೆ ಚುನಾವಣೆ ಆಯೋಗ ಚಾಟಿ ಏಟು ನೀಡಿದೆ. ಗ್ಯಾರಂಟಿಗಳನ್ನು ನೀಡಲಾಗದವರು ಹೊಗಳುಭಟ್ಟರಂತೆ ತಮ್ಮನ್ನು ತಾವು ಪತ್ರಿಕೆಗಳಲ್ಲಿ ಹೊಗಳಿಸಿಕೊಂಡಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಕಾಂಗ್ರೆಸ್‌ ಪಕ್ಷದ ಢೋಂಗಿತನ ಕಳಚುತ್ತಿದೆ ಎಂದು ಟೀಕಿಸಿದ್ದಾರೆ.  ಕರ್ನಾಟಕದ ತೆರಿಗೆದಾರರ ಹಣವನ್ನು ತೆಲಂಗಾಣ ಪತ್ರಿಕೆಗಳಿಗೆ ಜಾಹೀರಾತು ನೀಡಲು ಪೋಲು ಮಾಡಿದ ಕರ್ನಾಟಕ @INCKarnataka ಸರ್ಕಾರಕ್ಕೆ ಚುನಾವಣೆ ಆಯೋಗ ಚಾಟಿ ಏಟು ನೀಡಿದೆ. ಗ್ಯಾರಂಟಿಗಳನ್ನು ನೀಡಲಾಗದವರು ಹೊಗಳುಭಟ್ಟರಂತೆ ತಮ್ಮನ್ನು ತಾವು ಪತ್ರಿಕೆಗಳಲ್ಲಿ ಹೊಗಳಿಸಿಕೊಂಡಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಕಾಂಗ್ರೆಸ್‌… pic.twitter.com/JfwJpGagXl — Arvind Bellad (@BelladArvind) November 27, 2023

ಕರ್ನಾಟಕದ ತೆರಿಗೆದಾರರ ಹಣ ತೆಲಂಗಾಣ ಪತ್ರಿಕೆಗಳಿಗೆ ಜಾಹಿರಾತು: ಕಾಂಗ್ರೆಸ್‌ ಢೋಂಗಿತನ ಕಳಚುತ್ತಿದೆ- ಬಿಜೆಪಿ
Linkup
ಸಿದ್ದರಾಮಯ್ಯ ಸರ್ಕಾರ ಕರ್ನಾಟಕದ ತೆರಿಗೆದಾರರ ಹಣವನ್ನು ತೆಲಂಗಾಣ ಪತ್ರಿಕೆಗಳಿಗೆ ಜಾಹಿರಾತು ನೀಡುವ ಮೂಲಕ ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಕರ್ನಾಟಕದ ತೆರಿಗೆದಾರರ ಹಣವನ್ನು ತೆಲಂಗಾಣ ಪತ್ರಿಕೆಗಳಿಗೆ ಜಾಹಿರಾತು ನೀಡುವ ಮೂಲಕ ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ಸಿ.ಎಂ ಸಿದ್ದರಾಮಯ್ಯ ತೆಲಂಗಾಣದಲ್ಲಿ ಮತದಾರರಿಗೆ ಅಮಿಷವೊಡ್ಡುವ ಕಾನೂನುಬಾಹಿರ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಚುನಾವಣೆಗೂ ಮುನ್ನಾ ಸುಳ್ಳು ಹೇಳಿಕೆ ನೀಡಲು ತೆರಿಗೆದಾರರ ಹಣದಿಂದ ಹಾಕಲಾದ ಕಾಂಗ್ರೆಸ್ ಜಾಹಿರಾತುಗಳ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ. ಕಾಂಗ್ರೆಸ್ ಕರ್ನಾಟಕಕ್ಕೆ ಅವಮಾನ ಎಂದು ಟೀಕಾ ಪ್ರಹಾರ ನಡೆಸಿದೆ.  ಇದನ್ನೂ ಓದಿ: ತೆಲಂಗಾಣ ಪತ್ರಿಕೆಗಳಲ್ಲಿ ಗ್ಯಾರಂಟಿ ಬಗ್ಗೆ ಜಾಹಿರಾತು: ಕರ್ನಾಟಕ ಸರ್ಕಾರಕ್ಕೆ ಚುನಾವಣಾ ಆಯೋಗ ನೋಟಿಸ್ ಮತ್ತೊಂದೆಡೆ ಟ್ವೀಟ್ ಮಾಡಿರುವ ಬಿಜೆಪಿ ಹಿರಿಯ ನಾಯಕ ಅರವಿಂದ್ ಬೆಲ್ಲದ್, ಕರ್ನಾಟಕದ ತೆರಿಗೆದಾರರ ಹಣವನ್ನು ತೆಲಂಗಾಣ ಪತ್ರಿಕೆಗಳಿಗೆ ಜಾಹೀರಾತು ನೀಡಲು ಪೋಲು ಮಾಡಿದ ಕರ್ನಾಟಕ ಸರ್ಕಾರಕ್ಕೆ ಚುನಾವಣೆ ಆಯೋಗ ಚಾಟಿ ಏಟು ನೀಡಿದೆ. ಗ್ಯಾರಂಟಿಗಳನ್ನು ನೀಡಲಾಗದವರು ಹೊಗಳುಭಟ್ಟರಂತೆ ತಮ್ಮನ್ನು ತಾವು ಪತ್ರಿಕೆಗಳಲ್ಲಿ ಹೊಗಳಿಸಿಕೊಂಡಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಕಾಂಗ್ರೆಸ್‌ ಪಕ್ಷದ ಢೋಂಗಿತನ ಕಳಚುತ್ತಿದೆ ಎಂದು ಟೀಕಿಸಿದ್ದಾರೆ.  ಕರ್ನಾಟಕದ ತೆರಿಗೆದಾರರ ಹಣ ತೆಲಂಗಾಣ ಪತ್ರಿಕೆಗಳಿಗೆ ಜಾಹಿರಾತು: ಕಾಂಗ್ರೆಸ್‌ ಢೋಂಗಿತನ ಕಳಚುತ್ತಿದೆ- ಬಿಜೆಪಿ