ಕೇಂದ್ರದ ಮಾಜಿ ಸಚಿವ ಪಿಆರ್ ಕುಮಾರಮಂಗಲಂ ಪತ್ನಿ ದಿಲ್ಲಿಯ ನಿವಾಸದಲ್ಲಿ ಹತ್ಯೆ

ಕೇಂದ್ರದ ಸಚಿವರಾಗಿದ್ದ ದಿವಂಗತ ಪಿಆರ್ ಕುಮಾರಮಂಗಲಂ ಅವರ ಪತ್ನಿ ಕಿಟ್ಟಿ ಕುಮಾರಮಂಗಲಂ ಅವರನ್ನು ಮಂಗಳವಾರ ರಾತ್ರಿ ದಿಲ್ಲಿಯ ವಸಂತ ವಿಹಾರದಲ್ಲಿನ ನಿವಾಸದಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಪಿಆರ್ ಕುಮಾರಮಂಗಲಂ ಪತ್ನಿ ದಿಲ್ಲಿಯ ನಿವಾಸದಲ್ಲಿ ಹತ್ಯೆ
Linkup
ಹೊಸದಿಲ್ಲಿ: ಕೇಂದ್ರದ ಮಾಜಿ ಪಿಆರ್ ಅವರ ಪತ್ನಿ ಕಿಟ್ಟಿ ಕುಮಾರಮಂಗಲಂ ಅವರನ್ನು ನೈಋತ್ಯ ದಿಲ್ಲಿಯ ವಸಂತ ವಿಹಾರದಲ್ಲಿರುವ ಅವರ ನಿವಾಸದಲ್ಲಿ ಮಂಗಳವಾರ ರಾತ್ರಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಂತಕರ ಪತ್ತೆಗೆ ವ್ಯಾಪಕ ಕಾರ್ಯಾಚರಣೆ ನಡೆಸಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ. ಇನ್ನಿಬ್ಬರಿಗೆ ಶೋಧ ಮುಂದುವರಿದಿದೆ ಎಂದು ನೈಋತ್ಯ ವಿಭಾಗದ ಡಿಸಿಪಿ ತಿಳಿಸಿದ್ದಾರೆ. ಮಂಗಳವಾರ ರಾತ್ರಿ 9ರ ಸುಮಾರಿಗೆ ಕಿಟ್ಟಿ ಕುಮಾರಮಂಗಲಂ (67) ಅವರು ಮನೆಯಲ್ಲಿ ಮನೆಗೆಲಸದಾಕೆ ಜತೆಗೆ ಇದ್ದರು. ಅವರ ಬಟ್ಟೆಗಳನ್ನು ಸ್ವಚ್ಚಗೊಳಿಸುವ ಪರಿಚಿತ ಧೋಬಿ, ಇನ್ನಿಬ್ಬರೊಂದಿಗೆ ಮನೆಯೊಳಗೆ ನುಗ್ಗಿದ್ದ ಎಂದು ಮನೆಗೆಲಸದ ಸಹಾಯಕಿ ತಿಳಿಸಿದ್ದಾಳೆ. ಧೋಬಿಯು ತನ್ನನ್ನು ಕೊಠಡಿಯೊಂದರಲ್ಲಿ ಕಟ್ಟಿಹಾಕಿ, ಕಿಟ್ಟಿ ಅವರ ಮೇಲೆ ಹಲ್ಲೆ ನಡೆಸಿ ಮಾಡಿದ್ದಾನೆ. ದಾಳಿಯ ಸೂಚನೆ ಅರಿತ ಕಿಟ್ಟಿ ಅವರು ಅಲಾರಂ ಸ್ವಿಚ್ ಒತ್ತಿದ್ದರು. ಇದರಿಂದ ಗಾಬರಿಗೊಂಡ ದುಷ್ಕರ್ಮಿಗಳು ಅವರನ್ನು ದಿಂಬು ಒತ್ತಿಹಿಡಿದು ಉಸಿರುಗಟ್ಟಿಸಿ ಕೊಂದು ಪರಾರಿಯಾಗಿದ್ದಾರೆ. ಅವರು ದರೋಡೆ ಉದ್ದೇಶದಿಂದ ಬಂದಿದ್ದರು ಎಂದು ಸಹಾಯಕಿ ತಿಳಿಸಿದ್ದಾಳೆ. ರಾತ್ರಿ 11ರ ಸುಮಾರಿಗೆ ಮಾಹಿತಿ ತಿಳಿದು ಬಂದ ಪೊಲೀಸರು, ಮನೆಗೆಲಸದಾಕೆ ನೀಡಿದ ಸುಳಿವಿನ ಆಧಾರದಲ್ಲಿ ಧೋಬಿಯನ್ನು ಬಂಧಿಸಿದ್ದಾರೆ. ಆತನಿಗೆ ಸಹಾಯ ಮಾಡಿದ ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಕಿಟ್ಟಿ ಕುಮಾರಮಂಗಲಂ ಅವರು ಸುಪ್ರೀಂಕೋರ್ಟ್ ವಕೀಲೆಯಾಗಿ ಕಾರ್ಯನಿರ್ವಹಿಸಿದ್ದರು. ಅವರ ಪತಿ ಪಿ. ರಂಗರಾಜನ್ ಕುಮಾರಮಂಗಲಂ ಅವರು 1984ರಲ್ಲಿ ಮೊದಲ ಬಾರಿ ಲೋಕಸಭೆಗೆ ಚುನಾಯಿತರಾಗಿದ್ದರು. 1991-92ರ ಅವಧಿಯಲ್ಲಿ ರಾಜ್ಯ, ಸಂಸದೀಯ ವ್ಯವಹಾರಗಳು ಮತ್ತು ಕಾನೂನು, ನ್ಯಾಯ ಹಾಗೂ ಕಂಪೆನಿ ವ್ಯವಹಾರಗಳ ಸಚಿವರಾಗಿದ್ದರು. 1992-93ರಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರೆ, 1998ರಲ್ಲಿ ಕೇಂದ್ರ ವಿದ್ಯುತ್ ಸಚಿವರಾಗಿದ್ದರು. ಮೂಲದವರಾದ ಕುಮಾರಮಂಗಲಂ ಅವರು 2000ದ ಆಗಸ್ಟ್ 23ರಂದು ತಮ್ಮ 48ನೇ ವಯಸ್ಸಿನಲ್ಲಿ ರಕ್ತ ಕ್ಯಾನ್ಸರ್‌ನಿಂದ ನಿಧನರಾಗಿದ್ದರು. ಆ ವೇಳೆ ಅವರು ವಾಜಪೇಯಿ ಸರಕಾರದಲ್ಲಿ ವಿದ್ಯುತ್ ಖಾತೆ ಸಚಿವರಾಗಿದ್ದರು. ಮೂಲತಃ ಕಾಂಗ್ರೆಸ್ ನಾಯಕರಾಗಿದ್ದ ಅವರು ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು. ತಮಿಳುನಾಡು ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಲ್ಲಿ ಒಬ್ಬರಾಗಿರುವ ಅವರ ಮಗ ಮೋಹನ್ ಕುಮಾರಮಮಂಗಲಂ ಅವರು ದಿಲ್ಲಿಗೆ ತೆರಳಿದ್ದಾರೆ.