ಒಲಂಪಿಕ್ಸ್ ಆತಿಥ್ಯ ವಹಿಸಲಿರುವ ಪ್ಯಾರಿಸ್ ನಲ್ಲಿ ತಿಗಣೆ ಕಾಟ!

ಮುಂದಿನ ಒಲಂಪಿಕ್ಸ್ ಆತಿಥ್ಯ ವಹಿಸಲಿರುವ ಪ್ಯಾರಿಸ್ ನಲ್ಲಿ ತಿಗಣೆ ಕಾಟ ಹೆಚ್ಚಾಗಿದೆ.  ಪ್ಯಾರಿಸ್:  ಮುಂದಿನ ಒಲಂಪಿಕ್ಸ್ ಆತಿಥ್ಯ ವಹಿಸಲಿರುವ ಪ್ಯಾರಿಸ್ ನಲ್ಲಿ ತಿಗಣೆ ಕಾಟ ಹೆಚ್ಚಾಗಿದೆ. ಪ್ಯಾರಿಸ್ ಹಾಗೂ ಮಾರ್ಸಿಲ್ಲೆ ಅಷ್ಟೇ ಅಲ್ಲದೇ, ನಗರದ ಬಹುತೇಕ ಕಡೆಗಳಲ್ಲಿ ತಿಗಣೆ ಕಾಟ ಹೆಚ್ಚಾಗತೊಡಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.   2024 ರ ಒಲಂಪಿಕ್ಸ್ ಗೆ ಇನ್ನು 10 ತಿಂಗಳಷ್ಟೇ ಬಾಕಿ ಇದ್ದು, ರಕ್ತ ಹಿರುವ ಕೀಟಗಳ ಬಾಧೆ ಹೆಚ್ಚಾಗಿರುವುದು ಫ್ರಾನ್ಸ್ ನ ರಾಜಧಾನಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಬೇಸಿಗೆಯಲ್ಲಿ, ಹೋಟೆಲ್‌ಗಳು ಮತ್ತು ರಜೆಯ ವೇಳೆ ಬಾಡಿಗೆ ಪಡೆಯುವ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ತಿಗಣೆಗಳು ಇರುವ ಬಗ್ಗೆ ವರದಿಗಳಾಗಿತ್ತು. ಆದರೆ ಇತ್ತೀಚೆಗೆ ಇವು ಸಿನೆಮಾ ಥಿಯೇಟರ್‌ಗಳಲ್ಲಿಯೂ ಕಾಣಿಸಿಕೊಂಡಿದ್ದು, ರಾಷ್ಟ್ರೀಯ ಹೈಸ್ಪೀಡ್ ರೈಲುಗಳು ಮತ್ತು ಪ್ಯಾರಿಸ್ ಮೆಟ್ರೋ ವ್ಯವಸ್ಥೆಯ ಆಸನಗಳ ಮೇಲೆ ಈ ಕೀಟಗಳು ತೆವಳುತ್ತಿರುವುದು ಆತಂಕ ಹೆಚ್ಚಿಸಿದೆ ಎಂದು ಸಿಬಿಎಸ್ ನ್ಯೂಸ್ ತಿಳಿಸಿದೆ. ಪ್ಯಾರಿಸ್ ನಲ್ಲಿ ಕೀಟಗಳನ್ನು ನಿಯಂತ್ರಿಸುವ ಸಂಸ್ಥೆಗಳ ಪ್ರಕಾರ ಇತ್ತೀಚೆಗೆ ತಿಗಣೆಗಳ ಕಾಟ ಮಿತಿಮೀರಿದೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್ 2023: ಇಂದು ಮೂರು ಚಿನ್ನ, ಒಟ್ಟಾರೆ ದಾಖಲೆಯ 86 ಪದಕ ಭಾರತದ ಮುಡಿಗೆ! ಬೇಸಿಗೆಯ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಿಗೆ ಭೇಟಿ ನೀಡುವವರಿಗೆ ಸಂಭವನೀಯ ಅಪಾಯವು ವಿಶೇಷವಾಗಿ ಪ್ಯಾರಿಸ್ ಸಿಟಿ ಹಾಲ್ಗೆ ಸಂಬಂಧಿಸಿದೆ. ತಿಗಣೆಗಳು ಸಾರ್ವಜನಿಕ ಆರೋಗ್ಯದ ವಿಷಯವಾಗಿದ್ದು, ಅದನ್ನು ಹಾಗೆಯೇ ಘೋಷಿಸಬೇಕು ಎಂದು ಪ್ಯಾರಿಸ್‌ನ ಉಪ ಮೇಯರ್ ಇಮ್ಯಾನುಯೆಲ್ ಗ್ರೆಗೊಯಿರ್ ಅವರು ಪ್ರಧಾನಿ ಎಲಿಸಬೆತ್ ಬೋರ್ನ್ ಅವರಿಗೆ ಪತ್ರ ಬರೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಮಸ್ಯೆಯನ್ನು ಪರಿಹರಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು ಅವರು ಸರ್ಕಾರಕ್ಕೆ ಕರೆ ನೀಡಿದ್ದಾರೆ ಎಂದು ಸಿಬಿಎಸ್ ನ್ಯೂಸ್ ವರದಿ ಪ್ರಕಟಿಸಿದೆ.

ಒಲಂಪಿಕ್ಸ್ ಆತಿಥ್ಯ ವಹಿಸಲಿರುವ ಪ್ಯಾರಿಸ್ ನಲ್ಲಿ ತಿಗಣೆ ಕಾಟ!
Linkup
ಮುಂದಿನ ಒಲಂಪಿಕ್ಸ್ ಆತಿಥ್ಯ ವಹಿಸಲಿರುವ ಪ್ಯಾರಿಸ್ ನಲ್ಲಿ ತಿಗಣೆ ಕಾಟ ಹೆಚ್ಚಾಗಿದೆ.  ಪ್ಯಾರಿಸ್:  ಮುಂದಿನ ಒಲಂಪಿಕ್ಸ್ ಆತಿಥ್ಯ ವಹಿಸಲಿರುವ ಪ್ಯಾರಿಸ್ ನಲ್ಲಿ ತಿಗಣೆ ಕಾಟ ಹೆಚ್ಚಾಗಿದೆ. ಪ್ಯಾರಿಸ್ ಹಾಗೂ ಮಾರ್ಸಿಲ್ಲೆ ಅಷ್ಟೇ ಅಲ್ಲದೇ, ನಗರದ ಬಹುತೇಕ ಕಡೆಗಳಲ್ಲಿ ತಿಗಣೆ ಕಾಟ ಹೆಚ್ಚಾಗತೊಡಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.   2024 ರ ಒಲಂಪಿಕ್ಸ್ ಗೆ ಇನ್ನು 10 ತಿಂಗಳಷ್ಟೇ ಬಾಕಿ ಇದ್ದು, ರಕ್ತ ಹಿರುವ ಕೀಟಗಳ ಬಾಧೆ ಹೆಚ್ಚಾಗಿರುವುದು ಫ್ರಾನ್ಸ್ ನ ರಾಜಧಾನಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಬೇಸಿಗೆಯಲ್ಲಿ, ಹೋಟೆಲ್‌ಗಳು ಮತ್ತು ರಜೆಯ ವೇಳೆ ಬಾಡಿಗೆ ಪಡೆಯುವ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ತಿಗಣೆಗಳು ಇರುವ ಬಗ್ಗೆ ವರದಿಗಳಾಗಿತ್ತು. ಆದರೆ ಇತ್ತೀಚೆಗೆ ಇವು ಸಿನೆಮಾ ಥಿಯೇಟರ್‌ಗಳಲ್ಲಿಯೂ ಕಾಣಿಸಿಕೊಂಡಿದ್ದು, ರಾಷ್ಟ್ರೀಯ ಹೈಸ್ಪೀಡ್ ರೈಲುಗಳು ಮತ್ತು ಪ್ಯಾರಿಸ್ ಮೆಟ್ರೋ ವ್ಯವಸ್ಥೆಯ ಆಸನಗಳ ಮೇಲೆ ಈ ಕೀಟಗಳು ತೆವಳುತ್ತಿರುವುದು ಆತಂಕ ಹೆಚ್ಚಿಸಿದೆ ಎಂದು ಸಿಬಿಎಸ್ ನ್ಯೂಸ್ ತಿಳಿಸಿದೆ. ಪ್ಯಾರಿಸ್ ನಲ್ಲಿ ಕೀಟಗಳನ್ನು ನಿಯಂತ್ರಿಸುವ ಸಂಸ್ಥೆಗಳ ಪ್ರಕಾರ ಇತ್ತೀಚೆಗೆ ತಿಗಣೆಗಳ ಕಾಟ ಮಿತಿಮೀರಿದೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್ 2023: ಇಂದು ಮೂರು ಚಿನ್ನ, ಒಟ್ಟಾರೆ ದಾಖಲೆಯ 86 ಪದಕ ಭಾರತದ ಮುಡಿಗೆ! ಬೇಸಿಗೆಯ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಿಗೆ ಭೇಟಿ ನೀಡುವವರಿಗೆ ಸಂಭವನೀಯ ಅಪಾಯವು ವಿಶೇಷವಾಗಿ ಪ್ಯಾರಿಸ್ ಸಿಟಿ ಹಾಲ್ಗೆ ಸಂಬಂಧಿಸಿದೆ. ತಿಗಣೆಗಳು ಸಾರ್ವಜನಿಕ ಆರೋಗ್ಯದ ವಿಷಯವಾಗಿದ್ದು, ಅದನ್ನು ಹಾಗೆಯೇ ಘೋಷಿಸಬೇಕು ಎಂದು ಪ್ಯಾರಿಸ್‌ನ ಉಪ ಮೇಯರ್ ಇಮ್ಯಾನುಯೆಲ್ ಗ್ರೆಗೊಯಿರ್ ಅವರು ಪ್ರಧಾನಿ ಎಲಿಸಬೆತ್ ಬೋರ್ನ್ ಅವರಿಗೆ ಪತ್ರ ಬರೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಮಸ್ಯೆಯನ್ನು ಪರಿಹರಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು ಅವರು ಸರ್ಕಾರಕ್ಕೆ ಕರೆ ನೀಡಿದ್ದಾರೆ ಎಂದು ಸಿಬಿಎಸ್ ನ್ಯೂಸ್ ವರದಿ ಪ್ರಕಟಿಸಿದೆ. ಒಲಂಪಿಕ್ಸ್ ಆತಿಥ್ಯ ವಹಿಸಲಿರುವ ಪ್ಯಾರಿಸ್ ನಲ್ಲಿ ತಿಗಣೆ ಕಾಟ!