ಆಸ್ಪತ್ರೆಗಳಿಂದ ಆಮ್ಲಜನಕಕ್ಕೆ ಬೇಡಿಕೆ ಇಳಿಕೆ, ಕೈಗಾರಿಕಾ ಆಕ್ಸಿಜನ್‌ಗೆ ನಿರ್ಬಂಧ ಸಡಿಲ ಸಂಭವ

ಕೋವಿಡ್‌ ಪ್ರಕರಣಗಳು ಹೆಚ್ಚಿದ್ದಾಗ ಆಸ್ಪತ್ರೆಗಳಿಗೆ ಆಕ್ಸಿಜನ್‌ ಪೂರೈಸುವ ನಿಟ್ಟಿನಲ್ಲಿ ಕೈಗಾರಿಕಾ ವಲಯಕ್ಕೆ ಆಕ್ಸಿಜನ್‌ ಪೂರೈಕೆಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಆಸ್ಪತ್ರೆಗಳಿಂದ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ಬಳಕೆಗೆ ನಿರ್ಬಂಧ ಸಡಿಲಗೊಳಿಸುವ ನಿರೀಕ್ಷೆ ಇದೆ.

ಆಸ್ಪತ್ರೆಗಳಿಂದ ಆಮ್ಲಜನಕಕ್ಕೆ ಬೇಡಿಕೆ ಇಳಿಕೆ, ಕೈಗಾರಿಕಾ ಆಕ್ಸಿಜನ್‌ಗೆ ನಿರ್ಬಂಧ ಸಡಿಲ ಸಂಭವ
Linkup
ಹೊಸದಿಲ್ಲಿ: ಕೇಂದ್ರ ಸರಕಾರ ಕೈಗಾರಿಕಾ ವಲಯ ಬಳಸುವ ಆಕ್ಸಿಜನ್‌ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಗೊಳಿಸುವ ನಿರೀಕ್ಷೆ ಇದೆ. ಕೋವಿಡ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಆಕ್ಸಿಜನ್‌ ಪೂರೈಸುವ ನಿಟ್ಟಿನಲ್ಲಿ ಕೈಗಾರಿಕಾ ವಲಯಕ್ಕೆ ಆಕ್ಸಿಜನ್‌ ಪೂರೈಕೆಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಆಸ್ಪತ್ರೆಗಳಿಂದ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ಬಳಕೆಗೆ ನಿರ್ಬಂಧವನ್ನು ಮತ್ತಷ್ಟು ಸಡಿಲಗೊಳಿಸುವ ನಿರೀಕ್ಷೆ ಇದೆ. ಹೀಗಿದ್ದರೂ ಮೊದಲ ಆದ್ಯತೆ ಆಸ್ಪತ್ರೆಗಳಿಗೆ ಪೂರೈಕೆಯೇ ಆಗಿರಲಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಮುಂದಿನ 2-3 ದಿನಗಳಲ್ಲಿ ಗೃಹ ಇಲಾಖೆ ಮತ್ತು ಕೈಗಾರಿಕಾ ಇಲಾಖೆ ಘೋಷಣೆ ಹೊರಡಿಸುವ ಸಾಧ್ಯತೆ ಇದೆ. ಕಳೆದ ಮೇ 9ರಂದು ಆಸ್ಪತ್ರೆಗಳಿಗೆ 8,944 ಟನ್‌ ಆಕ್ಸಿಜನ್‌ ಪೂರೈಕೆಗೆ ಬೇಡಿಕೆ ಇತ್ತು. ಈಗ ಸರಾಸರಿ 1,000 ಟನ್‌ಗೆ ಇಳಿಕೆಯಾಗಿದೆ. ಜೂನ್‌ 17ರಂದು ರಾಜ್ಯಗಳಿಗೆ 1,061 ಟನ್‌ ಪೂರೈಕೆಯಾಗಿತ್ತು. ಜೂನ್‌ 1ರಿಂದ ಸರಕಾರ ಕೈಗಾರಿಕಾ ಬಳಕೆಗೆ ಆಕ್ಸಿಜನ್‌ ವಿತರಣೆಯ ಸಲುವಾಗಿ ತಾತ್ಕಾಲಿಕವಾಗಿ ಕೆಲ ನಿಯಮಗಳನ್ನು ಸಡಿಲಗೊಳಿಸಿತ್ತು. ಉತ್ಪಾದನೆಯಾಗುವ ಆಕ್ಸಿಜನ್‌ನಲ್ಲಿ ಶೇ.41ರಷ್ಟನ್ನು ಉದ್ಯಮ ವಲಯಕ್ಕೆ ಒದಗಿಸಲು ಸಮ್ಮತಿಸಲಾಗಿತ್ತು.