ಫಿಫಾ ವಿಶ್ವಕಪ್ 2022: ನಾಲ್ಕು ಬಾರಿ ಚಾಂಪಿಯನ್ ಜರ್ಮನಿಗೆ ಶಾಕ್ ನೀಡಿದ ಜಪಾನ್; 2-1 ಗೋಲುಗಳೊಂದಿಗೆ ಗೆಲುವು

ಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಫಿಫಾ ವಿಶ್ವಕಪ್‌ನ ಇ ಗುಂಪಿನ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್‌ ನ್ನು ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸಿದ ಜಪಾನ್, ಅದ್ಭುತವಾಗಿ ಕಾಂಬ್ಯಾಕ್ ಮಾಡಿತು. ದೋಹಾ: ಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಫಿಫಾ ವಿಶ್ವಕಪ್‌ನ ಇ ಗುಂಪಿನ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್‌ ನ್ನು ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸಿದ ಜಪಾನ್, ಅದ್ಭುತವಾಗಿ ಕಾಂಬ್ಯಾಕ್ ಮಾಡಿತು. ಪಂದ್ಯದ  ಮೊದಲಾರ್ಧದ ಕೊನೆಯಲ್ಲಿ ಜರ್ಮನಿ ಮುನ್ನಡೆಯಲ್ಲಿತ್ತು. ಆದರೆ, ಜಪಾನ್‌ ತಂಡ 75ನೇ ನಿಮಿಷ ಹಾಗೂ 83ನೇ ನಿಮಿಷದಲ್ಲಿ ಗೋಲು ಸಿಡಿಸುವ ಮೂಲಕ ತನ್ನ ಈವರೆಗಿನ ಅತ್ಯಂತ ಸ್ಮರಣೀಯ ಗೆಲುವು ದಾಖಲಿಸಿತು. ಈ ಎರಡೂ ಗೋಲುಗಳನ್ನು ಸೂಪರ್‌ ಸಬ್‌ಗಳಾದ ರಿಟ್ಸು ಡೋನ್‌ ಹಾಗೂ ಟಕುಮಾ ಅಸಾನೋ ಬಾರಿಸಿದರು. ಇದನ್ನೂ ಓದಿ: ಫಿಫಾ ವಿಶ್ವಕಪ್ 2022: 2-1 ಗೋಲು ಮೂಲಕ ಅರ್ಜೆಂಟೀನಾಗೆ ಶಾಕ್ ಕೊಟ್ಟ ಸೌದಿ ಅರೇಬಿಯಾ! 57 ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಬಂದ ಟಕುಮಾ ಅಸಾನೊ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಪಂದ್ಯದ 33ನೇ ನಿಮಿಷದಲ್ಲಿ ಜಪಾನ್‌ನ ವಿಂಗ್‌ ಬ್ಯಾಕ್‌ ಡೇವಿಡ್‌ ರೌಮ್‌ ಅವರ ಮೇಲೆ ಜಪಾನ್‌ನ ಗೋಲ್ ಕೀಪರ್‌ ಶೈಚು ಗೊಂಡಾ ಫೌಲ್‌ ಮಾಡಿದ್ದ ಕಾರಣಕ್ಕೆ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಗುಂಡೋಗನ್‌ ಗೋಲು ಬಾರಿಸಿದ್ದರು. ಈ ಗೆಲುವಿನೊಂದಿಗೆ, ಜರ್ಮನಿ, ಕೋಸ್ಟರಿಕಾ ಮತ್ತು ಸ್ಪೇನ್ ಒಳಗೊಂಡಿರುವ ಇ ಗುಂಪಿನಲ್ಲಿ ಜಪಾನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಫಿಫಾ ವಿಶ್ವಕಪ್ 2022: ನಾಲ್ಕು ಬಾರಿ ಚಾಂಪಿಯನ್ ಜರ್ಮನಿಗೆ ಶಾಕ್ ನೀಡಿದ ಜಪಾನ್; 2-1 ಗೋಲುಗಳೊಂದಿಗೆ ಗೆಲುವು
Linkup
ಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಫಿಫಾ ವಿಶ್ವಕಪ್‌ನ ಇ ಗುಂಪಿನ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್‌ ನ್ನು ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸಿದ ಜಪಾನ್, ಅದ್ಭುತವಾಗಿ ಕಾಂಬ್ಯಾಕ್ ಮಾಡಿತು. ದೋಹಾ: ಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಫಿಫಾ ವಿಶ್ವಕಪ್‌ನ ಇ ಗುಂಪಿನ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್‌ ನ್ನು ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸಿದ ಜಪಾನ್, ಅದ್ಭುತವಾಗಿ ಕಾಂಬ್ಯಾಕ್ ಮಾಡಿತು. ಪಂದ್ಯದ  ಮೊದಲಾರ್ಧದ ಕೊನೆಯಲ್ಲಿ ಜರ್ಮನಿ ಮುನ್ನಡೆಯಲ್ಲಿತ್ತು. ಆದರೆ, ಜಪಾನ್‌ ತಂಡ 75ನೇ ನಿಮಿಷ ಹಾಗೂ 83ನೇ ನಿಮಿಷದಲ್ಲಿ ಗೋಲು ಸಿಡಿಸುವ ಮೂಲಕ ತನ್ನ ಈವರೆಗಿನ ಅತ್ಯಂತ ಸ್ಮರಣೀಯ ಗೆಲುವು ದಾಖಲಿಸಿತು. ಈ ಎರಡೂ ಗೋಲುಗಳನ್ನು ಸೂಪರ್‌ ಸಬ್‌ಗಳಾದ ರಿಟ್ಸು ಡೋನ್‌ ಹಾಗೂ ಟಕುಮಾ ಅಸಾನೋ ಬಾರಿಸಿದರು. ಇದನ್ನೂ ಓದಿ: ಫಿಫಾ ವಿಶ್ವಕಪ್ 2022: 2-1 ಗೋಲು ಮೂಲಕ ಅರ್ಜೆಂಟೀನಾಗೆ ಶಾಕ್ ಕೊಟ್ಟ ಸೌದಿ ಅರೇಬಿಯಾ! 57 ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಬಂದ ಟಕುಮಾ ಅಸಾನೊ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಪಂದ್ಯದ 33ನೇ ನಿಮಿಷದಲ್ಲಿ ಜಪಾನ್‌ನ ವಿಂಗ್‌ ಬ್ಯಾಕ್‌ ಡೇವಿಡ್‌ ರೌಮ್‌ ಅವರ ಮೇಲೆ ಜಪಾನ್‌ನ ಗೋಲ್ ಕೀಪರ್‌ ಶೈಚು ಗೊಂಡಾ ಫೌಲ್‌ ಮಾಡಿದ್ದ ಕಾರಣಕ್ಕೆ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಗುಂಡೋಗನ್‌ ಗೋಲು ಬಾರಿಸಿದ್ದರು. ಈ ಗೆಲುವಿನೊಂದಿಗೆ, ಜರ್ಮನಿ, ಕೋಸ್ಟರಿಕಾ ಮತ್ತು ಸ್ಪೇನ್ ಒಳಗೊಂಡಿರುವ ಇ ಗುಂಪಿನಲ್ಲಿ ಜಪಾನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಫಿಫಾ ವಿಶ್ವಕಪ್ 2022: ನಾಲ್ಕು ಬಾರಿ ಚಾಂಪಿಯನ್ ಜರ್ಮನಿಗೆ ಶಾಕ್ ನೀಡಿದ ಜಪಾನ್; 2-1 ಗೋಲುಗಳೊಂದಿಗೆ ಗೆಲುವು