BS VI ವಾಹನ ಖರೀದಿಗೆ ಮುಂದಾಗಿರುವ ಬಿಎಂಟಿಸಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು BS VI ಮಾದರಿಯ ಒಟ್ಟು 565 ಬಸ್‌ಗಳನ್ನು ಅಶೋಕ್‌ ಲೇಲ್ಯಾಂಡ್‌ ಸಂಸ್ಥೆಯಿಂದ ಖರೀದಿಸಲು ನಿರ್ಧರಿಸಲಾಗಿದೆ. ಅದರಂತೆ ಎಲ್ಲ ಬಸ್‌ಗಳು 2022ರ ಫೆಬ್ರವರಿಯೊಳಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಪೂರೈಸಲಿದ್ದಾರೆ.

BS VI ವಾಹನ ಖರೀದಿಗೆ ಮುಂದಾಗಿರುವ ಬಿಎಂಟಿಸಿ
Linkup
ಬೆಂಗಳೂರು: ಬೆಂಗಳೂರು ಮಹಾನಗರ ಸಾ ಸಾರಿಗೆ ಸಂಸ್ಥೆಯು ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ BS VI ವಾಹನವನ್ನು ಖರೀದಿಸಲು ಮುಂದಾಗಿದೆ. ಈ ವಾಹನಗಳು ಅತೀ ಶೀಘ್ರದಲ್ಲಿಯೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರ್ಪಡೆಗೊಳ್ಳಲಿವೆ. ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಮೊದಲ ಮಾದರಿಯ BS VI ಬಸ್‌ ಪರಿಶೀಲನೆ ಮಾಡಿದ್ದಾರೆ. ಮಹಾನಗರ ಸಾರಿಗೆ ಸಂಸ್ಥೆಯು BS VI ಮಾದರಿಯ ಒಟ್ಟು 565 ಬಸ್‌ಗಳನ್ನು ಅಶೋಕ್‌ ಲೇಲ್ಯಾಂಡ್‌ ಸಂಸ್ಥೆಯಿಂದ ಖರೀದಿಸಲು ನಿರ್ಧರಿಸಲಾಗಿದೆ. ಅದರಂತೆ ಎಲ್ಲ ಬಸ್‌ಗಳು 2022ರ ಫೆಬ್ರವರಿಯೊಳಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಪೂರೈಸಲಿದ್ದಾರೆ. ಈ ಬಸ್‌ಗಳನ್ನು 2017-18 ರಲ್ಲಿ ಬಸ್‌ಗಳ ಖರೀದಿಗಾಗಿಯೇ ಮೀಸಲಿಟ್ಟಿರುವ ಹಣದಿಂದ ಖರೀದಿಸಲಾಗುತ್ತಿದೆ. ಈ ಹೊಸದಾಗಿ ಸೇರ್ಪಡೆಗೊಳ್ಳಲಿರುವ BS VI ವಾಹನಗಳು ಹಲವು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ: BS VI ವಾಹನಗಳು ಪರಿಸರ ಸ್ನೇಹಿಯಾಗಿದ್ದು ಗಾಳಿಯ ಗುಣಮಟ್ಟವನ್ನು ಸುಧಾರಿಸಿ, ವಾತಾವರಣದ ಮಾಲಿನ್ಯವನ್ನು ಕಡಿಮೆಗೊಳಿಸುತ್ತದೆ. ಈ ವಾಹನವು BS IV ವಾಹನಗಳಿಗಿಂತ ಹೆಚ್ಚಿನ ಎಂಜಿನ್‌ ಸಾಮರ್ಥ್ಯವನ್ನು ಹೊಂದಿರುತ್ತದೆ (197 HP). ಈ ವಾಹನಗಳಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕೊಡುವ ವ್ಯವಸ್ಥೆ ಇರುತ್ತದೆ. ಭಾಸ್ಕರ್‌ ರಾವ್‌ ಅರ್ಜಿ ತಿರಸ್ಕೃತ ಬೆಂಗಳೂರು: ರೈಲ್ವೆ ಎಡಿಜಿಪಿ ಹಾಗೂ ಹಿರಿಯ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಸಲ್ಲಿಸಿರುವ ಸ್ವಯಂ ನಿವೃತ್ತಿ ಅರ್ಜಿಯನ್ನು ರಾಜ್ಯ ಸರಕಾರ ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ. ರಾವ್‌ ಮುಖ್ಯ ಕಾರ್ಯಧಿದರ್ಶಿ ಹಾಗೂ ರಾಜ್ಯ ಪೊಲೀಸ್‌ ಮಹಾನಿರ್ದೇಧಿಶಕರಿಗೆ ಸೆ.16 ರಂದು ಅರ್ಜಿ ಸಲ್ಲಿಸಿದ್ದರು. ಆದರೆ ಇದಕ್ಕೆ ಮುಖ್ಯಮಂತ್ರಿ ಅವರು ಇನ್ನೂ ಒಪ್ಪಿಗೆ ನೀಡಿಲ್ಲ. ಈ ಸಂಬಂಧ ರಾವ್‌ ಅವರು ಎರಡು ಬಾರಿ ಭೇಟಿ ಮಾಡಿ ಕೋರಿಕೆ ಸಲ್ಲಿಸಿದಾಗ ಸದ್ಯಕ್ಕೆ ಕೋರಿಕೆಯನ್ನು ಪರಿಗಣಿಸುವುದಿಲ್ಲ. ಸ್ವಲ್ಪ ದಿನ ಕಾಯಿರಿ ಎಂದು ಸಿಎಂ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ. 1990ರ ಬ್ಯಾಚಿನ ಐಪಿಎಸ್‌ ಭಾಸ್ಕರ್‌ ರಾವ್‌, ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಮೊದಲು ಬೆಂಗಳೂರು ನಗರ ಪೊಲೀಸ್‌ ಆಯುಕ್ತಧಿರಾಗಿ 10 ತಿಂಗಳು ಕೆಲಸ ಮಾಡಿದ್ದರು. ಬೆಂಗಳೂರಿನ ವಿಧಾನಸಭೆ ಕ್ಷೇತ್ರವೊಂದರಲ್ಲಿ ಸ್ಪರ್ಧಿಸಲು ಯೋಚಿಸಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಭಾಸ್ಕರ್‌ ರಾವ್‌ ಅವರನ್ನು ಸಂಪರ್ಕಿಸಿದಾಗ, ‘‘ಸರಕಾರಕ್ಕೆ ನನ್ನ ಕೋರಿಕೆ ಸಲ್ಲಿಸಿದ್ದು, ಅನುಮತಿಗಾಗಿ ಕಾದಿದ್ದೇನೆ’’ ಎಂದಷ್ಟೇ ಉತ್ತರಿಸಿದರು.