3ನೇ ಬಾರಿ ಸಿಎಂ ಆಗುವ ಆಸೆ ನನಗಿಲ್ಲ: ಜೀವನದ ಕೊನೆ ಹಂತದಲ್ಲಿದ್ದೇನೆ ಅಂದುಕೊಳ್ಳಬೇಡಿ, ಶಿವ ನಿಮ್ಮನ್ನ ಸದ್ಯಕ್ಕೆ ಕರೆದುಕೊಳ್ಳಲ್ಲ; ಎಚ್‌ಡಿಕೆ

ಈಗಾಗಲೇ ನನಗೆ 2 ಬಾರಿ ಹೃದಯ ಶಸ್ತಚಿಕಿತ್ಸೆಯಾಗಿದೆ, ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. 3ನೇ ಬಾರಿಗೆ ಮುಖ್ಯಮಂತ್ರಿಯಾಗುವ ಉದ್ದೇಶ ನನಗಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದರು. ಮಂಡ್ಯ: ಈಗಾಗಲೇ ನನಗೆ 2 ಬಾರಿ ಹೃದಯ ಶಸ್ತಚಿಕಿತ್ಸೆಯಾಗಿದೆ, ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. 3ನೇ ಬಾರಿಗೆ ಮುಖ್ಯಮಂತ್ರಿಯಾಗುವ ಉದ್ದೇಶ ನನಗಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದರು. ಕೆ.ಆರ್ ಪೇಟೆಯಲ್ಲಿ ಸೋಮವಾರ ನಡೆದ ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಷ್ಟು ಬಾರಿ ಮುಖ್ಯಮಂತ್ರಿಯಾದರೂ ಮಣ್ಣಿಗೆ ಹೋಗುವಾಗ ನಾನು ಮಾಜಿ ಮುಖ್ಯಮಂತ್ರಿಯೇ. ನನ್ನ ಹೋರಾಟ ಮುಖ್ಯಮಂತ್ರಿ ಆಗುವುದಕ್ಕಾಗಿ ಅಲ್ಲ, ನನ್ನ ಹೋರಾಟವೇನಿದ್ದರೂ ಬಡವರ ಪರವಾಗಿ ಮಾತ್ರ’ ಎಂದರು. ಎಚ್‌.ಡಿ.ದೇವೇಗೌಡರು 60 ವರ್ಷ ರಾಜಕಾರಣ ಮಾಡಿದ್ದಾರೆ, ಪ್ರಧಾನಿಯಾಗಿದ್ದು 10 ತಿಂಗಳು ಮಾತ್ರ. 15 ತಿಂಗಳು ಮಖ್ಯಮಂತ್ರಿ, 2–3 ವರ್ಷ ನೀರಾವರಿ ಮಂತ್ರಿ, ಉಳಿದಂತೆ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಅವರ ಕನಸುಗಳನ್ನು ನನಸು ಮಾಡುವುದಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ ಎಂದರು. ಜೀವನದಲ್ಲಿ ಕೊನೆ ಹಂತಕ್ಕೆ ಬಂದುಬಿಟ್ಟಿದ್ದೇನೆ, ದೇವರು ನನ್ನನ್ನು ಕರೆದುಕೊಂಡು ಬಿಡ್ತಾನೆ ಎಂದುಕೊಂಡು ಮಾನಸಿಕ ಚಿಂತೆ ಮಾಡಿ ನಿಮ್ಮ ಪ್ರಾಣ ಹೋಗಬಾರದು. ನಮ್ಮ ಸಾಧನೆಯನ್ನು ಕಣ್ಣಾರೆ ನೋಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಎಂ ಎಚ್‌ಡಿ ಕುಮಾರಸ್ವಾಮಿ ಭಾವುಕರಾಗಿ ನುಡಿದರು. ಇದನ್ನೂ ಓದಿ: ಹಾಸನ ಹೊರತುಪಡಿಸಿ ಉಳಿದ ಕ್ಷೇತ್ರದ ಅಭ್ಯರ್ಥಿಗಳ 2ನೇ ಪಟ್ಟಿ ಇಂದು ಸಂಜೆ ಬಿಡುಗಡೆ, ಏಪ್ರಿಲ್ 19ಕ್ಕೆ ನಾಮಪತ್ರ ಸಲ್ಲಿಕೆ: ಎಚ್.ಡಿ.ಕುಮಾರಸ್ವಾಮಿ ಜೀವನದಲ್ಲಿ ಕೊನೆ ಹಂತಕ್ಕೆ ಬಂದುಬಿಟ್ಟಿದ್ದೇನೆ, ದೇವರು ನನ್ನನ್ನು ಕರೆದುಕೊಂಡು ಬಿಡ್ತಾನೆ ಎಂದು ತಿಳಿದುಕೊಂಡಿದ್ದೀರಾ? ಮನಸ್ಸಿನಲ್ಲಿರುವ ಈ ಯೋಚನೆ ತೆಗೆದು ಹಾಕಿ ಎಂದು ದೇವೇಗೌಡರಿಗೆ ಪುತ್ರ ಕುಮಾರಸ್ವಾಮಿ ಸಲಹೆ ನೀಡಿದರು. ನನ್ನ ಪ್ರಕಾರ ಶಿವ ನಿಮ್ಮನ್ನು ಸದ್ಯಕ್ಕೆ ಕರೆದುಕೊಳ್ಳಲ್ಲ. ನೀವು ಮಾಡಲಿಕ್ಕೆ ಆಗದ ಸಾಧನೆ ನಾನು ಮಾಡುತ್ತೇನೆ. ಇದನ್ನು ನೀವು ನಿಮ್ಮ ಕಣ್ಣಾರೆ ನೋಡಬೇಕು. ನಿಮ್ಮ ಆಸೆಯನ್ನು ಮಕ್ಕಳಾಗಿ ಈಡೇರಿಸುವ ಸವಾಲು ಸ್ವೀಕರಿಸಿದ್ದೇನೆ. ಅಲ್ಲಿಯವರೆಗೂ ನೀವು ಬದುಕಿರುತ್ತೀರಿ. ಯಾವುದೇ ಕಾರಣಕ್ಕೂ ಮಾನಸಿಕ ಚಿಂತನೆಗೆ ಒಳಗಾಗಿ ನಿಮ್ಮ ಪ್ರಾಣ ಹೋಗಬಾರದು ಎಂದು ಕುಮಾರಸ್ವಾಮಿ ಭಾವುಕರಾದರು. ನಾನು ಸ್ವಾರ್ಥಕ್ಕಾಗಿ ಶ್ರಮಪಡುತ್ತಿಲ್ಲ, ಜಾತಿಗಾಗಿಯೂ ಅಲ್ಲ. ನನಗೆ ಜಾತಿ ವ್ಯಾಮೋಹ ಇಲ್ಲ. ಸಿಕ್ಕ ಅವಕಾಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ರಾಷ್ಟ್ರೀಯ ಪಕ್ಷಗಳು ದುಡ್ಡು ಕೊಟ್ಟು ಸಮೀಕ್ಷೆ ಮಾಡಿಸಿದ್ದು ಜನರು ಅವುಗಳನ್ನು ನಂಬಬಾರದು. ಕಾಂಗ್ರೆಸ್‌, ಬಿಜೆಪಿಗಿಂತ 10–15 ಹೆಚ್ಚು ಸೀಟು ಗೆಲ್ಲುತ್ತೇವೆ ಎಂದರು. ಇದನ್ನೂ ಓದಿ: ಬಗೆಹರಿಯದ ದಳಪತಿಗಳ ಕುಟುಂಬ ಕಲಹ: ದೇವೇಗೌಡರ ಮನೆಯಲ್ಲಿ ಸಂಧಾನಸಭೆ; ಅಸಮಾಧಾನದಿಂದ ಅರ್ಧಕ್ಕೆ ಹೊರ ನಡೆದ ಭವಾನಿ ರೇವಣ್ಣ? ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ನಮ್ಮವರೇ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ನಮ್ಮ ನೆಂಟರೇ ಬಂದು ಜೆಡಿಎಸ್‌ ಅಭ್ಯರ್ಥಿಯನ್ನು ಸೋಲಿಸಿ ಎನ್ನಬಹುದು, ಅವರ ಮಾತುಗಳನ್ನು ಕೇಳಬೇಡಿ ಎಂದರು, ಈ ಮಾತು ಎಚ್‌.ಡಿ.ರೇವಣ್ಣ ಕುರಿತು ಹೇಳಿದ್ದು ಎಂಬಂತೆ ಬಿಂಬಿತವಾಯಿತು. ನನ್ನ ಹೋರಾಟ ಬಡವರ ಬದುಕು ಸರಿಪಡಿಸಲು. ನನಗೆ ಜಾತಿ ಇಲ್ಲ. ಜಾತಿಯ ವ್ಯಾಮೋಹ ಬೇಡ. ನನ್ನ ಮೇಲೆ ವಿಶ್ವಾಸ ಇಡಿ. ಸಿಕ್ಕ ಅವಕಾಶದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದರು.

3ನೇ ಬಾರಿ ಸಿಎಂ ಆಗುವ ಆಸೆ ನನಗಿಲ್ಲ: ಜೀವನದ ಕೊನೆ ಹಂತದಲ್ಲಿದ್ದೇನೆ ಅಂದುಕೊಳ್ಳಬೇಡಿ, ಶಿವ ನಿಮ್ಮನ್ನ ಸದ್ಯಕ್ಕೆ ಕರೆದುಕೊಳ್ಳಲ್ಲ; ಎಚ್‌ಡಿಕೆ
Linkup
ಈಗಾಗಲೇ ನನಗೆ 2 ಬಾರಿ ಹೃದಯ ಶಸ್ತಚಿಕಿತ್ಸೆಯಾಗಿದೆ, ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. 3ನೇ ಬಾರಿಗೆ ಮುಖ್ಯಮಂತ್ರಿಯಾಗುವ ಉದ್ದೇಶ ನನಗಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದರು. ಮಂಡ್ಯ: ಈಗಾಗಲೇ ನನಗೆ 2 ಬಾರಿ ಹೃದಯ ಶಸ್ತಚಿಕಿತ್ಸೆಯಾಗಿದೆ, ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. 3ನೇ ಬಾರಿಗೆ ಮುಖ್ಯಮಂತ್ರಿಯಾಗುವ ಉದ್ದೇಶ ನನಗಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದರು. ಕೆ.ಆರ್ ಪೇಟೆಯಲ್ಲಿ ಸೋಮವಾರ ನಡೆದ ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಷ್ಟು ಬಾರಿ ಮುಖ್ಯಮಂತ್ರಿಯಾದರೂ ಮಣ್ಣಿಗೆ ಹೋಗುವಾಗ ನಾನು ಮಾಜಿ ಮುಖ್ಯಮಂತ್ರಿಯೇ. ನನ್ನ ಹೋರಾಟ ಮುಖ್ಯಮಂತ್ರಿ ಆಗುವುದಕ್ಕಾಗಿ ಅಲ್ಲ, ನನ್ನ ಹೋರಾಟವೇನಿದ್ದರೂ ಬಡವರ ಪರವಾಗಿ ಮಾತ್ರ’ ಎಂದರು. ಎಚ್‌.ಡಿ.ದೇವೇಗೌಡರು 60 ವರ್ಷ ರಾಜಕಾರಣ ಮಾಡಿದ್ದಾರೆ, ಪ್ರಧಾನಿಯಾಗಿದ್ದು 10 ತಿಂಗಳು ಮಾತ್ರ. 15 ತಿಂಗಳು ಮಖ್ಯಮಂತ್ರಿ, 2–3 ವರ್ಷ ನೀರಾವರಿ ಮಂತ್ರಿ, ಉಳಿದಂತೆ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಅವರ ಕನಸುಗಳನ್ನು ನನಸು ಮಾಡುವುದಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ ಎಂದರು. ಜೀವನದಲ್ಲಿ ಕೊನೆ ಹಂತಕ್ಕೆ ಬಂದುಬಿಟ್ಟಿದ್ದೇನೆ, ದೇವರು ನನ್ನನ್ನು ಕರೆದುಕೊಂಡು ಬಿಡ್ತಾನೆ ಎಂದುಕೊಂಡು ಮಾನಸಿಕ ಚಿಂತೆ ಮಾಡಿ ನಿಮ್ಮ ಪ್ರಾಣ ಹೋಗಬಾರದು. ನಮ್ಮ ಸಾಧನೆಯನ್ನು ಕಣ್ಣಾರೆ ನೋಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಎಂ ಎಚ್‌ಡಿ ಕುಮಾರಸ್ವಾಮಿ ಭಾವುಕರಾಗಿ ನುಡಿದರು. ಇದನ್ನೂ ಓದಿ: ಹಾಸನ ಹೊರತುಪಡಿಸಿ ಉಳಿದ ಕ್ಷೇತ್ರದ ಅಭ್ಯರ್ಥಿಗಳ 2ನೇ ಪಟ್ಟಿ ಇಂದು ಸಂಜೆ ಬಿಡುಗಡೆ, ಏಪ್ರಿಲ್ 19ಕ್ಕೆ ನಾಮಪತ್ರ ಸಲ್ಲಿಕೆ: ಎಚ್.ಡಿ.ಕುಮಾರಸ್ವಾಮಿ ಜೀವನದಲ್ಲಿ ಕೊನೆ ಹಂತಕ್ಕೆ ಬಂದುಬಿಟ್ಟಿದ್ದೇನೆ, ದೇವರು ನನ್ನನ್ನು ಕರೆದುಕೊಂಡು ಬಿಡ್ತಾನೆ ಎಂದು ತಿಳಿದುಕೊಂಡಿದ್ದೀರಾ? ಮನಸ್ಸಿನಲ್ಲಿರುವ ಈ ಯೋಚನೆ ತೆಗೆದು ಹಾಕಿ ಎಂದು ದೇವೇಗೌಡರಿಗೆ ಪುತ್ರ ಕುಮಾರಸ್ವಾಮಿ ಸಲಹೆ ನೀಡಿದರು. ನನ್ನ ಪ್ರಕಾರ ಶಿವ ನಿಮ್ಮನ್ನು ಸದ್ಯಕ್ಕೆ ಕರೆದುಕೊಳ್ಳಲ್ಲ. ನೀವು ಮಾಡಲಿಕ್ಕೆ ಆಗದ ಸಾಧನೆ ನಾನು ಮಾಡುತ್ತೇನೆ. ಇದನ್ನು ನೀವು ನಿಮ್ಮ ಕಣ್ಣಾರೆ ನೋಡಬೇಕು. ನಿಮ್ಮ ಆಸೆಯನ್ನು ಮಕ್ಕಳಾಗಿ ಈಡೇರಿಸುವ ಸವಾಲು ಸ್ವೀಕರಿಸಿದ್ದೇನೆ. ಅಲ್ಲಿಯವರೆಗೂ ನೀವು ಬದುಕಿರುತ್ತೀರಿ. ಯಾವುದೇ ಕಾರಣಕ್ಕೂ ಮಾನಸಿಕ ಚಿಂತನೆಗೆ ಒಳಗಾಗಿ ನಿಮ್ಮ ಪ್ರಾಣ ಹೋಗಬಾರದು ಎಂದು ಕುಮಾರಸ್ವಾಮಿ ಭಾವುಕರಾದರು. ನಾನು ಸ್ವಾರ್ಥಕ್ಕಾಗಿ ಶ್ರಮಪಡುತ್ತಿಲ್ಲ, ಜಾತಿಗಾಗಿಯೂ ಅಲ್ಲ. ನನಗೆ ಜಾತಿ ವ್ಯಾಮೋಹ ಇಲ್ಲ. ಸಿಕ್ಕ ಅವಕಾಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ರಾಷ್ಟ್ರೀಯ ಪಕ್ಷಗಳು ದುಡ್ಡು ಕೊಟ್ಟು ಸಮೀಕ್ಷೆ ಮಾಡಿಸಿದ್ದು ಜನರು ಅವುಗಳನ್ನು ನಂಬಬಾರದು. ಕಾಂಗ್ರೆಸ್‌, ಬಿಜೆಪಿಗಿಂತ 10–15 ಹೆಚ್ಚು ಸೀಟು ಗೆಲ್ಲುತ್ತೇವೆ ಎಂದರು. ಇದನ್ನೂ ಓದಿ: ಬಗೆಹರಿಯದ ದಳಪತಿಗಳ ಕುಟುಂಬ ಕಲಹ: ದೇವೇಗೌಡರ ಮನೆಯಲ್ಲಿ ಸಂಧಾನಸಭೆ; ಅಸಮಾಧಾನದಿಂದ ಅರ್ಧಕ್ಕೆ ಹೊರ ನಡೆದ ಭವಾನಿ ರೇವಣ್ಣ? ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ನಮ್ಮವರೇ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ನಮ್ಮ ನೆಂಟರೇ ಬಂದು ಜೆಡಿಎಸ್‌ ಅಭ್ಯರ್ಥಿಯನ್ನು ಸೋಲಿಸಿ ಎನ್ನಬಹುದು, ಅವರ ಮಾತುಗಳನ್ನು ಕೇಳಬೇಡಿ ಎಂದರು, ಈ ಮಾತು ಎಚ್‌.ಡಿ.ರೇವಣ್ಣ ಕುರಿತು ಹೇಳಿದ್ದು ಎಂಬಂತೆ ಬಿಂಬಿತವಾಯಿತು. ನನ್ನ ಹೋರಾಟ ಬಡವರ ಬದುಕು ಸರಿಪಡಿಸಲು. ನನಗೆ ಜಾತಿ ಇಲ್ಲ. ಜಾತಿಯ ವ್ಯಾಮೋಹ ಬೇಡ. ನನ್ನ ಮೇಲೆ ವಿಶ್ವಾಸ ಇಡಿ. ಸಿಕ್ಕ ಅವಕಾಶದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದರು. 3ನೇ ಬಾರಿ ಸಿಎಂ ಆಗುವ ಆಸೆ ನನಗಿಲ್ಲ: ಜೀವನದ ಕೊನೆ ಹಂತದಲ್ಲಿದ್ದೇನೆ ಅಂದುಕೊಳ್ಳಬೇಡಿ, ಶಿವ ನಿಮ್ಮನ್ನ ಸದ್ಯಕ್ಕೆ ಕರೆದುಕೊಳ್ಳಲ್ಲ; ಎಚ್‌ಡಿಕೆ