ಹೊಸ ಅಡಿಕೆ ದರ ದಾಖಲೆ ಮಟ್ಟಕ್ಕೆ ಏರಿಕೆ, ಬೆಳೆಗಾರರು ಫುಲ್‌ ಖುಷ್‌

ಕರಾವಳಿಯ ಬಿಳಿ ಚಾಲಿ ಹೊಸ ಅಡಿಕೆ ದರ ಮತ್ತೆ ಏರುಗತಿಯಲ್ಲಿದ್ದು, ಸೋಮವಾರ ಖಾಸಗಿ ವಲಯದಲ್ಲಿ 465 ರೂ. ನಿಂದ 470 ರೂ. ವರೆಗೆ ಖರೀದಿಯಾಗಿದೆ. ಈ ಮೂಲಕ 500 ರೂ.ನತ್ತ ಮುಖ ಮಾಡಿ ಹೊಸ ದಾಖಲೆ ಬರೆದಿದೆ.

ಹೊಸ ಅಡಿಕೆ ದರ ದಾಖಲೆ ಮಟ್ಟಕ್ಕೆ ಏರಿಕೆ, ಬೆಳೆಗಾರರು ಫುಲ್‌ ಖುಷ್‌
Linkup
ಮಂಗಳೂರು: ಕರಾವಳಿಯ ಬಿಳಿ ಚಾಲಿ ಹೊಸ ದರ ಮತ್ತೆ ಏರುಗತಿಯಲ್ಲಿ ಸಾಗಿದ್ದು, ಸೋಮವಾರ ಖಾಸಗಿ ವಲಯದಲ್ಲಿ 465 ರೂ. ನಿಂದ 470 ರೂ. ವರೆಗೆ ಖರೀದಿಯಾಗಿದೆ. ಈ ಮೂಲಕ 500 ರೂ.ನತ್ತ ಮುಖ ಮಾಡಿದೆ. ಜುಲೈ ಮೊದಲ ವಾರದಲ್ಲಿ ಹೊಸ ಅಡಿಕೆ ದರ 420 ರೂ. ಆಸುಪಾಸಿನಲ್ಲಿತ್ತು. ಜುಲೈ ಅಂತ್ಯದಲ್ಲಿ 45ಂ ರೂ.ಗೆ ಏರಿಕೆಯಾಗಿದ್ದ ದರ ಬಳಿಕ ಕಳೆದ ಮೂರು ವಾರಗಳಿಂದ ಅದೇ ದರದಲ್ಲಿ ಸ್ಥಿರವಾಗಿತ್ತು. ಇದೀಗ ಮತ್ತೆ 15 ರೂ. ನಿಂದ 20 ರೂ. ವರೆಗೆ ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ವ್ಯವಹಾರ ಗರಿಗೆದರಿದೆ. ಸೋಮವಾರ ಸಹಕಾರ ಸಂಸ್ಥೆ ಮಾರುಕಟ್ಟೆಯಲ್ಲಿಯೇ 460 ರೂ. ದರದಲ್ಲಿ ಹೊಸ ಅಡಿಕೆ ಖರೀದಿಯಾಗಿದೆ. ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಚೌತಿ ಹಬ್ಬ ಬರಲಿದ್ದು, ಆ ಬಳಿಕ ಹೊಸ ಅಡಿಕೆ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಇದೇ ವೇಳೆ ಹಳೆ ಅಡಿಕೆ ಧಾರಣೆ 520 ರೂ. ದರದಲ್ಲೇ ಸ್ಥಿರವಾಗಿದೆ. ಆದರೆ ಹೊಸ ಅಡಿಕೆ ದರ ಮಾತ್ರ ಏರಿಕೆಯಾಗುತ್ತಲೇ ಇದೆ.