'ಸಲಗ' ಯಶಸ್ಸಿನ ಬಳಿಕ ಹೊಸ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ದುನಿಯಾ ವಿಜಯ್; ಏನು ಕಥೆ?

'ಸಲಗ' ಸಿನಿಮಾ ಯಶಸ್ಸು ಕಂಡ ಬಳಿಕ ನಟ ದುನಿಯಾ ವಿಜಯ್ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದು, ಪೋಸ್ಟರ್‌ನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

'ಸಲಗ' ಯಶಸ್ಸಿನ ಬಳಿಕ ಹೊಸ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ದುನಿಯಾ ವಿಜಯ್; ಏನು ಕಥೆ?
Linkup
ನಟ ನಿರ್ದೇಶನದ '' ಸಿನಿಮಾ ಕೊರೊನಾ, ಲಾಕ್‌ಡೌನ್‌ ಭಯದ ನಡುವೆಯೂ ಭರ್ಜರಿ ಯಶಸ್ಸು ಕಂಡಿತ್ತು. ಥಿಯೇಟರ್‌ನಲ್ಲಿ 'ಸಲಗ' ಸಿನಿಮಾ ಹೌಸ್‌ಫುಲ್ ಆಯ್ತು. ನಿರ್ದೇಶಕನಾಗಿ ಗೆದ್ದ ದುನಿಯಾ ವಿಜಯ್ ಇನ್ನೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಹೊಸ ಪೋಸ್ಟರ್ ರಿಲೀಸ್ ಸೋಶಿಯಲ್ ಮೀಡಿಯಾದಲ್ಲಿ ದುನಿಯಾ ವಿಜಯ್ ಹೊಸ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಇದು ಅವರ ನಟನೆಯ 28ನೇ ಸಿನಿಮಾ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಪೋಸ್ಟರ್‌ನಲ್ಲಿ ಕೈ, ಯಮಹಾ ಆರ್‌ಎಕ್ಸ್ 100 ಬೈಕ್ ತೋರಿಸಲಾಗಿದೆ. ಅಷ್ಟೇ ಅಲ್ಲದೆ ಪೋಸ್ಟರ್‌ನಲ್ಲಿ ಇರುವ ಕೈ ಕೂಡ ರಕ್ತದಿಂದ ಕೂಡಿದೆ. ಹಾಗಾಗಿ ಈ ಸಿನಿಮಾ ಕೂಡ ರೌಡಿಸಂ ಸಿನಿಮಾ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯವ ಸಾಧ್ಯತೆಯಿದೆ. ಶಿವರಾತ್ರಿಯಂದು ಹೊಸ ಸಿನಿಮಾ ಘೋಷಣೆ? ಶಿವರಾತ್ರಿಯ ಸಂದರ್ಭದಲ್ಲಿ ದುನಿಯಾ ವಿಜಯ್ ಅವರ ಹೊಸ ಸಿನಿಮಾ ಅನೌನ್ಸ್‌ ಆಗಲಿದೆ ಎನ್ನಲಾಗಿತ್ತು. ಒಂದೇ ಬಾರಿಗೆ ಎರಡು ಸಿನಿಮಾ ಒಪ್ಪಿಕೊಂಡಿದ್ದಾರಾ? ಇಲ್ಲವಾ ಎಂದು ತಿಳಿಯಲು ಕಾದು ನೋಡಬೇಕು. ಈಗ ಮುಂದಿನ ಸಿನಿಮಾವನ್ನು ದುನಿಯಾ ವಿಜಯ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲು ತೀರ್ಮಾನ ಮಾಡಿದ್ದಾರಂತೆ. ವಿಜಯ್‌ ಈ ಬಾರಿ ಯುವ ಜನಾಂಗದ ಸಮಸ್ಯೆ, ಕುಟುಂಬದಲ್ಲಿ ಉಂಟಾಗುವ ತೊಡಕುಗಳು, ಸಾಮಾಜಿಕವಾಗಿ ಚರ್ಚೆಯಾಗುತ್ತಿರುವ ಹಾಟ್‌ ಟಾಪಿಕ್‌ ಇವುಗಳನ್ನೆಲ್ಲಾ ಇಟ್ಟುಕೊಂಡು ಕಥೆ ಬರೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಸಂಗೀತ ನಿರ್ದೇಶಕ ಚರಣ್‌ ರಾಜ್‌ ದುನಿಯಾ ವಿಜಯ್‌ ಅವರ ಹೊಸ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಸೇನಾ ಸಿನಿಮಾಟೋಗ್ರಫಿ, ಮಾಸ್ತಿ ಸಂಭಾಷಣೆ ಕೂಡ ಈ ಚಿತ್ರದಲ್ಲಿ ಇರಲಿದೆಯಂತೆ. ಎರಡೂ ಬೇರೆ ಬೇರೆ ಸಿನಿಮಾನಾ? ಒಂದೇ ಸಿನಿಮಾನಾ? ಈ ಸಿನಿಮಾಗೆ ಮಹಾಭಾರತದಲ್ಲಿ ಬರುವ ಪಾತ್ರದ ಹೆಸರೊಂದನ್ನು ದುನಿಯಾ ವಿಜಯ್‌ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಮೇಕಿಂಗ್‌ ರಾ ಶೈಲಿಯಲ್ಲಿರಲಿದೆ ಎನ್ನಲಾಗಿದೆ. ಶಿವರಾತ್ರಿ ದಿನ ರಿಲೀಸ್ ಮಾಡುತ್ತೇವೆ ಎಂದು ಹೇಳಿದ್ದ ಪೋಸ್ಟರ್‌ ಬೇರೆ ಸಿನಿಮಾನಾ? ಅಥವಾ ಇದೇ ಪೋಸ್ಟರ್ ಎಂಬುದಕ್ಕೆ ಸ್ಪಷ್ಟನೆ ಇಲ್ಲ. ಈ ಬಗ್ಗೆ ದುನಿಯಾ ವಿಜಯ್ ಅವರೇ ಹೇಳಬೇಕು. ತೆಲುಗಿನಲ್ಲಿ ಸಿನಿಮಾ 'ಸಲಗ' ಯಶಸ್ಸಿನ ಬೆನ್ನಲ್ಲೇ ದುನಿಯಾ ವಿಜಯ್ ಅವರು ತೆಲುಗಿಗೆ ಹಾರಿದ್ದಾರೆ. ನಟನೆಯ ಹೊಸ ಸಿನಿಮಾದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಶೀರ್ಷಿಕೆ ಇಟ್ಟಿಲ್ಲ. ಗೋಪಿಚಂದ್ ಮಲಿನೇನಿ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದಾಗಿದೆ. ಇದು ಬಾಲಯ್ಯ ಅವರ 107ನೇ ಸಿನಿಮಾ. ಶ್ರುತಿ ಹಾಸನ್ ಈ ಚಿತ್ರದ ನಾಯಕಿ. ರಾಯಲಸೀಮಾ ಹಿನ್ನೆಲೆಯಲ್ಲಿ ಚಿತ್ರ ಮೂಡಿ ಬರಲಿದ್ದು, ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಇನ್ನುಳಿದ ಪಾತ್ರವರ್ಗಗಳ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.