ವಿದ್ಯುದೀಕರಣದಿಂದ ರೈಲ್ವೆಗೆ 8,000 ಕೋಟಿ ರೂ. ಉಳಿತಾಯ

ರೈಲ್ವೆ ಮಾರ್ಗಗಳ ವ್ಯಾಪಕ ವಿದ್ಯುದೀಕರಣದಿಂದ ರೈಲ್ವೆಗೆ 2020-21ರಲ್ಲಿ ಡೀಸೆಲ್‌ಗೆ ಬಳಸುತ್ತಿದ್ದ ವೆಚ್ಚದದಲ್ಲಿ 8,000 ಕೋಟಿ ರೂ. ಉಳಿತಾಯ ಉಂಟಾಗಿದೆ. ಹೆಚ್ಚೆಚ್ಚು ಡೀಸೆಲ್‌ ಎಂಜಿನ್‌ಗಳನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸಲಾಗುತ್ತಿದೆ.

ವಿದ್ಯುದೀಕರಣದಿಂದ ರೈಲ್ವೆಗೆ 8,000 ಕೋಟಿ ರೂ. ಉಳಿತಾಯ
Linkup
ಹೊಸದಿಲ್ಲಿ: ರೈಲ್ವೆ ಮಾರ್ಗಗಳ ವ್ಯಾಪಕ ವಿದ್ಯುದೀಕರಣದಿಂದ ರೈಲ್ವೆಗೆ 2020-21ರಲ್ಲಿ ಡೀಸೆಲ್‌ಗೆ ಬಳಸುತ್ತಿದ್ದ ವೆಚ್ಚದದಲ್ಲಿ 8,000 ಕೋಟಿ ರೂ. ಉಳಿತಾಯ ಉಂಟಾಗಿದೆ. ರೈಲ್ವೆ ಇಲಾಖೆಯು 2018-19ರಿಂದ 2020-21ರ ಅವಧಿಯಲ್ಲಿ ಡೀಸೆಲ್‌ ಬಳಕೆಯನ್ನು 3.06 ಶತಕೋಟಿ ಲೀಟರ್‌ನಿಂದ 1.43 ಶತಕೋಟಿ ಲೀಟರ್‌ಗೆ ತಗ್ಗಿಸಿದೆ. ಹೆಚ್ಚೆಚ್ಚು ಡೀಸೆಲ್‌ ಎಂಜಿನ್‌ಗಳನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸಲಾಗುತ್ತಿದೆ. 2021 ಮಾರ್ಚ್ 31ರೊಳಗೆ ಒಟ್ಟು 63,949 ಕಿ.ಮೀ ರೈಲ್ವೆ ಮಾರ್ಗದಲ್ಲಿ 45,581 ಕಿ.ಮೀಯನ್ನು ವಿದ್ಯುದೀಕರಣಗೊಳಿಸಲಾಗಿದೆ. ವಿದ್ಯುದೀಕರಣದ ಪರಿಣಾಮ 3.7 ದಶಲಕ್ಷ ಟನ್‌ ಕಾರ್ಬನ್‌ ಡೈ ಆಕ್ಸೈಡ್‌ (ಸಿಒಟು) ಮಾಲಿನ್ಯ ತಡೆಯಲಾಗಿದೆ. ಡೀಸೆಲ್‌ ಬಳಕೆ ಕಡಿಮೆಯಾದ್ದರಿಂದ 2018-19 ಮತ್ತು 2020-21ರ ಅವಧಿಯಲ್ಲಿ ಡೀಸೆಲ್‌ ಬಿಲ್‌ ವೆಚ್ಚವು 19,794 ಕೋಟಿ ರೂ.ಗಳಿಂದ 10,374 ಕೋಟಿ ರೂ.ಗೆ ತಗ್ಗಿದೆ. 2023ರೊಳಗೆ ಶೇ.100ರಷ್ಟು ವಿದ್ಯುದೀಕರಣಕ್ಕೆ ಕೇಂದ್ರ ಸರಕಾರ ನಿರ್ಧರಿಸಿದೆ. 2018-19ರಲ್ಲಿ ರೈಲ್ವೆಯ ವಿದ್ಯುತ್‌ ವೆಚ್ಚ 10,451 ಕೋಟಿ ರೂ.ಗಳಾಗಿದ್ದರೆ, 2019-20ರಲ್ಲಿ 11,045 ಕೋಟಿ ರೂ.ಗಳಾಗಿದೆ.