ವಿಕ ವೆಬ್ ಸಿನಿಮಾ ಅವಾರ್ಡ್ಸ್: ನಿಮ್ಮ ಪ್ರಕಾರ ಅತ್ಯುತ್ತಮ ಹಾಸ್ಯ ನಟ ಯಾರು?

#ವಿಕ ವೆಬ್ ಸಿನಿಮಾ ಅವಾರ್ಡ್ಸ್ - 2021ರ ‘ಅತ್ಯುತ್ತಮ ಹಾಸ್ಯ ನಟ’ ವಿಭಾಗದಲ್ಲಿ ಇಲ್ಲಿಯವರೆಗೂ ನಡೆದಿರುವ ವೋಟಿಂಗ್ ಪ್ರಕಾರ ಸಾಧು ಕೋಕಿಲ ಲೀಡಿಂಗ್‌ನಲ್ಲಿದ್ದಾರೆ.

ವಿಕ ವೆಬ್ ಸಿನಿಮಾ ಅವಾರ್ಡ್ಸ್: ನಿಮ್ಮ ಪ್ರಕಾರ ಅತ್ಯುತ್ತಮ ಹಾಸ್ಯ ನಟ ಯಾರು?
Linkup
ಒಂದು ಸಿನಿಮಾ ಅಂದ್ಮೇಲೆ.. ಅದರಲ್ಲಿ ಪ್ರೀತಿ-ಪ್ರೇಮ, ಆಕ್ಷನ್, ಥ್ರಿಲ್ಲಿಂಗ್ ಎಲಿಮೆಂಟ್ಸ್ ಜೊತೆಗೆ ಹಾಸ್ಯವೂ ಇರಬೇಕು. ಎಷ್ಟೋ ಬಾರಿ ಹಾಸ್ಯ ಸನ್ನಿವೇಶಗಳೇ ಸಿನಿಮಾದಲ್ಲಿ ಹೈಲೈಟ್ ಆಗಿರುವ ಉದಾಹರಣೆಗಳು ಇದ್ದಾವೆ. ಹಾಗಾದ್ರೆ, 2021ರಲ್ಲಿ ತೆರೆಕಂಡ ಚಿತ್ರಗಳ ಪೈಕಿ ಯಾವ ಹಾಸ್ಯ ನಟ ನಿಮಗೆ ಅಚ್ಚುಮೆಚ್ಚು? ಅತ್ಯುತ್ತಮ ಹಾಸ್ಯ ನಟನಿಗೆ ನೀವು ವೋಟ್ ಮಾಡುವ ಸಮಯ ಇದೀಗ ಬಂದಿದೆ. ‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್‌’ಅನ್ನು ನಿಮ್ಮ ‘ವಿಜಯ ಕರ್ನಾಟಕ ವೆಬ್’ ಆರಂಭಿಸಿದೆ. 2021ರ ಜನವರಿಯಿಂದ ನವೆಂಬರ್ 30ರವರೆಗೆ ಬಿಡುಗಡೆಯಾದ ಸಿನಿಮಾಗಳನ್ನು ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್‌ಗೆ ನಾಮನಿರ್ದೇಶನ ಮಾಡಲಾಗಿದೆ. 2021ರ ಜನವರಿಯಿಂದ ನವೆಂಬರ್ 30ರವರೆಗೆ ತೆರೆಕಂಡ ಚಿತ್ರಗಳಲ್ಲಿ ‘ಅತ್ಯುತ್ತಮ ಹಾಸ್ಯ ನಟ’ನನ್ನು #ವಿಕ ವೆಬ್ ಸಿನಿಮಾ ಅವಾರ್ಡ್ಸ್ - 2021ಕ್ಕೆ ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮದು… 2021ರ ಬೆಸ್ಟ್ ಕಾಮಿಡಿಯನ್ ಯಾರು ಎಂಬುದನ್ನು ನೀವೇ ನಿರ್ಧರಿಸಿ ‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್‌’ನಲ್ಲಿ ವೋಟ್ ಮಾಡಿ… ನೀವು ನೀಡಿದ ಮತಗಳ ಆಧಾರದ ಮೇಲೆ 2021ರ #ವಿಕ ವೆಬ್ ಸಿನಿಮಾ ಅವಾರ್ಡ್ಸ್ ಘೋಷಿಸಲಾಗುವುದು. ಲೀಡಿಂಗ್‌ನಲ್ಲಿ ‘ಸಾಧು ಕೋಕಿಲ’ 2021ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಸಖತ್’, ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ‘ಯುವರತ್ನ’ ಚಿತ್ರಗಳು ತೆರೆಕಂಡಿದ್ದವು. ಈ ಚಿತ್ರಗಳಲ್ಲಿನ ಹಾಸ್ಯ ಪಾತ್ರಗಳಲ್ಲಿನ ಅಭಿನಯಕ್ಕಾಗಿ ಸಾಧು ಕೋಕಿಲ ಅವರನ್ನು #ವಿಕ ವೆಬ್ ಸಿನಿಮಾ ಅವಾರ್ಡ್ಸ್ - 2021ಕ್ಕೆ ಆಯ್ಕೆ ಮಾಡಲಾಗಿತ್ತು. ಅತ್ಯುತ್ತಮ ಹಾಸ್ಯ ನಟ ವಿಭಾಗದಲ್ಲಿ ಸಾಧು ಕೋಕಿಲ ಜೊತೆಗೆ ಧರ್ಮಣ್ಣ ಕಡೂರು, ಚಿಕ್ಕಣ್ಣ, ರವಿಶಂಕರ್, ರಜನಿಕಾಂತ್ ನಾಮನಿರ್ದೇಶನಗೊಂಡಿದ್ದರು. ಇಲ್ಲಿಯವರೆಗೂ ನಡೆದಿರುವ ವೋಟಿಂಗ್ ಪ್ರಕಾರ, ಸಾಧು ಕೋಕಿಲ ಅವರಿಗೆ 52% ವೋಟ್ಸ್ ಬಿದ್ದಿವೆ. ಧರ್ಮಣ್ಣ ಕಡೂರುಗೆ 26%, ಚಿಕ್ಕಣ್ಣಗೆ 16%, ರವಿಶಂಕರ್‌ಗೆ 5% ಮತ್ತು ರಜನಿಕಾಂತ್‌ಗೆ 1% ವೋಟ್ಸ್ ಬಿದ್ದಿವೆ. #ವಿಕ ವೆಬ್ ಸಿನಿಮಾ ಅವಾರ್ಡ್ಸ್ - 2021ರಲ್ಲಿ ಅತ್ಯುತ್ತಮ ಹಾಸ್ಯ ನಟನನ್ನು ಆಯ್ಕೆ ಮಾಡಲು ಈ ಕೂಡಲೆ ವೋಟ್ ಮಾಡಿ.. ವೋಟ್ ಮಾಡುವುದು ಹೇಗೆ? , ವಿವಿಧ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿರುವ ಪ್ರತಿಭಾವಂತರಿಗೆ ವೋಟ್ ಮಾಡಿ.. ಅತ್ಯುತ್ತಮ ಹಾಸ್ಯ ನಟ ಯಾರು? ಧರ್ಮಣ್ಣ ಕಡೂರು (ಇನ್ಸ್‌ಪೆಕ್ಟರ್ ವಿಕ್ರಂ & ರಾಬರ್ಟ್) ಚಿಕ್ಕಣ್ಣ (ಪೊಗರು) ಸಾಧು ಕೋಕಿಲ (ಸಖತ್, ಪ್ರೇಮಂ ಪೂಜ್ಯಂ & ಯುವರತ್ನ) ರಜನಿಕಾಂತ್ (ನಿನ್ನ ಸನಿಹಕೆ) ರವಿಶಂಕರ್ (ಕೋಟಿಗೊಬ್ಬ 3)