ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಪೆಟ್ರೋಲ್‌ ದರ 102 ರೂ.; ಸತತ ನಾಲ್ಕನೇ ದಿನ ದರ ಏರಿಕೆ

ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಸಂದರ್ಭ ತಡೆ ಹಿಡಿಯಲಾಗಿದ್ದ ತೈಲ ದರ ಏರಿಕೆಯು, ಫಲಿತಾಂಶದ ನಂತರ ಏರುಗತಿಯಲ್ಲಿದೆ. ಸತತ 4 ದಿನಗಳ ದರ ಏರಿಕೆಯ ಪರಿಣಾಮ ರಾಜಸ್ಥಾನ, ಮಧ್ಯ ಪ್ರದೇಶದ ಕೆಲ ಭಾಗಗಳಲ್ಲಿ ಪೆಟ್ರೋಲ್‌ ದರ ಶತಕದ ಗಡಿ ದಾಟಿದೆ.

ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಪೆಟ್ರೋಲ್‌ ದರ 102 ರೂ.; ಸತತ ನಾಲ್ಕನೇ ದಿನ ದರ ಏರಿಕೆ
Linkup
ಹೊಸದಿಲ್ಲಿ: ಮತ್ತು ಮಧ್ಯಪ್ರದೇಶದ ಕೆಲ ಭಾಗಗಳಲ್ಲಿ ಪೆಟ್ರೋಲ್‌ ದರ ಶುಕ್ರವಾರ ಪ್ರತಿ ಲೀಟರ್‌ಗೆ 102 ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ ಪೆಟ್ರೋಲ್‌ ದರದಲ್ಲಿ 29 ಪೈಸೆ ಏರಿಕೆಯಾಗಿದ್ದು, 94.30 ರೂ.ಗೆ ವೃದ್ಧಿಸಿದೆ. 33 ಪೈಸೆ ಏರಿಕೆಯಾಗಿದ್ದು, 86.64 ರೂ.ಗೆ ಜಿಗಿದಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆ ಹಾಗೂ ಮಧ್ಯಪ್ರದೇಶದ ಅನೂಪ್‌ಪುರ್‌ನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 102 ರೂ.ಗೆ ತಲುಪಿದೆ. ಮಹಾರಾಷ್ಟ್ರದ ಪರ್‌ಭಣಿಯಲ್ಲಿ 99.95 ರೂ.ಗೆ ಏರಿದೆ. ಫೆಬ್ರವರಿ ನಂತರ ಎರಡನೇ ಬಾರಿಗೆ ದೇಶದ ಕೆಲವು ಕಡೆಗಳಲ್ಲಿ ಪೆಟ್ರೋಲ್‌ ದರ 100 ರೂ.ಗಳ ಗಡಿ ದಾಟಿದಂತಾಗಿದೆ. ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಸಂದರ್ಭ ತಡೆ ಹಿಡಿಯಲಾಗಿದ್ದ ತೈಲ ದರ ಏರಿಕೆಯು, ಚುನಾವಣಾ ಫಲಿತಾಂಶದ ನಂತರ ಏರುಗತಿಯಲ್ಲಿದೆ. ಸತತ 4 ದಿನಗಳ ಏರಿಕೆಯ ಪರಿಣಾಮ ರಾಜಸ್ಥಾನ ಮತ್ತು ಮಧ್ಯ ಪ್ರದೇಶದ ಕೆಲ ಭಾಗಗಳಲ್ಲಿ ಪೆಟ್ರೋಲ್‌ ದರ ಶತಕದ ಗಡಿ ದಾಟಿದೆ. ದಿಲ್ಲಿಯಲ್ಲಿ ಪೆಟ್ರೋಲ್‌ ದರ 91.27 ರೂ, ಡೀಸೆಲ್‌ ದರ 81.73 ರೂ.ಗೆ ವೃದ್ಧಿಸಿದೆ. ಸ್ಥಳೀಯ ತೆರಿಗೆ (ವ್ಯಾಟ್‌) ಹಾಗೂ ಸಾಗಣೆಯ ವೆಚ್ಚವನ್ನು ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ತೈಲ ದರಗಳು ಭಿನ್ನವಾಗಿರುತ್ತವೆ. ಕಳೆದ ವರ್ಷ ಮಾರ್ಚ್‌ನಲ್ಲಿ ಸರಕಾರವು ಅಬಕಾರಿ ಸುಂಕವನ್ನು ಏರಿಸಿದ ನಂತರ ಇಲ್ಲಿಯ ತನಕ ಪೆಟ್ರೋಲ್‌ ದರದಲ್ಲಿ 21 ರೂ. ಹಾಗೂ ಡೀಸೆಲ್‌ ದರದಲ್ಲಿ 19 ರೂ. ಹೆಚ್ಚಳವಾದಂತಾಗಿದೆ. ತೈಲ ದರ ಜಿಗಿತಕ್ಕೆ ಕಾರಣವೇನು? ಭಾರತದಲ್ಲಿ ಕೋವಿಡ್‌-19 ಬಿಕ್ಕಟ್ಟಿನ ಪರಿಣಾಮ ಬೇಡಿಕೆ ಮಂದಗತಿಯಲ್ಲಿದೆ. ಹೀಗಿದ್ದರೂ, ಜಾಗತಿಕ ಮಟ್ಟದಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಬ್ಯಾರೆಲ್‌ಗೆ 64 ಡಾಲರ್‌ಗೆ ವೃದ್ಧಿಸಿದೆ. ಅಮೆರಿಕ ಮತ್ತು ಚೀನಾದಲ್ಲಿ ಆರ್ಥಿಕತೆಯ ಚೇತರಿಕೆಯ ಪರಿಣಾಮ ಕಚ್ಚಾ ತೈಲಕ್ಕೆ ಬೇಡಿಕೆ ವೃದ್ಧಿಸಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. ಪೆಟ್ರೋಲ್‌ ದರ ಎಲ್ಲಿ ಎಷ್ಟು? (ಲೀಟರ್‌ಗೆ) ಬೆಂಗಳೂರು: 94.30 ರೂ. ಮುಂಬಯಿ: 97.61 ರೂ. ದಿಲ್ಲಿ: 91.27 ರೂ. ಚೆನ್ನೈ: 93.15 ರೂ. ಹೈದರಾಬಾದ್‌: 94.86 ರೂ.