ಜೈಲಿನಿಂದಲೇ ಹೈಕೋರ್ಟ್‌ ಕಲಾಪವನ್ನು ಮೊಬೈಲ್‌ನಲ್ಲಿ ವೀಕ್ಷಿಸಿದ ಡಿಜೆ ಹಳ್ಳಿ ಗಲಭೆ ಆರೋಪಿಗಳು!

ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ 15ನೇ ಆರೋಪಿ ಶೇಕ್‌ ಮೊಹಮ್ಮದ್‌ ಬಿಲಾಲ್‌ ಹಾಗೂ 25ನೇ ಆರೋಪಿ ಮೊಹಮ್ಮದ್‌ ಶರೀಫ್‌ ವಿಡಿಯೋ ಕಾನ್ಫರೆನ್ಸ್‌ ಲಿಂಕ್‌ ಬಳಸಿ ಮೊಬೈಲ್‌ ಮೂಲಕ ಮಂಗಳವಾರ ಹೈಕೋರ್ಟ್‌ ಕಲಾಪ ವೀಕ್ಷಣೆ ಮಾಡಿದ್ದರು. ಈ ವಿಚಾರವನ್ನು ಎನ್‌ಐಎ ಪರ ವಕೀಲ ಪಿ. ಪ್ರಸನ್ನ ಕುಮಾರ್‌ ಹೈಕೋರ್ಟ್‌ ಗಮನಕ್ಕೆ ತಂದಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌, ಪ್ರಕರಣದ ಕುರಿತು ವಿವರಣೆ ನೀಡುವಂತೆ ಸರಕಾರಕ್ಕೆ ಸೂಚಿಸಿತ್ತು.

ಜೈಲಿನಿಂದಲೇ ಹೈಕೋರ್ಟ್‌ ಕಲಾಪವನ್ನು ಮೊಬೈಲ್‌ನಲ್ಲಿ ವೀಕ್ಷಿಸಿದ ಡಿಜೆ ಹಳ್ಳಿ ಗಲಭೆ ಆರೋಪಿಗಳು!
Linkup
ಬೆಂಗಳೂರು: ನಗರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿಗಳಿಬ್ಬರು ಜೈಲಿನಿಂದಲೇ ಮೊಬೈಲ್‌ ಮೂಲಕ ಆನ್‌ಲೈನ್‌ನಲ್ಲಿ ಹೈಕೋರ್ಟ್‌ ಕಲಾಪ ವೀಕ್ಷಿಸಿರುವ ಪ್ರಕರಣದ ತನಿಖೆಗೆ ಪ್ರತ್ಯೇಕ ತಂಡ ರಚನೆ ಮಾಡುವುದಾಗಿ ಹೈಕೋರ್ಟ್‌ ಬುಧವಾರ ಹೇಳಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ 15ನೇ ಆರೋಪಿ ಶೇಕ್‌ ಮೊಹಮ್ಮದ್‌ ಬಿಲಾಲ್‌ ಹಾಗೂ 25ನೇ ಆರೋಪಿ ಮೊಹಮ್ಮದ್‌ ಶರೀಫ್‌ ವಿಡಿಯೋ ಕಾನ್ಫರೆನ್ಸ್‌ ಲಿಂಕ್‌ ಬಳಸಿ ಮೊಬೈಲ್‌ ಮೂಲಕ ಮಂಗಳವಾರ ಹೈಕೋರ್ಟ್‌ ಕಲಾಪ ವೀಕ್ಷಣೆ ಮಾಡಿದ್ದರು. ಈ ವಿಚಾರವನ್ನು ಎನ್‌ಐಎ ಪರ ವಕೀಲ ಪಿ. ಪ್ರಸನ್ನ ಕುಮಾರ್‌ ಹೈಕೋರ್ಟ್‌ ಗಮನಕ್ಕೆ ತಂದಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌, ಪ್ರಕರಣದ ಕುರಿತು ವಿವರಣೆ ನೀಡುವಂತೆ ಸರಕಾರಕ್ಕೆ ಸೂಚಿಸಿತ್ತು. ಪ್ರಕರಣದ ತನಿಖೆ ನಡೆಸಲು ದಕ್ಷಿಣ ವಲಯದ ಡಿಜಿಐ ಟಿ.ಪಿ. ಶೇಷ ಅವರನ್ನು ನಿಯೋಜಿಸಲಾಗುವುದು ಎಂದು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಆರ್‌. ಸುಬ್ರಮಣ್ಯ ತಿಳಿಸಿದರು. ಈ ಹೇಳಿಕೆ ಒಪ್ಪದ ನ್ಯಾಯಪೀಠ, ಈ ರೀತಿಯ ತನಿಖೆ ನಡೆಸುವುದು ಬೇಡ. ಒಬ್ಬ ಪೊಲೀಸ್‌ ಅಧಿಕಾರಿಯು ಮತ್ತೊಬ್ಬ ಪೊಲೀಸ್‌ ಅಧಿಕಾರಿ ರಕ್ಷಣೆ ಮಾಡುತ್ತಾರೆ ಎಂಬ ವಿಷಯ ನಮಗೂ ತಿಳಿದಿದೆ. ಹಾಗಾಗಿ, ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ನಿವೃತ್ತ ಐಎಎಸ್‌-ಐಪಿಎಸ್‌ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ತಂಡ ರಚಿಸಲಾಗುವುದು ಎಂದು ತಿಳಿಸಿತು. ಅದಕ್ಕೆ ನಿಯೋಜಿಸಬಹುದಾದ ಅಧಿಕಾರಿಗಳ ಹೆಸರು ತಿಳಿಸುವಂತೆ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ಗೆ ನ್ಯಾಯಪೀಠ ಸೂಚಿಸಿತು. ಎನ್‌ಐಎ ಪರ ವಕೀಲರು, ಜೈಲು ಅಧಿಕಾರಿಗಳ ಸಹಕಾರದಿಂದ ಕೈದಿಗಳು ಮೊಬೈಲ್‌ ಫೋನ್‌ಗಳನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಇಲ್ಲಿ ಮೊಬೈಲ್‌ ಫೋನ್‌ ಬಳಕೆ ನಿಷೇಧಿಸಬೇಕು. ಭದ್ರತೆ ಹೆಚ್ಚಿಸಬೇಕು ಮತ್ತು ಮೊಬೈಲ್‌ ಫೋನ್‌ಗಳು ಜೈಲುಗಳ ಒಳಗೆ ಹೋಗುವುದನ್ನು ತಡೆಯುವಂತೆ ಪತ್ರದಲ್ಲಿ ನಿರ್ದೇಶಿಸಲಾಗಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದರು.