ಕೊರೊನಾ ಕೇಸ್‌ ಏರಿಕೆಯ ಬೆನ್ನಲ್ಲೇ ದುರ್ಬಲಗೊಂಡ ರೂಪಾಯಿ, ಏಷ್ಯಾದಲ್ಲಿ ಗರಿಷ್ಠ ನಷ್ಟ

ಕಳೆದ 8 ತಿಂಗಳಲ್ಲೇ ಮೊದಲ ಬಾರಿಗೆ ಅಮೆರಿಕದ ಡಾಲರ್‌ ಎದುರು ರೂಪಾಯಿ ವಿನಿಮಯ ದರ 75 ರೂಪಾಯಿಗಿಂತ ಕೆಳಕ್ಕಿಳಿದಿದೆ. ವರ್ಷಾಂತ್ಯದ ವೇಳೆಗೆ ಇದು 76 ರೂಪಾಯಿಗಳನ್ನೂ ಮೀರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಕೊರೊನಾ ಕೇಸ್‌ ಏರಿಕೆಯ ಬೆನ್ನಲ್ಲೇ ದುರ್ಬಲಗೊಂಡ ರೂಪಾಯಿ, ಏಷ್ಯಾದಲ್ಲಿ ಗರಿಷ್ಠ ನಷ್ಟ
Linkup
ಮುಂಬಯಿ: ಮೂರು ತಿಂಗಳ ಹಿಂದೆ ಏಷಿಯಾದಲ್ಲೇ ಅತ್ಯುತ್ತಮ ಗಳಿಕೆ ದಾಖಲಿಸಿದ್ದ ಕರೆನ್ಸಿಯಾಗಿದ್ದ ಇದೀಗ ಇಳಿಕೆಯ ಹಾದಿಗೆ ಮರಳಿದೆ. ದೇಶದಲ್ಲಿ ಪ್ರಕರಣಗಳು ಒಂದೇ ಸಮನೆ ಏರಿಕೆಯಾಗಲು ಆರಂಭವಾಗಿರುವಾಗಲೇ ರೂಪಾಯಿ ದುರ್ಬಲಗೊಂಡಿದ್ದು, ಇಡಿ ಏಷ್ಯಾದಲ್ಲೇ ಅತೀ ಹೆಚ್ಚಿನ ನಷ್ಟ ಅನುಭವಿಸಿದ ಕರೆನ್ಸಿಯಾಗಿ ಗುರುತಿಸಿಕೊಂಡಿದೆ. ಕಳೆದ 8 ತಿಂಗಳಲ್ಲೇ ಮೊದಲ ಬಾರಿಗೆ ಎದುರು ರೂಪಾಯಿ ವಿನಿಮಯ ದರ 75 ರೂಪಾಯಿಗಿಂತ ಕೆಳಕ್ಕಿಳಿದಿದೆ. ವರ್ಷಾಂತ್ಯದ ವೇಳೆಗೆ ಇದು 76 ರೂಪಾಯಿಗಳನ್ನೂ ಮೀರಲಿದೆ ಎಂದು ಫೆಡರಲ್‌ ಬ್ಯಾಂಕ್‌ ತಜ್ಞರು ಅಂದಾಜಿಸಿದ್ದಾರೆ. ಏಪ್ರಿಲ್‌ನಲ್ಲಿ ಡಾಲರ್‌ಗೆ ಹೋಲಿಸಿದರೆ ರೂಪಾಯಿ ಮೌಲ್ಯ ಶೇ.2.6ರಷ್ಟು ಇಳಿಕೆಯಾಗಿದ್ದು, ಇದಕ್ಕೂ ಮೊದಲು ಮಾರ್ಚ್‌ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕೇವಲ ಶೇ.0.1ರಷ್ಟು ಕುಸಿತಗೊಂಡಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದು. ರೂಪಾಯಿ ಮತ್ತಷ್ಟು ದುರ್ಬಲಗೊಳ್ಳಬಹುದು ಎಂದು ವ್ಯಾಪಾರಿಗಳು ಆತಂಕಗೊಂಡಿದ್ದಾರೆ. ಆದರೆ ಕೆಲವು ತಜ್ಞರು ಮಾತ್ರ ಮುಂದಿನ ದಿನಗಳಲ್ಲಿ ಡಾಲರ್‌ ಎದುರು ರೂಪಾಯಿ ಪ್ರಬಲಗೊಳ್ಳಲಿದ್ದು ವರ್ಷಾಂತ್ಯಕ್ಕೆ 73 ರೂಪಾಯಿ ತಲುಪಬಹುದು ಎಂದು ಹೇಳಿದ್ದಾರೆ.