ಈ ಬ್ಯಾಂಕುಗಳಲ್ಲಿ 'ಎಫ್‌ಡಿ' ಇಟ್ಟರೆ 'ಎಸ್‌ಬಿಐ'ಗಿಂತಲೂ ಹೆಚ್ಚು ಬಡ್ಡಿ ಲಭ್ಯ!

ನಿಶ್ಚಿತ ಠೇವಣಿ (ಎಫ್‌ಡಿ) ಯಲ್ಲಿ ಹೂಡಿಕೆ ಮಾಡುವ ಮೊದಲು ಯಾವ ಬ್ಯಾಂಕಿನಲ್ಲಿ ಎಷ್ಟು ಬಡ್ಡಿ ನೀಡುತ್ತಾರೆ ಎಂಬುದನ್ನು ತಿಳಿಯುವುದು ಉತ್ತಮ. ಎಸ್‌ಬಿಐಗಿಂತಲೂ ಹೆಚ್ಚು ಬಡ್ಡಿ ನೀಡುವ ಬ್ಯಾಂಕುಗಳ ವಿವರ ಇಲ್ಲಿದೆ.

ಈ ಬ್ಯಾಂಕುಗಳಲ್ಲಿ 'ಎಫ್‌ಡಿ' ಇಟ್ಟರೆ 'ಎಸ್‌ಬಿಐ'ಗಿಂತಲೂ ಹೆಚ್ಚು ಬಡ್ಡಿ ಲಭ್ಯ!
Linkup
ಬೆಂಗಳೂರು: ಹೂಡಿಕೆ ಮಾಡಿದಾಗ ಲಾಭ ಬಂದೇ ಬರುತ್ತದೆ ಎಂಬ ಖಾತರಿ ಇದ್ದರೆ, ಜನರು ಕಷ್ಟಪಟ್ಟು ಪಟ್ಟು ಗಳಿಸಿದ ಹಣವನ್ನು ಬಂಡವಾಳ ಹೂಡಲು ಮುಂದಾಗುತ್ತಾರೆ. ಇದೇ ರೀತಿ ಸ್ಥಿರ ಠೇವಣಿಗಳು (ಎಫ್‌ಡಿ) ಕೂಡ ನಿಗದಿತ ಬಡ್ಡಿಯ ರೂಪದಲ್ಲಿ ಆದಾಯ ತಂದುಕೊಡುತ್ತವೆ. ಹೀಗಾಗಿಯೇ ಜನರು ತಮ್ಮ ಹಣವನ್ನು ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಕಾರಣ, ಸ್ಥಿರ ಠೇವಣಿ ಕಡಿಮೆ ಅಪಾಯದ ಹೂಡಿಕೆಯ ಸಾಧನವಾಗಿದೆ. ಆದರೆ, ನೀವು ಎಫ್‌ಡಿ ತೆರೆಯಲು ನಿರ್ಧರಿಸುವ ಮೊದಲು ಯಾವ ಬ್ಯಾಂಕಿನಲ್ಲಿ ಎಷ್ಟು ಬಡ್ಡಿ ನೀಡುತ್ತಾರೆ ಎಂಬುದನ್ನು ತಿಳಿಯುವುದು ಒಳ್ಳೆಯದು. ವಿವಿಧ ಅವಧಿಯ ಎಫ್‌ಡಿ ಮೇಲೆ ಯಾವ ಬ್ಯಾಂಕಿನಲ್ಲಿ ಎಷ್ಟು ಬಡ್ಡಿ ನಿಗದಿ ಮಾಡಲಾಗಿದೆ ಎಂಬುದನ್ನು ಹೋಲಿಕೆ ಮಾಡಬೇಕು. ನಂತರ ಹೆಚ್ಚು ಬಡ್ಡಿ ನೀಡುವ ಬ್ಯಾಂಕಿನಲ್ಲಿ ಎಫ್‌ಡಿ ಮಾಡಬಹುದು. ಆದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮೊದಲಾದ ದೇಶದ ಟಾಪ್‌ ಬ್ಯಾಂಕುಗಳಲ್ಲಿ ಎಫ್‌ಡಿ ಮೇಲಿನ ಕೆಲ ಸಮಯದಿಂದ ಇಳಿಕೆಯಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ, ಕೆಲವು ಸಣ್ಣ ಫೈನಾನ್ಸ್‌ ಬ್ಯಾಂಕುಗಳು ಹೆಚ್ಚಿನ ಬಡ್ಡಿದರ ನೀಡುತ್ತಿವೆ. ಸಣ್ಣ ಫೈನಾನ್ಸ್ ಬ್ಯಾಂಕುಗಳು ಶೇ.6.75 ಮತ್ತು ಶೇ.7 ರವರೆಗೂ ಅತ್ಯಧಿಕ ಮಟ್ಟದಲ್ಲಿ ಬಡ್ಡಿ ನೀಡುತ್ತವೆ. ಫೈನಾನ್ಸ್‌ ಬ್ಯಾಂಕುಗಳ ವೆಬ್‌ಸೈಟ್‌ ಪ್ರಕಾರ, ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ 7 ದಿನಗಳಿಂದ 10 ವರ್ಷಗಳವರೆಗಿನ ಎಫ್‌ಡಿ ಮೇಲೆ ಶೇ.3.25 ರಿಂದ ಶೇ.6.75 ರವರೆಗೆ ಬಡ್ಡಿ ನಿಗದಿ ಮಾಡಿದೆ. ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಕೂಡ 7 ದಿನಗಳಿಂದ 10 ವರ್ಷ ಅವಧಿಯ ಎಫ್‌ಡಿ ಮೇಲೆ ಶೇ.3 ರಿಂದ ಶೇ.7ರವರೆಗೆ ಬಡ್ಡಿ ನೀಡುತ್ತಿದೆ.ಜನ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಲ್ಲಿ ವಿವಿಧ ಅವಧಿಯ ಎಫ್‌ಡಿ ಮೇಲೆ ಶೇ. 2.5ರಿಂದ ಶೇ.6.75ರವರೆಗಿನ ಬಡ್ಡಿ ನಿಗದಿಮಾಡಿದೆ. ಉತ್ಕರ್ಶ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್ ಶೇ.3 ರಿಂದ ಶೇ.6.75 ವರೆಗಿನ ಬಡ್ಡಿ ನೀಡುತ್ತಿದೆ. ಎಸ್‌ಬಿಐನಲ್ಲಿ 7 ದಿನಗಳಿಂದ 10 ವರ್ಷಗಳ ವಿವಿಧ ಅವಧಿಯ ಎಫ್‌ಡಿ ಮೇಲೆ ಸಾಮಾನ್ಯ ಗ್ರಾಹಕರಿಗೆ ಶೇ. 2.9 ರಿಂದ ಶೇ.5.4 ರವರೆಗೆ ನೀಡುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ 7 ದಿನದಿಂದ 10 ವರ್ಷಗಳವರೆಗೆ ವಿವಿಧ ಅವಧಿಯ ಠೇವಣಿಗಳ ಮೇಲೆ ಶೇ.2.5 ರಿಂದ ಶೇ.5.50ರವರೆಗೆ ಬಡ್ಡಿ ನೀಡುತ್ತದೆ. ಐಸಿಐಸಿಐ ಬ್ಯಾಂಕ್ 7 ದಿನದಿಂದ 10 ವರ್ಷಗಳವರೆಗಿನ ವಿವಿಧ ಅವಧಿಯ ಠೇವಣಿಗಳ ಮೇಲೆ ಶೇ.2.5ರಿಂದ ಶೇ.5.50ರವರೆಗೆ ಬಡ್ಡಿ ನೀಡುತ್ತದೆ. ಖಾಸಗಿ ಬ್ಯಾಂಕ್ಗಳಲ್ಲಿ 3ರಿಂದ 5 ವರ್ಷದ ಅವಧಿಯ ಎಫ್‌ಡಿ ಮೇಲೆ ಉತ್ತಮ ಬಡ್ಡಿ ನೀಡುವಂಥವು:
  • ಡಿಸಿಬಿ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6.50 ಹಾಗೂ ಹಿರಿಯ ನಾಗರಿಕರಿಗೆ- ಶೇ 7
  • ಆರ್ಬಿಎಲ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6.30 ಹಾಗೂ ಹಿರಿಯ ನಾಗರಿಕರಿಗೆ- ಶೇ 6.80
  • ಯೆಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6.25 ಹಾಗೂ ಹಿರಿಯ ನಾಗರಿಕರಿಗೆ- ಶೇ 7
  • ಇಂಡಸ್ಇಂಡ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6 ಹಾಗೂ ಹಿರಿಯ ನಾಗರಿಕರಿಗೆ- ಶೇ 6.50
  • ಐಡಿಎಫ್ಸಿ ಫಸ್ಟ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6 ಹಾಗೂ ಹಿರಿಯ ನಾಗರಿಕರಿಗೆ- ಶೇ 6.50
  • ಆಕ್ಸಿಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.40 ಹಾಗೂ ಹಿರಿಯ ನಾಗರಿಕರಿಗೆ- ಶೇ 5.90
  • ಐಸಿಐಸಿಐ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.35 ಹಾಗೂ ಹಿರಿಯ ನಾಗರಿಕರಿಗೆ- ಶೇ 5.85
  • ಎಚ್ಡಿಎಫ್ಸಿ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.30 ಹಾಗೂ ಹಿರಿಯ ನಾಗರಿಕರಿಗೆ- ಶೇ 5.80
  • ಬಂಧನ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.25 ಹಾಗೂ ಹಿರಿಯ ನಾಗರಿಕರಿಗೆ- ಶೇ 6
  • ಕೊಟಕ್ ಮಹೀಂದ್ರಾ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.20 ಹಾಗೂ ಹಿರಿಯ ನಾಗರಿಕರಿಗೆ- ಶೇ 5.70