ಇ.ಡಿ ನೋಟಿಸ್‌ಗಳು ಡೆತ್ ವಾರಂಟ್ ಅಲ್ಲ, ಅದು ಲವ್ ಲೆಟರ್‌: ಸಂಜಯ್ ರಾವತ್ ವ್ಯಂಗ್ಯ

ಜಾರಿ ನಿರ್ದೇಶನಾಲಯ ಸಂಸ್ಥೆ ರಾಜಕೀಯ ನಾಯಕರಿಗೆ ಕಳುಹಿಸುವ ನೋಟಿಸ್‌ಗಳು ಡೆತ್ ವಾರಂಟ್ ಅಲ್ಲ. ಅದು ಅವರಿಗೆ ಕಳುಹಿಸುವ ಲವ್ ಲೆಟರ್ ಆಗಿರುತ್ತವೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಟೀಕಿಸಿದ್ದಾರೆ.

ಇ.ಡಿ ನೋಟಿಸ್‌ಗಳು ಡೆತ್ ವಾರಂಟ್ ಅಲ್ಲ, ಅದು ಲವ್ ಲೆಟರ್‌: ಸಂಜಯ್ ರಾವತ್ ವ್ಯಂಗ್ಯ
Linkup
ಮುಂಬಯಿ: (ಇಡಿ) ಹೊರಡಿಸುವ ನೋಟಿಸ್‌ಗಳು 'ಡೆತ್ ವಾರಂಟ್' ಅಲ್ಲ, ಆದರೆ ಅವರು ರಾಜಕೀಯ ಕಾರ್ಯಕರ್ತರಿಗೆ 'ಲವ್ ಲೆಟರ್' ಇದ್ದಂತೆ ಎಂದು ಸಂಸದ , ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮುಂದೆ ಹಾಜರಾಗುವಂತೆ ಮಹಾರಾಷ್ಟ್ರದ ಸಚಿವ ಹಾಗೂ ಶಿವಸೇನಾ ಮುಖಂಡ ಅನಿಲ್ ಪರಬ್ ಅವರಿಗೆ ಇ.ಡಿ ನೋಟಿಸ್ ಜಾರಿ ಮಾಡಿದ ಮರು ದಿನ ರಾವತ್ ಈ ಟೀಕಾಪ್ರಕಾರ ನಡೆಸಿದ್ದಾರೆ. 'ಬಹಳ ಪ್ರಬಲ ಹಾಗೂ ಅಭೇದ್ಯವಾಗಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಗೋಡೆಯನ್ನು ಭೇದಿಸುವ ವಿಫಲ ಪ್ರಯತ್ನಗಳ ಬಳಿಕ ಅಂತಹ ಪ್ರೇಮ ಪತ್ರಗಳ ಹರಿವು ಹೆಚ್ಚಾಗಿದೆ' ಎಂದು ಅವರು ವ್ಯಂಗ್ಯವಾಡಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಬ್ ಅವರನ್ನು ಬಿಜೆಪಿ ನಾಯಕರು ಗುರಿ ಮಾಡಿದ್ದಾರೆ. ಅವರು ನೋಟಿಸ್‌ಗೆ ಪ್ರತಿಕ್ರಿಯೆ ನೀಡಲಿದ್ದಾರೆ ಮತ್ತು ಇ.ಡಿ ಜತೆ ಸಹಕರಿಸಲಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಮತ್ತು ಇತರರ ವಿರುದ್ಧ ದಾಖಲಿಸಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಪರಬ್ ಅವರಿಗೆ ಇ.ಡಿ ಸಮನ್ಸ್ ನೀಡಿತ್ತು. 'ಜಾರಿ ನಿರ್ದೇಶನದಲ್ಲಿ ಒಂದೋ ಬಿಜೆಪಿಯ ವ್ಯಕ್ತಿ ಅಧಿಕಾರಿಯಾಗಿ ಕುಳಿತಿರಬೇಕು, ಇಲ್ಲವೇ ಇ.ಡಿ ಅಧಿಕಾರಿಯೊಬ್ಬರು ಬಿಜೆಪಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿರಬೇಕು' ಎಂದು ಬಿಜೆಪಿಯು ಜಾರಿ ನಿರ್ದೇಶನಾಲಯವನ್ನು ತನ್ನ ರಾಜಕೀಯ ಹಗೆತನ ತೀರಿಸಿಕೊಳ್ಳಲು ಬಳಸುತ್ತಿದೆ ಎಂಬುದಾಗಿ ವ್ಯಂಗ್ಯವಾಡಿದ್ದಾರೆ. ಕೋವಿಡ್ 19 ನಿರ್ಬಂಧಗಳ ಕಾರಣ ಮುಚ್ಚಲಾಗಿರುವ ಮಹಾರಾಷ್ಟ್ರದ ದೇವಸ್ಥಾನಗಳನ್ನು ತೆರೆಯುವಂತೆ ಬಿಜೆಪಿ ಪ್ರತಿಭಟನೆಗಳನ್ನು ನಡೆಸುತ್ತಿರುವುದನ್ನು ಟೀಕಿಸಿದರು. 'ಕೇಂದ್ರ ಸರ್ಕಾರ ನೀಡಿರುವ ಸೂಚನೆಗಳನ್ನು ಅನುಸರಿಸುತ್ತಿದೆ. ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಕೋವಿಡ್ ಹರಡಲು ಅವಕಾಶ ನೀಡದಂತೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಸರ್ಕಾರ ಕೂಡ ಹಿಂದುತ್ವವಾದಿ ಎಂದು ನಾವು ಭಾವಿಸಿದ್ದೇವೆ' ಎಂದಿದ್ದಾರೆ.