ಅಮೆಜಾನ್ ತೆರಿಗೆ ವಿವಾದ ಪ್ರಕರಣದಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್

ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಕ್ಯಾಟರಮನ್ ವೆಂಚರ್ಸ್ ಸಂಸ್ಥೆಯು ಅಮೆಜಾನ್ ಜತೆ ನಡೆಸುತ್ತಿರುವ ಜಂಟಿ ವ್ಯವಹಾರ 'ಕ್ಲೌಡ್‌ಟೈಲ್‌'ನ ತೆರಿಗೆ ವಿವಾದದಲ್ಲಿ ಅವರ ಅಳಿಯ, ಬ್ರಿಟನ್ ಚಾನ್ಸೆಲರ್ ರಿಷಿ ಸುನಕ್ ಅವರೂ ಸಿಲುಕಿದ್ದಾರೆ.

ಅಮೆಜಾನ್ ತೆರಿಗೆ ವಿವಾದ ಪ್ರಕರಣದಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್
Linkup
ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ಅವರ ಅಳಿಯ ಹಾಗೂ ಚಾನ್ಸೆಲರ್ ಸೇವಾ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಅಮೆಜಾನ್‌ನಲ್ಲಿ ನಾರಾಯಣ ಮೂರ್ತಿ ಅವರ ಕ್ಲೌಡ್‌ಟೈಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ವಿವಾದ ಸೃಷ್ಟಿಯಾಗಿದ್ದು, ಡಿಜಿಟಲ್ ವ್ಯವಹಾರಕ್ಕೆ ತೆರಿಗೆ ಪಾವತಿಸಬೇಕಾದ ವಿಚಾರದ ಕುರಿತು ಸುನಕ್ ಅವರ ಕಚೇರಿ ವಿವರಣೆ ನೀಡಿದೆ. ನಾರಾಯಣ ಮೂರ್ತಿ ಅವರ ಕ್ಯಾಟಮರನ್ ವೆಂಚರ್ಸ್ ಹಾಗೂ ಅಮೆಜಾನ್ ನಡುವೆ ಸೃಷ್ಟಿಯಾದ ಕ್ಲೌಡ್‌ಟೈಲ್ ಎಂಬ ಜಂಟಿ ಉದ್ಯಮಕ್ಕೆ ಭಾರತದ ತೆರಿಗೆ ಅಧಿಕಾರಿಗಳು ದಂಡ ಹಾಗೂ ಬಡ್ಡಿ ಸೇರಿದಂತೆ ಸುಮಾರು 55 ಕೋಟಿ ರೂಪಾಯಿ ತೆರಿಗೆ ಪಾವತಿ ಸೂಚನೆ ನೀಡಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಕ್ಲೌಡ್‌ಟೈಲ್, ಅಮೆಜಾನ್‌ನಲ್ಲಿನ ಅತಿ ದೊಡ್ಡ ಮಾರಾಟಗಾರರಲ್ಲಿ ಒಂದಾಗಿದ್ದು, 2020ರ ಹಣಕಾಸು ವರ್ಷದಲ್ಲಿ 11,412 ಕೋಟಿ ರೂ ಆದಾಯ ಗಳಿಸಿತ್ತು. ಜಗತ್ತಿನ ಅತಿ ದೊಡ್ಡ ಆರ್ಥಿಕತೆಗಳ ಜಿ 7 ರಾಷ್ಟ್ರಗಳ ಹಣಕಾಸು ಸಚಿವರ ಸಭೆಯಲ್ಲಿ, ಕಂಪೆನಿಗಳು ತಾವು ವ್ಯವಹಾರ ನಡೆಸಿದ ದೇಶದಲ್ಲಿ ತೆರಿಗೆ ಪಾವತಿಸಬೇಕು ಎಂದು ನಡೆಸಿದ ತೆರಿಗೆ ಒಪ್ಪಂದವನ್ನು ಸುನಕ್ ಸ್ವಾಗತಿಸಿದ್ದರು. ಅದರ ಬೆನ್ನಲ್ಲೇ ಈ ವರದಿ ಪ್ರಕಟವಾಗಿದೆ. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಅಮೆಜಾನ್ ಜತೆಗೂಡಿ ಕ್ಲೌಡ್‌ಟೈಲ್ ಎಂಬ ಉದ್ಯಮ ಆರಂಭಿಸಿದ್ದರು. ಇದರಲ್ಲಿ ಮೂರ್ತಿ ಅವರ ಕ್ಯಾಟರಮನ್ ವೆಂಚರ್ಸ್ ಪರೋಕ್ಷವಾಗಿ ಶೇ 76ರಷ್ಟು ಪಾಲನ್ನು ಹೊಂದಿದೆ. ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯದಿಂದ (ಡಿಜಿಜಿಐ) 2018ರ ಡಿಸೆಂಬರ್ 27ರಂದು 54.5 ಕೋಟಿ ರೂಪಾಯಿ ಮೊತ್ತಕ್ಕೆ ಶೋಕಾಸ್ ನೋಟಿಸ್ ಬಂದಿತ್ತು ಎಂದು ಕ್ಲೌಡ್‌ಟೈಲ್ ತಿಳಿಸಿದೆ. ಇದನ್ನು 2020ರ ಮಾರ್ಚ್ 31ರಂದು ಸಂಭಾವ್ಯ ನಷ್ಟವೆಂದು ಪರಿಗಣಿಸಲಾಗಿತ್ತು. ತೆರಿಗೆ ಸೇವಾ ನೋಟಿಸ್‌ಗೆ ತಾನು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಚಾರವು ಸಂಬಂಧಿಸಿದ ಅಧಿಕಾರಿಗಳ ಮುಂದಿದೆ. ಭಾರತದ ಲೆಕ್ಕಪರಿಶೋಧನೆಯ ಮಾನದಂಡಗಳಿಗೆ ಅನುಗುಣವಾಗಿ 2019ರ ತನ್ನ ವಾರ್ಷಿಕ ವರದಿಯಲ್ಲಿ ಅದನ್ನು ಸಂಭಾವ್ಯ ನಷ್ಟವೆಂದು ಕ್ಲೌಡ್‌ಟೈಲ್ ಬಹಿರಂಗಪಡಿಸಿದೆ. ಇದು ನ್ಯಾಯಾಂಗಕ್ಕೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ನಾವು ಇದರ ಬಗ್ಗೆ ಹೆಚ್ಚು ಮಾಹಿತಿ ನೀಡಲಾಗುವುದಿಲ್ಲ. ಕ್ಲೌಡ್‌ಟೈಲ್ ಭಾರತದ ಕಾನೂನುಗಳಿಗೆ ಸಂಪೂರ್ಣ ಬದ್ಧವಾಗಿದೆ ಎಂದು ಅದರ ವಕ್ತಾರರು ತಿಳಿಸಿದ್ದಾರೆ. 'ಎಲ್ಲಿ ತೆರಿಗೆಯನ್ನು ಪಾವತಿಸಲಾಗುತ್ತಿದೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ ಮತ್ತು ಯಾವುದೇ ಒಪ್ಪಂದಗಳು ಬ್ರಿಟನ್‌ನಲ್ಲಿ ಡಿಜಿಟಲ್ ವ್ಯವಹಾರ ತೆರಿಗೆ ಪಾವತಿಗಳು ಆರ್ಥಿಕ ಚಟುವಟಿಕೆಗಳನ್ನು ಪ್ರತಿಫಲಿಸುವಂತೆ ಇರಬೇಕು. ನಮ್ಮ ತೆರಿಗೆ ಪಾವತಿದಾರರು ನಿರೀಕ್ಷಿಸುವುದು ಇದನ್ನೇ ಹಾಗೂ ಇದೇ ಸರಿಯಾದ ಮಾರ್ಗವಾಗಿದೆ ಎನ್ನುವುದು ಚಾನ್ಸೆಲರ್ ಅವರ ನಿಲುವಾಗಿದೆ' ಎಂದು ಬ್ರಿಟನ್‌ನ ಖಜಾನೆ ಕಚೇರಿ ವಕ್ತಾರರು ತಿಳಿಸಿದ್ದಾರೆ.