ಹಾಕಿ: ಜೂನಿಯರ್ ಏಷ್ಯಾ ಕಪ್ ಫೈನಲ್ ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, 4ನೇ ಬಾರಿ ಟ್ರೋಫಿ ಎತ್ತಿ ಹಿಡಿದ ಟೀಂ ಇಂಡಿಯಾ

ಪುರುಷರ ಜೂನಿಯರ್ ಏಷ್ಯಾಕಪ್ 2023 ಹಾಕಿ ಫೈನಲ್‌ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಪಾಕಿಸ್ತಾನವನ್ನು ಮಣಿಸಿದ್ದು, ನಾಲ್ಕನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. ಸಲಾಲಾ: ಪುರುಷರ ಜೂನಿಯರ್ ಏಷ್ಯಾಕಪ್ 2023 ಹಾಕಿ ಫೈನಲ್‌ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಪಾಕಿಸ್ತಾನವನ್ನು ಮಣಿಸಿದ್ದು, ನಾಲ್ಕನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. ಒಮನ್‌ನ ಸಲಾಲಾದಲ್ಲಿ ಇಂದು ನಡೆದ ಪುರುಷರ ಜೂನಿಯರ್ ಏಷ್ಯಾಕಪ್ 2023 ಹಾಕಿ ರೋಚಕ ಫೈನಲ್‌ನಲ್ಲಿ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಭಾರತದ ಅಂಗಾದ್ ಬೀರ್ ಸಿಂಗ್ (13ನೇ ನಿಮಿಷ) ಮತ್ತು ಅರೈಜೀತ್ ಸಿಂಗ್ ಹುಂದಾಲ್ (20ನೇ ನಿಮಿಷ) ಗಳಿಸಿದ ಆರಂಭಿಕ ಗೋಲುಗಳು ಭಾರತಕ್ಕೆ ಆರಂಭಿಕ ಮುನ್ನಡೆ ಮಾತ್ರವಲ್ಲದೇ ಕೊನೆಯವರೆಗೂ ಪಂದ್ಯ ಭಾರತದ ಮುಷ್ಟಿಯಿಂದ ಜಾರದಂತೆ ನೋಡಿಕೊಂಡಿತು. Agony and ecstasy India beat Pakistan 2-1 to win Junior Asia Cup#Hockey pic.twitter.com/1hgxudvo3z — Muneeb Farrukh (@Muneeb313_) June 1, 2023 ಭಾರತದ ಗೋಲ್‌ಕೀಪರ್ ಶಶಿಕುಮಾರ್ ಮೋಹಿತ್ ಹೊನ್ನೇನಹಳ್ಳಿ ಅವರ ಕೆಲವು ಅತ್ಯುತ್ತಮ ಸೇವ್‌ಗಳು ಕೂಡ ಪಂದ್ಯದುದ್ದಕ್ಕೂ ಭಾರತವನ್ನು ಮುನ್ನಡೆಯಲ್ಲಿರಿಸಿತು. ಪಂದ್ಯದ 38ನೇ ನಿಮಿಷದಲ್ಲಿ ಪಾಕಿಸ್ತಾನದ ಅಲಿ ಬಷಾರಾತ್ ಅವರು ಶಾಹೀದ್ ಅಬ್ದುಲ್ ನೀಡಿದ ಅದ್ಭುತ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿದರು. ಆ ಮೂಲಕ ಪಾಕಿಸ್ತಾನ ತನ್ನ ಗೋಲುಗಳ ಅಂತರವನ್ನು 1-2ಕ್ಕೆ ಇಳಿಕೆ ಮಾಡಿಕೊಂತು. ಆದರೆ ಬಳಿಕ ಅಂತಿಮ ಕ್ಷಣದವರೆಗೂ ಭಾರತ ರಕ್ಷಣಾತ್ಮಕ ಆಟವಾಡುವ ಮೂಲಕ ಪಾಕಿಸ್ತಾನಕ್ಕೆ ಮತ್ತೆ ಯಾವುದೇ ಅವಕಾಶ ನೀಡಲಿಲ್ಲ. ಅಂತಿಮವಾಗಿ ಭಾರತ 2-1 ಅಂತರದಲ್ಲಿ ಪಾಕಿಸ್ತಾನವನ್ನು ಮಣಿಸಿ 4ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿತು. With the accolades comes the rewards Hockey India rewards the Players and Staff for their fantastic achievement by offering a cash prize of Rs. 2 lakhs for each Player and 1 lakh for each Support Staff of the Junior Men's Hockey Team.#HockeyIndia #IndiaKaGame #AsiaCup2023… pic.twitter.com/U53vOZGLHy — Hockey India (@TheHockeyIndia) June 1, 2023 ಈ ಗೆಲುವಿನೊಂದಿಗೆ ಭಾರತ ಪುರುಷರ ಜೂನಿಯರ್ ಏಷ್ಯಾಕಪ್‌ನಲ್ಲಿ ಗರಿಷ್ಠ ಪ್ರಶಸ್ತಿಗಳನ್ನು ಗೆದ್ದು ಹೊಸ ದಾಖಲೆ ನಿರ್ಮಿಸಿದೆ. ಈ ಹಿಂದೆ ಭಾರತ 2004, 2008 ಮತ್ತು 2015 ರಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರೆ, ಪಾಕಿಸ್ತಾನವು 1988, 1992, 1996 ರಲ್ಲಿ ಪ್ರಶಸ್ತಿ ಗೆದ್ದಿದೆ. ಇದನ್ನೂ ಓದಿ: ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಪ್ರತಿಭಟನೆ: ಮಹಿಳಾ ಕುಸ್ತಿಪಟುಗಳಿಗೆ ನೀರಜ್ ಚೋಪ್ರಾ ಬೆಂಬಲ ಆಟಗಾರರಿಗೆ ತಲಾ 2 ಲಕ್ಷ, ಸಹಾಯಕ ಸಿಬ್ಬಂದಿಗೆ ತಲಾ 1 ಲಕ್ಷ ರೂ ನಗದು ಬಹುಮಾನ ಘೋಷಣೆ ಇನ್ನು ತಂಡದ ಪ್ರಯತ್ನ ಮತ್ತು ಅವರ ಅಜೇಯ ದಾಖಲೆಯನ್ನು ಗುರುತಿಸಿದ ಹಾಕಿ ಇಂಡಿಯಾ ಕಾರ್ಯಕಾರಿ ಮಂಡಳಿಯು ಆಟಗಾರರಿಗೆ ತಲಾ 2 ಲಕ್ಷ ರೂ ಮತ್ತು ಸಹಾಯಕ ಸಿಬ್ಬಂದಿಗೆ ತಲಾ 1 ಲಕ್ಷ ರೂ ನಗದು ಬಹುಮಾನವನ್ನು ಘೋಷಿಸಿದೆ. ತಂಡವನ್ನು ಅಭಿನಂದಿಸಿದ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರು ಹಾಕಿ ಇಂಡಿಯಾ ಪತ್ರಿಕಾ ಪ್ರಕಟಣೆಯನ್ನು ಉಲ್ಲೇಖಿಸಿ, "ಭಾರತೀಯ ಜೂನಿಯರ್ ಪುರುಷರ ತಂಡವು ಜೂನಿಯರ್ ಏಷ್ಯಾ ಕಪ್‌ನಲ್ಲಿ ತಮ್ಮ ಅಜೇಯ ಪ್ರದರ್ಶನದಿಂದ ನಮಗೆಲ್ಲರಿಗೂ ಅತ್ಯಂತ ಹೆಮ್ಮೆ ತಂದಿದೆ. ತಂಡವು ಉತ್ತಮ ಭರವಸೆಯನ್ನು ತೋರಿಸಿದೆ. Great team work and great performance, Many many congratulations team #AsiaCup2023 #hockeyindia @TheHockeyIndia @sports_odisha pic.twitter.com/JstsC8vaVq — Lalit Upadhyay (@lalithockey) June 1, 2023 ಕಳೆದ ಕೆಲವು ತಿಂಗಳುಗಳಲ್ಲಿ, ವಿಶೇಷವಾಗಿ ಸುಲ್ತಾನ್ ಆಫ್ ಜೋಹರ್ ಕಪ್‌ನಲ್ಲಿ ಅವರ ಐತಿಹಾಸಿಕ ಗೆಲುವಿನ ನಂತರ ಅವರು ಪ್ರಾಬಲ್ಯ ಸಾಧಿಸಿದ್ದಾರೆ ಮತ್ತು ಈ ದೊಡ್ಡ ಗೆಲುವು ಈ ವರ್ಷದ ನಂತರ ಜೂನಿಯರ್ ವಿಶ್ವಕಪ್‌ಗೆ ಉತ್ತಮ ಸ್ಥಾನವನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ. ಹಾಕಿ ಇಂಡಿಯಾ ಅವರನ್ನು ಗೌರವಿಸಲು ನಿರ್ಧರಿಸಿದೆ. ಈ ಸಾಧನೆಗಾಗಿ ಆಟಗಾರರು ಯೋಗ್ಯವಾದ ನಗದು ಪ್ರಶಸ್ತಿಯನ್ನು ಹೊಂದಿದ್ದಾರೆ. ಅವರ ಪ್ರಯತ್ನಗಳಿಗಾಗಿ ನಾನು ತಂಡ ಮತ್ತು ಸಹಾಯಕ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಸ್ತಿಪಟುಗಳ ಜೊತೆ ಅನುಚಿತ ವರ್ತನೆಯಿಂದ ನಿರಾಶೆಗೊಂಡಿದ್ದೇನೆ: ಅನಿಲ್ ಕುಂಬ್ಳೆ ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಕೂಡ ತಂಡದ ಯಶಸ್ವಿ ಅಭಿಯಾನಕ್ಕೆ ಶುಭ ಹಾರೈಸಿದ್ದಾರೆ. "ತಂಡವು ಪ್ರತಿ ಪಂದ್ಯದಲ್ಲೂ ಉತ್ತಮ ಪಾತ್ರ ಮತ್ತು ಆಟದ ಸ್ಪೂರ್ತಿಯನ್ನು ಪ್ರದರ್ಶಿಸಿದೆ. ಜೂನಿಯರ್ ಏಷ್ಯಾ ಕಪ್‌ನಲ್ಲಿ ತಂಡದ ಮುಂದುವರಿದ ಯಶಸ್ಸು U21 ಗಾಗಿ ಹಾಕಿ ಇಂಡಿಯಾದ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಭಾರತ ತಂಡವನ್ನು ಮುಂದುವರಿಸುವುದಕ್ಕಾಗಿ ನಾನು ತಂಡ ಮತ್ತು ಸಹಾಯಕ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ. ಜೂನಿಯರ್ ಏಷ್ಯಾ ಕಪ್‌ನಲ್ಲಿ ಅಖಂಡ ದಾಖಲೆ," ಎಂದು ಭೋಲಾ ಹೇಳಿದರು.

ಹಾಕಿ: ಜೂನಿಯರ್ ಏಷ್ಯಾ ಕಪ್ ಫೈನಲ್ ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, 4ನೇ ಬಾರಿ ಟ್ರೋಫಿ ಎತ್ತಿ ಹಿಡಿದ ಟೀಂ ಇಂಡಿಯಾ
Linkup
ಪುರುಷರ ಜೂನಿಯರ್ ಏಷ್ಯಾಕಪ್ 2023 ಹಾಕಿ ಫೈನಲ್‌ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಪಾಕಿಸ್ತಾನವನ್ನು ಮಣಿಸಿದ್ದು, ನಾಲ್ಕನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. ಸಲಾಲಾ: ಪುರುಷರ ಜೂನಿಯರ್ ಏಷ್ಯಾಕಪ್ 2023 ಹಾಕಿ ಫೈನಲ್‌ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಪಾಕಿಸ್ತಾನವನ್ನು ಮಣಿಸಿದ್ದು, ನಾಲ್ಕನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. ಒಮನ್‌ನ ಸಲಾಲಾದಲ್ಲಿ ಇಂದು ನಡೆದ ಪುರುಷರ ಜೂನಿಯರ್ ಏಷ್ಯಾಕಪ್ 2023 ಹಾಕಿ ರೋಚಕ ಫೈನಲ್‌ನಲ್ಲಿ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಭಾರತದ ಅಂಗಾದ್ ಬೀರ್ ಸಿಂಗ್ (13ನೇ ನಿಮಿಷ) ಮತ್ತು ಅರೈಜೀತ್ ಸಿಂಗ್ ಹುಂದಾಲ್ (20ನೇ ನಿಮಿಷ) ಗಳಿಸಿದ ಆರಂಭಿಕ ಗೋಲುಗಳು ಭಾರತಕ್ಕೆ ಆರಂಭಿಕ ಮುನ್ನಡೆ ಮಾತ್ರವಲ್ಲದೇ ಕೊನೆಯವರೆಗೂ ಪಂದ್ಯ ಭಾರತದ ಮುಷ್ಟಿಯಿಂದ ಜಾರದಂತೆ ನೋಡಿಕೊಂಡಿತು. ಭಾರತದ ಗೋಲ್‌ಕೀಪರ್ ಶಶಿಕುಮಾರ್ ಮೋಹಿತ್ ಹೊನ್ನೇನಹಳ್ಳಿ ಅವರ ಕೆಲವು ಅತ್ಯುತ್ತಮ ಸೇವ್‌ಗಳು ಕೂಡ ಪಂದ್ಯದುದ್ದಕ್ಕೂ ಭಾರತವನ್ನು ಮುನ್ನಡೆಯಲ್ಲಿರಿಸಿತು. ಪಂದ್ಯದ 38ನೇ ನಿಮಿಷದಲ್ಲಿ ಪಾಕಿಸ್ತಾನದ ಅಲಿ ಬಷಾರಾತ್ ಅವರು ಶಾಹೀದ್ ಅಬ್ದುಲ್ ನೀಡಿದ ಅದ್ಭುತ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿದರು. ಆ ಮೂಲಕ ಪಾಕಿಸ್ತಾನ ತನ್ನ ಗೋಲುಗಳ ಅಂತರವನ್ನು 1-2ಕ್ಕೆ ಇಳಿಕೆ ಮಾಡಿಕೊಂತು. ಆದರೆ ಬಳಿಕ ಅಂತಿಮ ಕ್ಷಣದವರೆಗೂ ಭಾರತ ರಕ್ಷಣಾತ್ಮಕ ಆಟವಾಡುವ ಮೂಲಕ ಪಾಕಿಸ್ತಾನಕ್ಕೆ ಮತ್ತೆ ಯಾವುದೇ ಅವಕಾಶ ನೀಡಲಿಲ್ಲ. ಅಂತಿಮವಾಗಿ ಭಾರತ 2-1 ಅಂತರದಲ್ಲಿ ಪಾಕಿಸ್ತಾನವನ್ನು ಮಣಿಸಿ 4ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿತು. ಈ ಗೆಲುವಿನೊಂದಿಗೆ ಭಾರತ ಪುರುಷರ ಜೂನಿಯರ್ ಏಷ್ಯಾಕಪ್‌ನಲ್ಲಿ ಗರಿಷ್ಠ ಪ್ರಶಸ್ತಿಗಳನ್ನು ಗೆದ್ದು ಹೊಸ ದಾಖಲೆ ನಿರ್ಮಿಸಿದೆ. ಈ ಹಿಂದೆ ಭಾರತ 2004, 2008 ಮತ್ತು 2015 ರಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರೆ, ಪಾಕಿಸ್ತಾನವು 1988, 1992, 1996 ರಲ್ಲಿ ಪ್ರಶಸ್ತಿ ಗೆದ್ದಿದೆ. ಇದನ್ನೂ ಓದಿ: ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಪ್ರತಿಭಟನೆ: ಮಹಿಳಾ ಕುಸ್ತಿಪಟುಗಳಿಗೆ ನೀರಜ್ ಚೋಪ್ರಾ ಬೆಂಬಲ ಆಟಗಾರರಿಗೆ ತಲಾ 2 ಲಕ್ಷ, ಸಹಾಯಕ ಸಿಬ್ಬಂದಿಗೆ ತಲಾ 1 ಲಕ್ಷ ರೂ ನಗದು ಬಹುಮಾನ ಘೋಷಣೆ ಇನ್ನು ತಂಡದ ಪ್ರಯತ್ನ ಮತ್ತು ಅವರ ಅಜೇಯ ದಾಖಲೆಯನ್ನು ಗುರುತಿಸಿದ ಹಾಕಿ ಇಂಡಿಯಾ ಕಾರ್ಯಕಾರಿ ಮಂಡಳಿಯು ಆಟಗಾರರಿಗೆ ತಲಾ 2 ಲಕ್ಷ ರೂ ಮತ್ತು ಸಹಾಯಕ ಸಿಬ್ಬಂದಿಗೆ ತಲಾ 1 ಲಕ್ಷ ರೂ ನಗದು ಬಹುಮಾನವನ್ನು ಘೋಷಿಸಿದೆ. ತಂಡವನ್ನು ಅಭಿನಂದಿಸಿದ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರು ಹಾಕಿ ಇಂಡಿಯಾ ಪತ್ರಿಕಾ ಪ್ರಕಟಣೆಯನ್ನು ಉಲ್ಲೇಖಿಸಿ, "ಭಾರತೀಯ ಜೂನಿಯರ್ ಪುರುಷರ ತಂಡವು ಜೂನಿಯರ್ ಏಷ್ಯಾ ಕಪ್‌ನಲ್ಲಿ ತಮ್ಮ ಅಜೇಯ ಪ್ರದರ್ಶನದಿಂದ ನಮಗೆಲ್ಲರಿಗೂ ಅತ್ಯಂತ ಹೆಮ್ಮೆ ತಂದಿದೆ. ತಂಡವು ಉತ್ತಮ ಭರವಸೆಯನ್ನು ತೋರಿಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ವಿಶೇಷವಾಗಿ ಸುಲ್ತಾನ್ ಆಫ್ ಜೋಹರ್ ಕಪ್‌ನಲ್ಲಿ ಅವರ ಐತಿಹಾಸಿಕ ಗೆಲುವಿನ ನಂತರ ಅವರು ಪ್ರಾಬಲ್ಯ ಸಾಧಿಸಿದ್ದಾರೆ ಮತ್ತು ಈ ದೊಡ್ಡ ಗೆಲುವು ಈ ವರ್ಷದ ನಂತರ ಜೂನಿಯರ್ ವಿಶ್ವಕಪ್‌ಗೆ ಉತ್ತಮ ಸ್ಥಾನವನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ. ಹಾಕಿ ಇಂಡಿಯಾ ಅವರನ್ನು ಗೌರವಿಸಲು ನಿರ್ಧರಿಸಿದೆ. ಈ ಸಾಧನೆಗಾಗಿ ಆಟಗಾರರು ಯೋಗ್ಯವಾದ ನಗದು ಪ್ರಶಸ್ತಿಯನ್ನು ಹೊಂದಿದ್ದಾರೆ. ಅವರ ಪ್ರಯತ್ನಗಳಿಗಾಗಿ ನಾನು ತಂಡ ಮತ್ತು ಸಹಾಯಕ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಸ್ತಿಪಟುಗಳ ಜೊತೆ ಅನುಚಿತ ವರ್ತನೆಯಿಂದ ನಿರಾಶೆಗೊಂಡಿದ್ದೇನೆ: ಅನಿಲ್ ಕುಂಬ್ಳೆ ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಕೂಡ ತಂಡದ ಯಶಸ್ವಿ ಅಭಿಯಾನಕ್ಕೆ ಶುಭ ಹಾರೈಸಿದ್ದಾರೆ. "ತಂಡವು ಪ್ರತಿ ಪಂದ್ಯದಲ್ಲೂ ಉತ್ತಮ ಪಾತ್ರ ಮತ್ತು ಆಟದ ಸ್ಪೂರ್ತಿಯನ್ನು ಪ್ರದರ್ಶಿಸಿದೆ. ಜೂನಿಯರ್ ಏಷ್ಯಾ ಕಪ್‌ನಲ್ಲಿ ತಂಡದ ಮುಂದುವರಿದ ಯಶಸ್ಸು U21 ಗಾಗಿ ಹಾಕಿ ಇಂಡಿಯಾದ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಭಾರತ ತಂಡವನ್ನು ಮುಂದುವರಿಸುವುದಕ್ಕಾಗಿ ನಾನು ತಂಡ ಮತ್ತು ಸಹಾಯಕ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ. ಜೂನಿಯರ್ ಏಷ್ಯಾ ಕಪ್‌ನಲ್ಲಿ ಅಖಂಡ ದಾಖಲೆ," ಎಂದು ಭೋಲಾ ಹೇಳಿದರು. ಹಾಕಿ: ಜೂನಿಯರ್ ಏಷ್ಯಾ ಕಪ್ ಫೈನಲ್ ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, 4ನೇ ಬಾರಿ ಟ್ರೋಫಿ ಎತ್ತಿ ಹಿಡಿದ ಟೀಂ ಇಂಡಿಯಾ