ವಿಶ್ವ ಚಾಂಪಿಯನ್ಷಿಪ್ ಟ್ರಯಲ್ಸ್ ಗೆ ಸಿದ್ಧರಾಗಲು ಹೆಚ್ಚಿನ ಸಮಯ ಕೇಳಿದ ಕುಸ್ತಿಪಟುಗಳು!

ಆ.10 ರ ವೇಳೆಗೆ ವಿಶ್ವ ಚಾಂಪಿಯನ್ಷಿಪ್ ಟ್ರಯಲ್ ನಡೆಯಲಿದ್ದು, ಏಷ್ಯನ್ ಗೇಮ್ಸ್ ಆಯ್ಕೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಸ್ತಿಪಟುಗಳಿಗೆ ಮತ್ತೊಂದು ಸ್ಪರ್ಧೆಗೆ ತಯಾರಿ ನಡೆಸಲು 17 ದಿನಗಳಷ್ಟೇ ಸಮಯ ಸಿಗಲಿದೆ.  ನವದೆಹಲಿ: ಆ.10 ರ ವೇಳೆಗೆ ವಿಶ್ವ ಚಾಂಪಿಯನ್ಷಿಪ್ ಟ್ರಯಲ್ ನಡೆಯಲಿದ್ದು, ಏಷ್ಯನ್ ಗೇಮ್ಸ್ ಆಯ್ಕೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಸ್ತಿಪಟುಗಳಿಗೆ ಮತ್ತೊಂದು ಸ್ಪರ್ಧೆಗೆ ತಯಾರಿ ನಡೆಸಲು 17 ದಿನಗಳಷ್ಟೇ ಸಮಯ ಸಿಗಲಿದೆ.  ಏಷ್ಯನ್ ಗೇಮ್ಸ್ ಟ್ರಯಲ್ಸ್ ನ್ನು ಗೆದ್ದ ಕುಸ್ತಿಪಟುಗಳು ಆ.20 ರೊಳಗೆ ಚಾಂಪಿಯನ್ಷಿಪ್ ಟ್ರಯಲ್ ಗಳನ್ನು ನಡೆಸದಂತೆ ಕ್ರೀಡಾ ಸಚಿವಾಲಯ ಹಾಗೂ ಐಒಎ ಗೆ ಮನವಿ ಮಾಡಿದ್ದಾರೆ. ಸ್ಪರ್ಧೆಯ ಬೆನ್ನಲ್ಲೇ ದೀರ್ಘಾವಧಿಯ ಟ್ರಯಲ್ ಗಳನ್ನು ಪದೇ ಪದೇ ನಡೆಸಿದಲ್ಲಿ ತೂಕ ಇಳಿಕೆಯಾಗಿ ಪರಿಣಾಮ ದೊಡ್ಡ ಮಟ್ಟದ ಕಾರ್ಯಕ್ರಮಗಳಲ್ಲಿ ಗಾಯಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದು ಕುಸ್ತಿಪಟುಗಳು ನೀಡುತ್ತಿರುವ ಕಾರಣವಾಗಿದೆ. ಮಾನ್ಸಿ ಅಹ್ಲಾವತ್ (ಮಹಿಳೆಯರ ವಿಭಾಗದಲ್ಲಿ 57 ಕೆ.ಜಿ), ವಿಶಾಲ್ (ಪುರುಷರ ವಿಭಾಗದ 65 ಕೆ.ಜಿ),  ಅಮಾನ್ ಸೆಹ್ರಾವತ್ (ಪುರುಷರ ವಿಭಾಗದಲ್ಲಿ 57 ಕೆ.ಜಿ) ಪೂಜಾ ಗೆಹ್ಲೋಟ್ ( ಮಹಿಳೆಯರ ವಿಭಾಗದಲ್ಲಿ 50 ಕೆ.ಜಿ) ಮುಂತಾದ ಕುಸ್ತಿಪಟುಗಳೂ ಇದೇ ರೀತಿಯ ಮನವಿ ಸಲ್ಲಿಸಿದ್ದಾರೆ.

ವಿಶ್ವ ಚಾಂಪಿಯನ್ಷಿಪ್ ಟ್ರಯಲ್ಸ್ ಗೆ ಸಿದ್ಧರಾಗಲು ಹೆಚ್ಚಿನ ಸಮಯ ಕೇಳಿದ ಕುಸ್ತಿಪಟುಗಳು!
Linkup
ಆ.10 ರ ವೇಳೆಗೆ ವಿಶ್ವ ಚಾಂಪಿಯನ್ಷಿಪ್ ಟ್ರಯಲ್ ನಡೆಯಲಿದ್ದು, ಏಷ್ಯನ್ ಗೇಮ್ಸ್ ಆಯ್ಕೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಸ್ತಿಪಟುಗಳಿಗೆ ಮತ್ತೊಂದು ಸ್ಪರ್ಧೆಗೆ ತಯಾರಿ ನಡೆಸಲು 17 ದಿನಗಳಷ್ಟೇ ಸಮಯ ಸಿಗಲಿದೆ.  ನವದೆಹಲಿ: ಆ.10 ರ ವೇಳೆಗೆ ವಿಶ್ವ ಚಾಂಪಿಯನ್ಷಿಪ್ ಟ್ರಯಲ್ ನಡೆಯಲಿದ್ದು, ಏಷ್ಯನ್ ಗೇಮ್ಸ್ ಆಯ್ಕೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಸ್ತಿಪಟುಗಳಿಗೆ ಮತ್ತೊಂದು ಸ್ಪರ್ಧೆಗೆ ತಯಾರಿ ನಡೆಸಲು 17 ದಿನಗಳಷ್ಟೇ ಸಮಯ ಸಿಗಲಿದೆ.  ಏಷ್ಯನ್ ಗೇಮ್ಸ್ ಟ್ರಯಲ್ಸ್ ನ್ನು ಗೆದ್ದ ಕುಸ್ತಿಪಟುಗಳು ಆ.20 ರೊಳಗೆ ಚಾಂಪಿಯನ್ಷಿಪ್ ಟ್ರಯಲ್ ಗಳನ್ನು ನಡೆಸದಂತೆ ಕ್ರೀಡಾ ಸಚಿವಾಲಯ ಹಾಗೂ ಐಒಎ ಗೆ ಮನವಿ ಮಾಡಿದ್ದಾರೆ. ಸ್ಪರ್ಧೆಯ ಬೆನ್ನಲ್ಲೇ ದೀರ್ಘಾವಧಿಯ ಟ್ರಯಲ್ ಗಳನ್ನು ಪದೇ ಪದೇ ನಡೆಸಿದಲ್ಲಿ ತೂಕ ಇಳಿಕೆಯಾಗಿ ಪರಿಣಾಮ ದೊಡ್ಡ ಮಟ್ಟದ ಕಾರ್ಯಕ್ರಮಗಳಲ್ಲಿ ಗಾಯಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದು ಕುಸ್ತಿಪಟುಗಳು ನೀಡುತ್ತಿರುವ ಕಾರಣವಾಗಿದೆ. ಮಾನ್ಸಿ ಅಹ್ಲಾವತ್ (ಮಹಿಳೆಯರ ವಿಭಾಗದಲ್ಲಿ 57 ಕೆ.ಜಿ), ವಿಶಾಲ್ (ಪುರುಷರ ವಿಭಾಗದ 65 ಕೆ.ಜಿ),  ಅಮಾನ್ ಸೆಹ್ರಾವತ್ (ಪುರುಷರ ವಿಭಾಗದಲ್ಲಿ 57 ಕೆ.ಜಿ) ಪೂಜಾ ಗೆಹ್ಲೋಟ್ ( ಮಹಿಳೆಯರ ವಿಭಾಗದಲ್ಲಿ 50 ಕೆ.ಜಿ) ಮುಂತಾದ ಕುಸ್ತಿಪಟುಗಳೂ ಇದೇ ರೀತಿಯ ಮನವಿ ಸಲ್ಲಿಸಿದ್ದಾರೆ. ವಿಶ್ವ ಚಾಂಪಿಯನ್ಷಿಪ್ ಟ್ರಯಲ್ಸ್ ಗೆ ಸಿದ್ಧರಾಗಲು ಹೆಚ್ಚಿನ ಸಮಯ ಕೇಳಿದ ಕುಸ್ತಿಪಟುಗಳು!