ರುಚಿಕರ ತಿಂಡಿ ಸೇವನೆ ಜೊತೆಗೆ ಡಯೆಟ್ ಮಾಡುವುದು ಹೇಗೆ?

ಮಳೆಗಾಲ ಬಂತೆಂದರೆ... ನಾಲಿಗೆ ರುಚಿ ಕೇಳುತ್ತದೆ... ಬಿಸಿ ಬಿಸಿ ಬಜ್ಜಿ, ಮಸಾಲೆಯುಕ್ತ ಆಹಾರ ಪದಾರ್ಥಗಳು ಬೇಕು ಎನಿಸುತ್ತದೆ. ಆದರೆ, ಇವುಗಳಲ್ಲಿ ಅನಾರೋಗ್ಯಕರ ಹಾಗೂ ಕ್ಯಾಲೋರಿಗಳು ಹೆಚ್ಚಾಗಿರುವುದರಿಂದ ತಿಂಗಳುಗಟ್ಟಲೆ ಮಾಡಿಕೊಂಡು ಬಂದ 'ಡಯೆಟ್' ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಮಳೆಗಾಲ ಬಂತೆಂದರೆ... ನಾಲಿಗೆ ರುಚಿ ಕೇಳುತ್ತದೆ... ಬಿಸಿ ಬಿಸಿ ಬಜ್ಜಿ, ಮಸಾಲೆಯುಕ್ತ ಆಹಾರ ಪದಾರ್ಥಗಳು ಬೇಕು ಎನಿಸುತ್ತದೆ. ಆದರೆ, ಇವುಗಳಲ್ಲಿ ಅನಾರೋಗ್ಯಕರ ಹಾಗೂ ಕ್ಯಾಲೋರಿಗಳು ಹೆಚ್ಚಾಗಿರುವುದರಿಂದ ತಿಂಗಳುಗಟ್ಟಲೆ ಮಾಡಿಕೊಂಡು ಬಂದ 'ಡಯೆಟ್' ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಇಷ್ಟವಾದ ಆಹಾರ ತಿನ್ನದೇ ಇರುವುದು ಅಥವಾ ಕಡಿಮೆ ಆಹಾರ ತಿನ್ನುವುದು ಡಯಟ್​ನ ಯೋಜನೆಯಲ್ಲಿ ಸಾಮಾನ್ಯ. ಡಯೆಟ್​​ ಅನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಉತ್ತಮ ಫಲಿತಾಂಶ ಪಡೆಯಬಹುದು. ಈ ವೇಳೆ ಬಾಯಿಚಪಲದಂತಹ ನೆಚ್ಚಿನ ಊಟಗಳಿಗೆ ಬೇಡ ಎನ್ನುವ ಮೂಲಕ ಡಯೆಟ್​ ನಿಯಮ ಪಾಲನೆಗೆ ಮುಂದಾಗುವುದೂ ಅವಶ್ಯ. ಆದರೆ, ಇಂತಹ ಡಯೆಟ್​ ನಿಯಮಗಳು ಸಾಕಷ್ಟು ಬಾರಿ ವಿಫಲವಾಗುತ್ತವೆ. ಡಯೆಟ್ ಮಾಡುವುದರ ಜೊತೆಗೆ ನೆಚ್ಚಿನ ಆಹಾರ ಸೇವನೆ ಮಾಡಲು ಬಯಸುವವರಿಗೆ ಕೆಲವು ಟಿಪ್ಸ್ ಗಳು ಇಂತಿವೆ... ಇದನ್ನೂ ಓದಿ: ಶುರುವಾಯ್ತು ಮಳೆಗಾಲ: ಅನಾರೋಗ್ಯದಿಂದ ದೂರ ಇರಲು ರೋಗ ನಿರೋಧಕ ಶಕ್ತಿ ಅತ್ಯಗತ್ಯ, ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ... ಡಯೆಟ್ ಜೊತೆಗೆ ನೆಚ್ಚಿನ ಆಹಾರಗಳನ್ನು ಸೇವನೆ ಮಾಡುವುದು ತಪ್ಪಲ್ಲ. ಆದರೆ, ಸೇವನೆ ವೇಳೆ ಮಿತಿ ಇರಬೇಕು. ಪ್ರತಿನಿತ್ಯ ನೆಚ್ಚಿನ ಆಹಾರ ಎಂದು ಸೇವನೆ ಮಾಡುವುದನ್ನು ತಪ್ಪಿಸಿ. ಅನಾರೋಗ್ಯಕರ ತಿಂಡಿಗಳ ಬದಲು ಆರೋಗ್ಯಕರ ತಿನಿಸುಗಳನ್ನು ಸೇವನೆ ಮಾಡಲು ಬಯಸಿ. ಕೆಲವೊಮ್ಮೆ ಬಾಯಾರಿಕೆಯಾದಾಗಲೂ ಹಸಿವು ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ. ಹೀಗಾಗಿ ಹೈಡ್ರೇಟ್ ಆಗಿರಿ. ಹಣ್ಣು, ಮೊಳಕೆಕಾಳುಗಳು, ತರಕಾರಿಗಳನ್ನು ಸೇವನೆ ಮಾಡಿ. ಇವುಗಳಲ್ಲಿ ಸಾಕಷ್ಟು ಪ್ರೋಟೀನ್ ಇರುವುದರಿಂದ ಜೀರ್ಣಕ್ರಿಯೆಗೆ ಸಮಯ ಬೇಕಾಗುತ್ತದೆ. ಆಗಾಗ್ಗೆ ತಿನ್ನಬೇಕೆಂಬ ಬಯಕೆ ಕೂಡ ಕಡಿಮೆಯಾಗುತ್ತದೆ. ಡಯೆಟ್ ಮಾಡುವಾಗ ನಿರ್ಧಿಷ್ಟ ಹಣ್ಣು ಮತ್ತು ತರಕಾರಿಗಳನ್ನು ಮಾತ್ರ ತಿನ್ನುವ ಬದಲು ಎಲ್ಲಾ ರೀತಿಯ ಹಣ್ಣು-ತರಕಾರಿ ಸೇವನೆ ಮಾಡಿ. ಇದರಿಂದ ದೇಹದ ತೂಕ ಕಡಿಮೆಯಾಗುವುದರ ಜೊತೆಗೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ. ಪ್ರತಿನಿತ್ಯ 30-40 ನಿಮಿಷವಾದರೂ ವ್ಯಾಯಾಮ ಮಾಡಿ. 7-8 ಗಂಟೆಗಳ ಕಾಲ ನಿದ್ರೆ ಮಾಡಿ. ವ್ಯಾಯಾಮ ಕೇವಲ ದೇಹಕ್ಕಷ್ಟೇ ಅಲ್ಲ, ಮಿದುಳು, ಮುಖಕ್ಕೂ ವ್ಯಾಯಾಮಗಳಿವೆ. ಈ ವ್ಯಾಯಾಮಗಳು ಸಾಕಷ್ಟು ಜನಪ್ರಿಯತೆ ಕೂಡ ಕಂಡುಕೊಂಡಿದೆ. ಇಂತಹ ವ್ಯಾಯಾಮಗಳು ಚರ್ಮ ಸಡಿಲಗೊಳ್ಳದಂತೆ, ಕಳೆ ಕುಗ್ಗದಂತೆ ಮಾಡಲು ಸಹಾಯ ಮಾಡುತ್ತದೆ. ಮುಂಜಾನೆ ನೀರು ಹಾಕಿದರೆ ಮಾತ್ರ ಗಿಡಗಳು ಆರೋಗ್ಯಯುತವಾಗಿ ಬೆಳೆಯುತ್ತವೆ ಎನ್ನುತ್ತಾರೆ, ಅಂತೆಯೇ ಇದರಿಂದ ಮನುಷ್ಯನು ಹೊರತೇನಲ್ಲ. ಪ್ರತಿದಿನ ಮುಂಜಾನೆ ತಪ್ಪದೆ ನೀರು ಸೇವಿಸಿದರೆ ಆರೋಗ್ಯಕರ ಹಾಗು ಸುಂದರ ಮತ್ತು ಆಕರ್ಷಕ ದೇಹ ನಮ್ಮದಾಗುತ್ತದೆ.

ರುಚಿಕರ ತಿಂಡಿ ಸೇವನೆ ಜೊತೆಗೆ ಡಯೆಟ್ ಮಾಡುವುದು ಹೇಗೆ?
Linkup
ಮಳೆಗಾಲ ಬಂತೆಂದರೆ... ನಾಲಿಗೆ ರುಚಿ ಕೇಳುತ್ತದೆ... ಬಿಸಿ ಬಿಸಿ ಬಜ್ಜಿ, ಮಸಾಲೆಯುಕ್ತ ಆಹಾರ ಪದಾರ್ಥಗಳು ಬೇಕು ಎನಿಸುತ್ತದೆ. ಆದರೆ, ಇವುಗಳಲ್ಲಿ ಅನಾರೋಗ್ಯಕರ ಹಾಗೂ ಕ್ಯಾಲೋರಿಗಳು ಹೆಚ್ಚಾಗಿರುವುದರಿಂದ ತಿಂಗಳುಗಟ್ಟಲೆ ಮಾಡಿಕೊಂಡು ಬಂದ 'ಡಯೆಟ್' ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಮಳೆಗಾಲ ಬಂತೆಂದರೆ... ನಾಲಿಗೆ ರುಚಿ ಕೇಳುತ್ತದೆ... ಬಿಸಿ ಬಿಸಿ ಬಜ್ಜಿ, ಮಸಾಲೆಯುಕ್ತ ಆಹಾರ ಪದಾರ್ಥಗಳು ಬೇಕು ಎನಿಸುತ್ತದೆ. ಆದರೆ, ಇವುಗಳಲ್ಲಿ ಅನಾರೋಗ್ಯಕರ ಹಾಗೂ ಕ್ಯಾಲೋರಿಗಳು ಹೆಚ್ಚಾಗಿರುವುದರಿಂದ ತಿಂಗಳುಗಟ್ಟಲೆ ಮಾಡಿಕೊಂಡು ಬಂದ 'ಡಯೆಟ್' ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಇಷ್ಟವಾದ ಆಹಾರ ತಿನ್ನದೇ ಇರುವುದು ಅಥವಾ ಕಡಿಮೆ ಆಹಾರ ತಿನ್ನುವುದು ಡಯಟ್​ನ ಯೋಜನೆಯಲ್ಲಿ ಸಾಮಾನ್ಯ. ಡಯೆಟ್​​ ಅನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಉತ್ತಮ ಫಲಿತಾಂಶ ಪಡೆಯಬಹುದು. ಈ ವೇಳೆ ಬಾಯಿಚಪಲದಂತಹ ನೆಚ್ಚಿನ ಊಟಗಳಿಗೆ ಬೇಡ ಎನ್ನುವ ಮೂಲಕ ಡಯೆಟ್​ ನಿಯಮ ಪಾಲನೆಗೆ ಮುಂದಾಗುವುದೂ ಅವಶ್ಯ. ಆದರೆ, ಇಂತಹ ಡಯೆಟ್​ ನಿಯಮಗಳು ಸಾಕಷ್ಟು ಬಾರಿ ವಿಫಲವಾಗುತ್ತವೆ. ಡಯೆಟ್ ಮಾಡುವುದರ ಜೊತೆಗೆ ನೆಚ್ಚಿನ ಆಹಾರ ಸೇವನೆ ಮಾಡಲು ಬಯಸುವವರಿಗೆ ಕೆಲವು ಟಿಪ್ಸ್ ಗಳು ಇಂತಿವೆ... ಇದನ್ನೂ ಓದಿ: ಶುರುವಾಯ್ತು ಮಳೆಗಾಲ: ಅನಾರೋಗ್ಯದಿಂದ ದೂರ ಇರಲು ರೋಗ ನಿರೋಧಕ ಶಕ್ತಿ ಅತ್ಯಗತ್ಯ, ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ... ಡಯೆಟ್ ಜೊತೆಗೆ ನೆಚ್ಚಿನ ಆಹಾರಗಳನ್ನು ಸೇವನೆ ಮಾಡುವುದು ತಪ್ಪಲ್ಲ. ಆದರೆ, ಸೇವನೆ ವೇಳೆ ಮಿತಿ ಇರಬೇಕು. ಪ್ರತಿನಿತ್ಯ ನೆಚ್ಚಿನ ಆಹಾರ ಎಂದು ಸೇವನೆ ಮಾಡುವುದನ್ನು ತಪ್ಪಿಸಿ. ಅನಾರೋಗ್ಯಕರ ತಿಂಡಿಗಳ ಬದಲು ಆರೋಗ್ಯಕರ ತಿನಿಸುಗಳನ್ನು ಸೇವನೆ ಮಾಡಲು ಬಯಸಿ. ಕೆಲವೊಮ್ಮೆ ಬಾಯಾರಿಕೆಯಾದಾಗಲೂ ಹಸಿವು ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ. ಹೀಗಾಗಿ ಹೈಡ್ರೇಟ್ ಆಗಿರಿ. ಹಣ್ಣು, ಮೊಳಕೆಕಾಳುಗಳು, ತರಕಾರಿಗಳನ್ನು ಸೇವನೆ ಮಾಡಿ. ಇವುಗಳಲ್ಲಿ ಸಾಕಷ್ಟು ಪ್ರೋಟೀನ್ ಇರುವುದರಿಂದ ಜೀರ್ಣಕ್ರಿಯೆಗೆ ಸಮಯ ಬೇಕಾಗುತ್ತದೆ. ಆಗಾಗ್ಗೆ ತಿನ್ನಬೇಕೆಂಬ ಬಯಕೆ ಕೂಡ ಕಡಿಮೆಯಾಗುತ್ತದೆ. ಡಯೆಟ್ ಮಾಡುವಾಗ ನಿರ್ಧಿಷ್ಟ ಹಣ್ಣು ಮತ್ತು ತರಕಾರಿಗಳನ್ನು ಮಾತ್ರ ತಿನ್ನುವ ಬದಲು ಎಲ್ಲಾ ರೀತಿಯ ಹಣ್ಣು-ತರಕಾರಿ ಸೇವನೆ ಮಾಡಿ. ಇದರಿಂದ ದೇಹದ ತೂಕ ಕಡಿಮೆಯಾಗುವುದರ ಜೊತೆಗೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ. ಪ್ರತಿನಿತ್ಯ 30-40 ನಿಮಿಷವಾದರೂ ವ್ಯಾಯಾಮ ಮಾಡಿ. 7-8 ಗಂಟೆಗಳ ಕಾಲ ನಿದ್ರೆ ಮಾಡಿ. ವ್ಯಾಯಾಮ ಕೇವಲ ದೇಹಕ್ಕಷ್ಟೇ ಅಲ್ಲ, ಮಿದುಳು, ಮುಖಕ್ಕೂ ವ್ಯಾಯಾಮಗಳಿವೆ. ಈ ವ್ಯಾಯಾಮಗಳು ಸಾಕಷ್ಟು ಜನಪ್ರಿಯತೆ ಕೂಡ ಕಂಡುಕೊಂಡಿದೆ. ಇಂತಹ ವ್ಯಾಯಾಮಗಳು ಚರ್ಮ ಸಡಿಲಗೊಳ್ಳದಂತೆ, ಕಳೆ ಕುಗ್ಗದಂತೆ ಮಾಡಲು ಸಹಾಯ ಮಾಡುತ್ತದೆ. ಮುಂಜಾನೆ ನೀರು ಹಾಕಿದರೆ ಮಾತ್ರ ಗಿಡಗಳು ಆರೋಗ್ಯಯುತವಾಗಿ ಬೆಳೆಯುತ್ತವೆ ಎನ್ನುತ್ತಾರೆ, ಅಂತೆಯೇ ಇದರಿಂದ ಮನುಷ್ಯನು ಹೊರತೇನಲ್ಲ. ಪ್ರತಿದಿನ ಮುಂಜಾನೆ ತಪ್ಪದೆ ನೀರು ಸೇವಿಸಿದರೆ ಆರೋಗ್ಯಕರ ಹಾಗು ಸುಂದರ ಮತ್ತು ಆಕರ್ಷಕ ದೇಹ ನಮ್ಮದಾಗುತ್ತದೆ. ರುಚಿಕರ ತಿಂಡಿ ಸೇವನೆ ಜೊತೆಗೆ ಡಯೆಟ್ ಮಾಡುವುದು ಹೇಗೆ?