ಮೊರಾಕ್ಕೊದಲ್ಲಿ 6.8 ತೀವ್ರತೆಯ ಭೀಕರ ಭೂಕಂಪನ: ಸಾವಿನ ಸಂಖ್ಯೆ 296ಕ್ಕೆ ಏರಿಕೆ, ಮುಂದುವರೆದ ರಕ್ಷಣಾ ಕಾರ್ಯ

ಆಫ್ರಿಕಾದ ಮೊರಾಕ್ಕೊದಲ್ಲಿ ಮುಂಜಾನೆ ವೇಳೆ ಭಾರೀ ಪ್ರಮಾಣದ ಭೂಕಂಪನ ಸಂಭವಿಸಿದೆ. ಪರಿಣಾಮವಾಗಿ ಅನೇಕ ಕಟ್ಟಡಗಳು ನೆಲಸಮವಾಗಿದ್ದು, ಇಲ್ಲಿಯವರೆಗೆ 296 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ರಬಾತ್‌: ಆಫ್ರಿಕಾದ ಮೊರಾಕ್ಕೊದಲ್ಲಿ ಮುಂಜಾನೆ ವೇಳೆ ಭಾರೀ ಪ್ರಮಾಣದ ಭೂಕಂಪನ ಸಂಭವಿಸಿದೆ. ಪರಿಣಾಮವಾಗಿ ಅನೇಕ ಕಟ್ಟಡಗಳು ನೆಲಸಮವಾಗಿದ್ದು, ಇಲ್ಲಿಯವರೆಗೆ 296 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ಮರ್ರಾಕೆಚ್‌ನ ನೈಋತ್ಯಕ್ಕೆ 71 ಕಿ.ಮೀಟರ್‌ ದೂರದಲ್ಲಿ ಭೂಮಿಯಿಂದ 18 ಕಿ,ಮೀಟರ್‌ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಇಲಾಖೆ ತಿಳಿಸಿದೆ. ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ. ಮನೆಗಳು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಹಲವಾರು ಜನರು ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಗಳು ಭರದಿಂದ ನಡೆಯುತ್ತಿವೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿಗೆ ಎಂದು ಮೊರಾಕ್ಕೊ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಆಫ್ಘಾನಿಸ್ತಾನದಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪನ: ದೆಹಲಿ-ಎನ್‌ಸಿಆರ್‌, ಚಂಡೀಗಢ, ಪಂಜಾಬ್​ನಲ್ಲೂ ನಡುಗಿದ ಭೂಮಿ ಮರ್ರಾಕೆಚ್‌ನ ನೈಋತ್ಯ ಭಾಗ ಭೂಕಂಪನಕ್ಕೆ ಗುರಿಯಾಗುವ ಪ್ರದೇಶವಾಗಿದೆ. 2004ರಲ್ಲಿ ಈಶಾನ್ಯ ಮೊರಾಕ್ಕೊದಲ್ಲಿ ಸಂಭವಿಸಿದ ಭೂಕಂಪದಲ್ಲಿ 628 ಮಂದಿ ಮೃತಪಟ್ಟಿದ್ದರು. ಸುದ್ದಿ ಸಂಸ್ಥೆಗಳ ಪ್ರಕಾರ, ಭೀಕರ ಭೂಕಂಪದಿಂದಾಗಿ ಹಲವು ಹಳೆಯ ಕಟ್ಟಡಗಳು ಕುಸಿದಿವೆ. ನಗರದಲ್ಲಿ ಆಂಬ್ಯುಲೆನ್ಸ್ ಹಾಗೂ ತುರ್ತು ಸೇವೆಗಳ ಕೊರತೆ ಕೂಡ ಕಾಡಿದೆ. ಮತ್ತೆ ಭೂಕಂಪನದ ಭೀತಿಯಿಂದ ಜನರು ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಭೂಕಂಪವು ಎಷ್ಟು ಪ್ರಬಲವಾಗಿದೆಯೆಂದರೆ, ಕೇಂದ್ರಬಿಂದುವಾದ ಮರ್ರಾಕೇಶ್‌ನಿಂದ ಸುಮಾರು 350 ಕಿಲೋಮೀಟರ್ ದೂರದಲ್ಲಿರುವ ರಾಜಧಾನಿ ರಬಾತ್‌ನಲ್ಲಿಯೂ ಇದರ ಪ್ರಭಾವ ಕಂಡುಬಂದಿದೆ.

ಮೊರಾಕ್ಕೊದಲ್ಲಿ 6.8 ತೀವ್ರತೆಯ ಭೀಕರ ಭೂಕಂಪನ: ಸಾವಿನ ಸಂಖ್ಯೆ 296ಕ್ಕೆ ಏರಿಕೆ, ಮುಂದುವರೆದ ರಕ್ಷಣಾ ಕಾರ್ಯ
Linkup
ಆಫ್ರಿಕಾದ ಮೊರಾಕ್ಕೊದಲ್ಲಿ ಮುಂಜಾನೆ ವೇಳೆ ಭಾರೀ ಪ್ರಮಾಣದ ಭೂಕಂಪನ ಸಂಭವಿಸಿದೆ. ಪರಿಣಾಮವಾಗಿ ಅನೇಕ ಕಟ್ಟಡಗಳು ನೆಲಸಮವಾಗಿದ್ದು, ಇಲ್ಲಿಯವರೆಗೆ 296 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ರಬಾತ್‌: ಆಫ್ರಿಕಾದ ಮೊರಾಕ್ಕೊದಲ್ಲಿ ಮುಂಜಾನೆ ವೇಳೆ ಭಾರೀ ಪ್ರಮಾಣದ ಭೂಕಂಪನ ಸಂಭವಿಸಿದೆ. ಪರಿಣಾಮವಾಗಿ ಅನೇಕ ಕಟ್ಟಡಗಳು ನೆಲಸಮವಾಗಿದ್ದು, ಇಲ್ಲಿಯವರೆಗೆ 296 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ಮರ್ರಾಕೆಚ್‌ನ ನೈಋತ್ಯಕ್ಕೆ 71 ಕಿ.ಮೀಟರ್‌ ದೂರದಲ್ಲಿ ಭೂಮಿಯಿಂದ 18 ಕಿ,ಮೀಟರ್‌ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಇಲಾಖೆ ತಿಳಿಸಿದೆ. ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ. ಮನೆಗಳು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಹಲವಾರು ಜನರು ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಗಳು ಭರದಿಂದ ನಡೆಯುತ್ತಿವೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿಗೆ ಎಂದು ಮೊರಾಕ್ಕೊ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಆಫ್ಘಾನಿಸ್ತಾನದಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪನ: ದೆಹಲಿ-ಎನ್‌ಸಿಆರ್‌, ಚಂಡೀಗಢ, ಪಂಜಾಬ್​ನಲ್ಲೂ ನಡುಗಿದ ಭೂಮಿ ಮರ್ರಾಕೆಚ್‌ನ ನೈಋತ್ಯ ಭಾಗ ಭೂಕಂಪನಕ್ಕೆ ಗುರಿಯಾಗುವ ಪ್ರದೇಶವಾಗಿದೆ. 2004ರಲ್ಲಿ ಈಶಾನ್ಯ ಮೊರಾಕ್ಕೊದಲ್ಲಿ ಸಂಭವಿಸಿದ ಭೂಕಂಪದಲ್ಲಿ 628 ಮಂದಿ ಮೃತಪಟ್ಟಿದ್ದರು. ಸುದ್ದಿ ಸಂಸ್ಥೆಗಳ ಪ್ರಕಾರ, ಭೀಕರ ಭೂಕಂಪದಿಂದಾಗಿ ಹಲವು ಹಳೆಯ ಕಟ್ಟಡಗಳು ಕುಸಿದಿವೆ. ನಗರದಲ್ಲಿ ಆಂಬ್ಯುಲೆನ್ಸ್ ಹಾಗೂ ತುರ್ತು ಸೇವೆಗಳ ಕೊರತೆ ಕೂಡ ಕಾಡಿದೆ. ಮತ್ತೆ ಭೂಕಂಪನದ ಭೀತಿಯಿಂದ ಜನರು ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಭೂಕಂಪವು ಎಷ್ಟು ಪ್ರಬಲವಾಗಿದೆಯೆಂದರೆ, ಕೇಂದ್ರಬಿಂದುವಾದ ಮರ್ರಾಕೇಶ್‌ನಿಂದ ಸುಮಾರು 350 ಕಿಲೋಮೀಟರ್ ದೂರದಲ್ಲಿರುವ ರಾಜಧಾನಿ ರಬಾತ್‌ನಲ್ಲಿಯೂ ಇದರ ಪ್ರಭಾವ ಕಂಡುಬಂದಿದೆ. ಮೊರಾಕ್ಕೊದಲ್ಲಿ 6.8 ತೀವ್ರತೆಯ ಭೀಕರ ಭೂಕಂಪನ: ಸಾವಿನ ಸಂಖ್ಯೆ 296ಕ್ಕೆ ಏರಿಕೆ, ಮುಂದುವರೆದ ರಕ್ಷಣಾ ಕಾರ್ಯ