ಮೆಕ್ಸಿಕೋ ವಿರುದ್ಧ ಮ್ಯಾಜಿಕ್ ಗೋಲು: ಮರಡೋನಾ ದಾಖಲೆ ಸರಿಗಟ್ಟಿದ ಅರ್ಜೆಂಟಿನಾ ಲೆಜೆಂಡ್ ಮೆಸ್ಸಿ!

ಮೆಕ್ಸಿಕೋ ವಿರುದ್ಧ ಅದ್ಭುತ ಗೋಲು ಗಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅರ್ಜೆಂಟಿನಾ ಫುಟ್ಬಾಲ್ ಲೆಜೆಂಡ್ ಲಿಯೋನಲ್ ಮೆಸ್ಸಿ ಡಿಯಾಗೋ ಮರಡೋನಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ನವದೆಹಲಿ: ಮೆಕ್ಸಿಕೋ ವಿರುದ್ಧ ಅದ್ಭುತ ಗೋಲು ಗಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅರ್ಜೆಂಟಿನಾ ಫುಟ್ಬಾಲ್ ಲೆಜೆಂಡ್ ಲಿಯೋನಲ್ ಮೆಸ್ಸಿ ಡಿಯಾಗೋ ಮರಡೋನಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಹೌದು.. ಮೆಕ್ಸಿಕೋ ವಿರುದ್ಧ ಪಂದ್ಯದಲ್ಲಿ 64ನೇ ನಿಮಿಷದಲ್ಲಿ ಅದ್ಭುತ ಗೋಲು ಗಳಿಸಿದ ಮೆಸ್ಸಿ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಗೋಲುಗಳ ಸಂಖ್ಯೆಯನ್ನು 8ಕ್ಕೇರಿಸಿಕೊಂಡರು. ಆ ಮೂಲಕ ಫುಟ್ಬಾಲ್ ವಿಶ್ವಕಪ್ ಟೂರ್ನಿಗಳಲ್ಲಿ ಇಷ್ಟೇ ಗೋಲುಗಳನ್ನು ಗಳಿಸಿರುವ ಡಿಯಾಗೋ ಮರಡೋನಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಚ್ಚರಿ ಎಂದರೆ ಇಬ್ಬರೂ ಲೆಜೆಂಡ್ ಗಳು ಈ ಸಾಧನೆಗಾಗಿ 21 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಫಿಫಾ ವಿಶ್ವಕಪ್: ಮೆಸ್ಸಿ ಮ್ಯಾಜಿಕ್, ಮೆಕ್ಸಿಕೋ ವಿರುದ್ಧ ಅರ್ಜೆಂಟಿನಾಗೆ ಗೆಲುವು, ಟೂರ್ನಿಯಲ್ಲಿ ಜೀವಂತ!
ಅಂತೆಯೇ ಇದು ಮೆಸ್ಸಿ ಅವರ ಜೀವಮಾನ ಶ್ರೇಷ್ಠ ಸಾಧನೆಯಾಗಿದ್ದು, ಅವರು ಈ ವರೆಗೂ ತಮ್ಮ ವೃತ್ತಿ ಜೀವನದಲ್ಲಿ ಗಳಿಸಿದ ಗೋಲುಗಳ ಸಂಖ್ಯೆಯನ್ನು 788ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ.
ಮೆಸ್ಸಿ 2022 ರಲ್ಲಿ ಅರ್ಜೆಂಟೀನಾ ಪರವಾಗಿ 13 ಗೋಲುಗಳನ್ನು ಬಾರಿಸಿದ್ದು, ಅವರು ರಾಷ್ಟ್ರೀಯ ತಂಡಕ್ಕಾಗಿ ಕ್ಯಾಲೆಂಡರ್ ವರ್ಷದಲ್ಲಿ ಗಳಿಸಿದ ಗರಿಷ್ಠ ಗೋಲು ಇದಾಗಿದೆ. ಈಗ 2022 ರಲ್ಲಿ ಕ್ಲಬ್ ಮತ್ತು ದೇಶಕ್ಕಾಗಿ 46 ಪಂದ್ಯಗಳಲ್ಲಿ 58 ಗೋಲುಗಳನ್ನು ಬಾರಿಸಿದ್ದಾರೆ.