ಫೀಫಾ ವಿಶ್ವಕಪ್ ಉದ್ಘಾಟನೆಗೆ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ನನ್ನು ಆಹ್ವಾನಿಸಿಲ್ಲ: ಕತಾರ್

ದೋಹಾದಲ್ಲಿ ನಡೆದ ಫೀಫಾ ವಿಶ್ವಕಪ್ ಉದ್ಘಾಟನೆಗೆ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯಕ್‌ಗೆ ಯಾವುದೇ ಅಧಿಕೃತ ಆಹ್ವಾನ ನೀಡಿರಲಿಲ್ಲ ಎಂದು ರಾಜತಾಂತ್ರಿಕ ಚಾನೆಲ್‌ಗಳ ಮೂಲಕ ಕತಾರ್ ಭಾರತಕ್ಕೆ ಮಾಹಿತಿ ನೀಡಿದೆ. ದೋಹಾದಲ್ಲಿ ನಡೆದ ಫೀಫಾ ವಿಶ್ವಕಪ್ ಉದ್ಘಾಟನೆಗೆ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯಕ್‌ಗೆ ಯಾವುದೇ ಅಧಿಕೃತ ಆಹ್ವಾನ ನೀಡಿರಲಿಲ್ಲ ಎಂದು ರಾಜತಾಂತ್ರಿಕ ಚಾನೆಲ್‌ಗಳ ಮೂಲಕ ಕತಾರ್ ಭಾರತಕ್ಕೆ ಮಾಹಿತಿ ನೀಡಿದೆ. ಭಾರತ-ಕತಾರ್ ದ್ವಿಪಕ್ಷೀಯ ಸಂಬಂಧಗಳನ್ನು ಹಾಳು ಮಾಡಲು ಉದ್ದೇಶಪೂರ್ವಕವಾಗಿ 'ತಪ್ಪು ಮಾಹಿತಿ'ಯನ್ನು ಮೂರನೇ ದೇಶಗಳು ಹರಡುತ್ತಿವೆ ಎಂದು ಹೇಳಿಕೊಂಡಿದೆ.  ಫೀಫಾ ವಿಶ್ವಕಪ್ ಉದ್ಘಾಟನೆಯನ್ನು ವೀಕ್ಷಿಸಲು ಝಾಕಿರ್ ನಾಯ್ಕ್ ಗೆ ಔಪಚಾರಿಕ ಆಹ್ವಾನ ನೀಡಿದ್ದರೆ, ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಭೇಟಿಯನ್ನು ರದ್ದುಪಡಿಸಬೇಕಿತ್ತು ಎಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ದೋಹಾಗೆ ಎಚ್ಚರಿಸಿದ ಬೆನ್ನಲ್ಲೇ ಕತಾರ್‌ನಿಂದ ಈ ಹೇಳಿಕೆ ಹೊರಬಿದ್ದಿದೆ. ನವೆಂಬರ್ 20ರಂದು ಜಗದೀಪ್ ಧನಕರ್ ಸ್ಟೇಡಿಯಂನ ವಿವಿಐಪಿ ಬಾಕ್ಸ್ ನಲ್ಲಿ ಕುಳಿತು ಉದ್ಘಾಟನೆಗೆ ಸಾಕ್ಷಿಯಾಗಿದ್ದರು. ಇದನ್ನೂ ಓದಿ: ಫಿಫಾ ವಿಶ್ವಕಪ್ : ಕತಾರ್ ನಲ್ಲಿ ವಿವಾದಿತ ಇಸ್ಲಾಂ ಧರ್ಮ ಪ್ರಚಾರ ಜಾಕಿರ್ ನಾಯಕ್  ಧಾರ್ಮಿಕ ಉಪನ್ಯಾಸ? ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ, ದ್ವೇಷ ಭಾಷಣ ಸಹಿತ ಹಲವಾರು ಪ್ರಕರಣಗಳಿದ್ದು ಈತ ಪೊಲೀಸರಿಗೆ ಬೇಕಾಗಿದ್ದಾನೆ. ಹೀಗಾಗಿಯೇ ಭಾರತದಿಂದ ತಲೆಮರೆಸಿಕೊಂಡು ಮಲೇಷ್ಯಾದಲ್ಲಿ ನೆಲೆಸಿದ್ದಾನೆ. ಝಾಕಿರ್ ನಾಯಕ್ ವಿರುದ್ಧ ಭಾರತದಲ್ಲಿ ಇಸ್ಲಾಂ ಮೂಲಭೂತವಾದ ಹರಡುವಿಕೆಯಲ್ಲಿ ಸಕ್ರಿಯವಾದ ಪಾತ್ರವಹಿಸಿದ ಆರೋಪಗಳಿವೆ. ಇನ್ನು ಕಳೆದ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರ ಝಾಕಿರ್ ನಾಯಕ್ ಸ್ಥಾಪಿಸಿದ್ದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಅನ್ನು ಐದು ವರ್ಷಗಳವರೆಗೆ ನಿಷೇಧಿಸಿತ್ತು. ಝಾಕಿರ್ ನಾಯ್ಕ್ ದೋಹಾಕ್ಕೆ ಖಾಸಗಿ ಭೇಟಿ ನೀಡಬಹುದೆಂದು ಕತಾರ್ ಅಧಿಕಾರಿಗಳು ಹೇಳಿದ್ದಾರೆ. ಇಡೀ ಝಾಕಿರ್ ನಾಯ್ಕ್ ವಿವಾದವನ್ನು ಕತಾರ್ ವಿರುದ್ಧ ದೊಡ್ಡ ತಪ್ಪು ಮಾಹಿತಿ ಅಭಿಯಾನದ ಭಾಗವಾಗಿ ತೃತೀಯ ರಾಷ್ಟ್ರಗಳು ವಿನ್ಯಾಸಿವೆ ಎಂದು ಕತಾರ್ ಸರ್ಕಾರವು ಭಾರತೀಯ ಅಧಿಕಾರಿಗಳಿಗೆ ತಿಳಿಸಿದೆ ಎಂದು ತಿಳಿದುಬಂದಿದೆ.

ಫೀಫಾ ವಿಶ್ವಕಪ್ ಉದ್ಘಾಟನೆಗೆ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ನನ್ನು ಆಹ್ವಾನಿಸಿಲ್ಲ: ಕತಾರ್
Linkup
ದೋಹಾದಲ್ಲಿ ನಡೆದ ಫೀಫಾ ವಿಶ್ವಕಪ್ ಉದ್ಘಾಟನೆಗೆ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯಕ್‌ಗೆ ಯಾವುದೇ ಅಧಿಕೃತ ಆಹ್ವಾನ ನೀಡಿರಲಿಲ್ಲ ಎಂದು ರಾಜತಾಂತ್ರಿಕ ಚಾನೆಲ್‌ಗಳ ಮೂಲಕ ಕತಾರ್ ಭಾರತಕ್ಕೆ ಮಾಹಿತಿ ನೀಡಿದೆ. ದೋಹಾದಲ್ಲಿ ನಡೆದ ಫೀಫಾ ವಿಶ್ವಕಪ್ ಉದ್ಘಾಟನೆಗೆ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯಕ್‌ಗೆ ಯಾವುದೇ ಅಧಿಕೃತ ಆಹ್ವಾನ ನೀಡಿರಲಿಲ್ಲ ಎಂದು ರಾಜತಾಂತ್ರಿಕ ಚಾನೆಲ್‌ಗಳ ಮೂಲಕ ಕತಾರ್ ಭಾರತಕ್ಕೆ ಮಾಹಿತಿ ನೀಡಿದೆ. ಭಾರತ-ಕತಾರ್ ದ್ವಿಪಕ್ಷೀಯ ಸಂಬಂಧಗಳನ್ನು ಹಾಳು ಮಾಡಲು ಉದ್ದೇಶಪೂರ್ವಕವಾಗಿ 'ತಪ್ಪು ಮಾಹಿತಿ'ಯನ್ನು ಮೂರನೇ ದೇಶಗಳು ಹರಡುತ್ತಿವೆ ಎಂದು ಹೇಳಿಕೊಂಡಿದೆ.  ಫೀಫಾ ವಿಶ್ವಕಪ್ ಉದ್ಘಾಟನೆಯನ್ನು ವೀಕ್ಷಿಸಲು ಝಾಕಿರ್ ನಾಯ್ಕ್ ಗೆ ಔಪಚಾರಿಕ ಆಹ್ವಾನ ನೀಡಿದ್ದರೆ, ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಭೇಟಿಯನ್ನು ರದ್ದುಪಡಿಸಬೇಕಿತ್ತು ಎಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ದೋಹಾಗೆ ಎಚ್ಚರಿಸಿದ ಬೆನ್ನಲ್ಲೇ ಕತಾರ್‌ನಿಂದ ಈ ಹೇಳಿಕೆ ಹೊರಬಿದ್ದಿದೆ. ನವೆಂಬರ್ 20ರಂದು ಜಗದೀಪ್ ಧನಕರ್ ಸ್ಟೇಡಿಯಂನ ವಿವಿಐಪಿ ಬಾಕ್ಸ್ ನಲ್ಲಿ ಕುಳಿತು ಉದ್ಘಾಟನೆಗೆ ಸಾಕ್ಷಿಯಾಗಿದ್ದರು. ಇದನ್ನೂ ಓದಿ: ಫಿಫಾ ವಿಶ್ವಕಪ್ : ಕತಾರ್ ನಲ್ಲಿ ವಿವಾದಿತ ಇಸ್ಲಾಂ ಧರ್ಮ ಪ್ರಚಾರ ಜಾಕಿರ್ ನಾಯಕ್  ಧಾರ್ಮಿಕ ಉಪನ್ಯಾಸ? ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ, ದ್ವೇಷ ಭಾಷಣ ಸಹಿತ ಹಲವಾರು ಪ್ರಕರಣಗಳಿದ್ದು ಈತ ಪೊಲೀಸರಿಗೆ ಬೇಕಾಗಿದ್ದಾನೆ. ಹೀಗಾಗಿಯೇ ಭಾರತದಿಂದ ತಲೆಮರೆಸಿಕೊಂಡು ಮಲೇಷ್ಯಾದಲ್ಲಿ ನೆಲೆಸಿದ್ದಾನೆ. ಝಾಕಿರ್ ನಾಯಕ್ ವಿರುದ್ಧ ಭಾರತದಲ್ಲಿ ಇಸ್ಲಾಂ ಮೂಲಭೂತವಾದ ಹರಡುವಿಕೆಯಲ್ಲಿ ಸಕ್ರಿಯವಾದ ಪಾತ್ರವಹಿಸಿದ ಆರೋಪಗಳಿವೆ. ಇನ್ನು ಕಳೆದ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರ ಝಾಕಿರ್ ನಾಯಕ್ ಸ್ಥಾಪಿಸಿದ್ದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಅನ್ನು ಐದು ವರ್ಷಗಳವರೆಗೆ ನಿಷೇಧಿಸಿತ್ತು. ಝಾಕಿರ್ ನಾಯ್ಕ್ ದೋಹಾಕ್ಕೆ ಖಾಸಗಿ ಭೇಟಿ ನೀಡಬಹುದೆಂದು ಕತಾರ್ ಅಧಿಕಾರಿಗಳು ಹೇಳಿದ್ದಾರೆ. ಇಡೀ ಝಾಕಿರ್ ನಾಯ್ಕ್ ವಿವಾದವನ್ನು ಕತಾರ್ ವಿರುದ್ಧ ದೊಡ್ಡ ತಪ್ಪು ಮಾಹಿತಿ ಅಭಿಯಾನದ ಭಾಗವಾಗಿ ತೃತೀಯ ರಾಷ್ಟ್ರಗಳು ವಿನ್ಯಾಸಿವೆ ಎಂದು ಕತಾರ್ ಸರ್ಕಾರವು ಭಾರತೀಯ ಅಧಿಕಾರಿಗಳಿಗೆ ತಿಳಿಸಿದೆ ಎಂದು ತಿಳಿದುಬಂದಿದೆ. ಫೀಫಾ ವಿಶ್ವಕಪ್ ಉದ್ಘಾಟನೆಗೆ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ನನ್ನು ಆಹ್ವಾನಿಸಿಲ್ಲ: ಕತಾರ್