ಪ್ರತಿಯೊಬ್ಬ ಕೋವಿಡ್‌ ಮೃತರ ಕುಟುಂಬಕ್ಕೆ ₹50,000 ಪರಿಹಾರ! ಸುಪ್ರೀಂಗೆ ಮಾಹಿತಿ ನೀಡಿದ ಕೇಂದ್ರ!

ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬಗಳು ರಾಜ್ಯ ಸರ್ಕಾರಗಳಿಂದ ₹50,000 ಪಡೆಯುತ್ತವೆ ಎಂದು ಕೇಂದ್ರವು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಆಯಾ ರಾಜ್ಯ ಸರಕಾರಗಳ ಪರಿಹಾರದ ಹಣ ನೀಡುತ್ತವೆ.

ಪ್ರತಿಯೊಬ್ಬ ಕೋವಿಡ್‌ ಮೃತರ ಕುಟುಂಬಕ್ಕೆ ₹50,000 ಪರಿಹಾರ! ಸುಪ್ರೀಂಗೆ ಮಾಹಿತಿ ನೀಡಿದ ಕೇಂದ್ರ!
Linkup
ಹೊಸದಿಲ್ಲಿ: ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬಗಳು ರಾಜ್ಯ ಸರ್ಕಾರಗಳಿಂದ ₹50,000 ಪಡೆಯುತ್ತವೆ ಎಂದು ಕೇಂದ್ರವು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈಗಾಗಲೇ ಸಂಭವಿಸಿರುವ ಸಾವುಗಳಿಗೆ ಮಾತ್ರವಲ್ಲದೆ, ಭವಿಷ್ಯದಲ್ಲಿ ಸೋಂಕಿನಿಂದ ಉಂಟಾಗುವ ಸಾವುಗಳಿಗೂ ಲಭ್ಯವಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿರುವುದು ಗಮನಾರ್ಹ. ಪರಿಹಾರದ ಹಣವನ್ನು ರಾಜ್ಯ ಸರ್ಕಾರಗಳು ಪಾವತಿಸುತ್ತವೆ. ಆಯಾ ರಾಜ್ಯಗಳ ವಿಪತ್ತು ನಿರ್ವಹಣಾ ನಿಧಿಯಿಂದ ಪಡೆಯಲಾಗುತ್ತದೆ. ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಥವಾ ಜಿಲ್ಲಾಡಳಿತಗಳ ಮೂಲಕ ಪರಿಹಾರ ನೀಡಲಾಗುವುದು ಎಂದು ಕೇಂದ್ರ ಸರ್ಕಾರವು ಬುಧವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ. ಜನವರಿ 2020ರಲ್ಲಿ ಕೋವಿಡ್‌ ಸೋಂಕು ಪತ್ತೆಯಾದ ದಿನದಿಂದ ಭಾರತದಲ್ಲಿ 4.45 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್ ಸಂಬಂಧಿತ ಕಾರಣಗಳಿಂದ ಸಂಭವಿಸಿದ ಸಾವುಗಳು ದಾಖಲಾಗಿವೆ. ಕೆಲವು ರಾಜ್ಯಗಳು ಈಗಾಗಲೇ ಕೋವಿಡ್‌ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಘೋಷಿಸಿವೆ. ಇವುಗಳಲ್ಲಿ ಬಿಹಾರ (ಪ್ರತಿ ಕುಟುಂಬಕ್ಕೆ ರೂ. 4 ಲಕ್ಷ), ಮಧ್ಯ ಪ್ರದೇಶ (ರೂ. 1 ಲಕ್ಷ), ಮತ್ತು ದೆಹಲಿ (ರೂ. 50,000) ಸೇರಿವೆ. ಕೋವಿಡ್ -19 ಸೋಂಕಿನಿಂದ ಮುಂದಿನ ಹಂತಗಳಲ್ಲಿ ಸಂಭವಿಸಬಹುದಾದ ಸಾವುಗಳಿಗೆ ಅಥವಾ ಮುಂದಿನ ಅಧಿಸೂಚನೆಯವರೆಗೆ ಪರಿಹಾರ ನೀಡಲಾಗುವುದು ಎಂದು ಕೇಂದ್ರದ ಅಫಿಡವಿಟ್ ಹೇಳಿದೆ. "ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿರುವವರು ಅಥವಾ ಕೋವಿಡ್ ನಿಯಂತ್ರಣಕ್ಕೆ ಸಿದ್ಧತಾ ಚಟುವಟಿಕೆಗಳಲ್ಲಿ ತೊಡಗಿರುವವರು ಸಾವನ್ನಪ್ಪಿದರೆ, ಅವರ ಕುಟುಂಬಗಳಿಗೂ ಪರಿಹಾರ ನೀಡಲಾಗುತ್ತದೆ. ಆದರೆ, ಸಾವಿನ ಕಾರಣವನ್ನು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳಿಗೆ ಅನುಸಾರವಾಗಿ ಕೋವಿಡ್ -19 ಎಂದು ಪ್ರಮಾಣೀಕರಿಸಬೇಕು. ಮೃತಪಟ್ಟ ವ್ಯಕ್ತಿಗೆ ಸಂಬಂಧಿತ ಕುಟುಂಬಗಳು ಆಯಾ ರಾಜ್ಯದಲ್ಲಿ ನಿಗದಿಮಾಡಿರುವ ನಿರ್ದಿಷ್ಟ ನಮೂನೆಯಲ್ಲಿ, ನಿರ್ದಿಷ್ಟ ದಾಖಲೆಗಳೊಂದಿಗೆ ಸಾವಿನ ಕಾರಣವನ್ನು ದೃಢೀಕರಿಸಿ ಪರಿಹಾರಕ್ಕೆ ಮನವಿ ಸಲ್ಲಿಸಬೇಕು. ಪರಿಹಾರದ ಮನವಿ ಪರಿಶೀಲನೆ, ಮಂಜೂರಾತಿ ಮತ್ತು ವಿತರಣೆಯ ಪ್ರಕ್ರಿಯೆಯು ಸರಳ, ದೃಢ ಮತ್ತು ಜನಸ್ನೇಹಿಯಾಗಿರಲಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳು ಇದರ ಉಸ್ತುವಾರಿ ನೋಡಿಕೊಳ್ಳುತ್ತಾರೆ ಎಂದು ತಿಳಿಸಲಾಗಿದೆ. ಮನವಿ ಸಲ್ಲಿಸಿದ 30 ದಿನಗಳ ಒಳಗಾಗಿ ಪರಿಹಾರ ಒದಗಿಸಬೇಕು. ಆಧಾರ್‌ ಲಿಂಕ್‌ ಆಗಿರುವ ಬ್ಯಾಂಕ್‌ ಖಾತೆಗೆ ನೇರವಾಗಿ ಪರಿಹಾರದ ಹಣವನ್ನು ವರ್ಗಾವಣೆ ಮಾಡಬೇಕು ಎಂದು ಕೇಂದ್ರ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಪರಿಹಾರ ನೀಡುತ್ತಿರುವ ದಿಲ್ಲಿ ಸರಕಾರ ದಿಲ್ಲಿ ಸರಕಾರ ಕೋವಿಡ್‌ ಮೃತರ ಕುಟುಂಬಕ್ಕೆ ₹50,000 ಪರಿಹಾರ ನೀಡುವುದಾಗಿ ಜುಲೈ 6 ರಂದೇ ಘೋಷಿಸಿತ್ತು. ಯೋಜನೆಯ ಭಾಗವಾಗಿ, ಕೋವಿಡ್ -19 ಕಾರಣದಿಂದ ಸಾವನ್ನಪ್ಪಿದ ಪ್ರತಿ ಕುಟುಂಬ ಸದಸ್ಯರಿಗೆ 50,000 ರೂ. ಲಭಿಸಲಿದೆ. ತನ್ನ ಒಂದು ಕುಟುಂಬಕ್ಕೆ ಸರ್ಕಾರ ತಿಂಗಳಿಗೆ 2,500 ರೂ. ನೀಡಲಿದೆ. ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ 25 ವರ್ಷದವರೆಗೆ ತಿಂಗಳಿಗೆ 2,500 ರೂ. ಸರ್ಕಾರ ನೀಡಲಿದೆ.