ಜಿಎಸ್‌ಟಿ ಸಂಗ್ರಹದಲ್ಲಿ ತೀವ್ರ ಇಳಿಕೆ, 8 ತಿಂಗಳ ನಂತರ ಲಕ್ಷ ಕೋಟಿ ರೂ. ಕೆಳಕ್ಕಿಳಿದ ತೆರಿಗೆ ಸಂಗ್ರಹ

ಕಳೆದ ಜೂನ್‌ನಲ್ಲಿ ಕೇವಲ 92,849 ಕೋಟಿ ರೂ. ಜಿಎಸ್‌ಟಿ ಮಾತ್ರ ಸಂಗ್ರಹವಾಗಿದೆ. ಈ ಮೂಲಕ ಕಳೆದ 8 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು 1 ಲಕ್ಷ ಕೋಟಿ ರೂ.ಗಿಂತಲೂ ಕೆಳಕ್ಕಿಳಿದಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ತೀವ್ರ ಇಳಿಕೆ, 8 ತಿಂಗಳ ನಂತರ ಲಕ್ಷ ಕೋಟಿ ರೂ. ಕೆಳಕ್ಕಿಳಿದ ತೆರಿಗೆ ಸಂಗ್ರಹ
Linkup
ಹೊಸದಿಲ್ಲಿ: ದೇಶದ ಆರ್ಥಿಕ ಬಿಕ್ಕಟ್ಟಿಗೆ ಕನ್ನಡಿ ಹಿಡಿಯುವಂತೆ ಕಳೆದ ಜೂನ್‌ನಲ್ಲಿ ಕೇವಲ 92,849 ಕೋಟಿ ರೂ. ಸಂಗ್ರಹವಾಗಿದೆ. ಈ ಮೂಲಕ ಕಳೆದ 8 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸಂಗ್ರಹ (ಜಿಎಸ್‌ಟಿ) 1 ಲಕ್ಷ ಕೋಟಿ ರೂ.ಗಿಂತಲೂ ಕೆಳ ಮಟ್ಟಕ್ಕೆ ಇಳಿದಿದೆ. ಆದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾತ್ರ ಜಿಎಸ್‌ಟಿ ಸಂಗ್ರಹದಲ್ಲಿ ಶೇಕಡಾ 2ರಷ್ಟು ಏರಿಕೆಯಾಗಿದೆ. 2020ರ ಜೂನ್‌ನಲ್ಲಿ 90,917 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಜೂನ್‌ನಲ್ಲಿ ಸಂಗ್ರಹವಾದ 92,849 ಕೋಟಿ ರೂ.ನಲ್ಲಿ 16,424 ಕೋಟಿ ರೂ. ಕೇಂದ್ರ ಜಿಎಸ್‌ಟಿಯಾಗಿದೆ. 20,397 ಕೋಟಿ ರೂ. ರಾಜ್ಯ ಜಿಎಸ್‌ಟಿ. ಐಜಿಎಸ್‌ಟಿ 49,079 ಕೋಟಿ ರೂ.ಗಳಾಗಿವೆ. ಜೂನ್‌ನ ಜಿಎಸ್‌ಟಿ ಸಂಗ್ರಹವು ಮೇನಲ್ಲಿ ನಡೆದ ವಹಿವಾಟನ್ನು ಬಿಂಬಿಸುತ್ತದೆ. ಮೇನಲ್ಲಿ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೂರ್ಣ ಅಥವಾ ಭಾಗಶಃ ಲಾಕ್‌ಡೌನ್‌ ಇತ್ತು ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಪರಿಣಾಮ ತೆರಿಗೆ ಸಂಗ್ರಹ ಕುಸಿತ ಕಂಡಿದೆ.