ಗಗನಯಾನ: ಇಸ್ರೋದ ಬಹು ನಿರೀಕ್ಷಿತ ಪ್ಯಾರಾಚೂಟ್ ಪರೀಕ್ಷೆ ಯಶಸ್ಸು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನ ಯೋಜನೆಯ ಭಾಗದ ಬಹು ನಿರೀಕ್ಷಿತ ಪ್ಯಾರಾಚೂಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನ ಯೋಜನೆಯ ಭಾಗದ ಬಹು ನಿರೀಕ್ಷಿತ ಪ್ಯಾರಾಚೂಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಗಗನಯಾನಿಗಳನ್ನು ಹೊತ್ತ ಕೋಶವನ್ನು (ಮಾಡ್ಯೂಲ್) ಇಳಿಸುವಲ್ಲಿ ಬಳಕೆಯಾಗುವ ಪ್ಯಾರಾಚೂಟ್‌ಗಳ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ತಿಳಿಸಿದೆ. ಸದ್ಯ ಇಸ್ರೊ ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ನಡುವೆ ಗಗನಯಾನಿಗಳನ್ನು ಹೊತ್ತ ಕೋಶವು ಭೂಮಿಗೆ ಇಳಿಯುವಾಗ ಒಟ್ಟು 10 ಪ್ಯಾರಾಚೂಟ್‌ಗಳು ಹಲವು ಹಂತಗಳಲ್ಲಿ ಕೆಲಸ ಮಾಡುತ್ತವೆ. ಮೊದಲ ಎರಡು ಹಂತದಲ್ಲಿ ಕೆಲಸ ಮಾಡುವ ಒಟ್ಟು ನಾಲ್ಕು ಪ್ಯಾರಾಚೂಟ್‌ಗಳ ವ್ಯವಸ್ಥೆಯನ್ನು ಮಾರ್ಚ್ 1 ಮತ್ತು ಮಾರ್ಚ್ 3ರಂದು ಪರೀಕ್ಷೆಗೆ ಒಳಪಡಿಸಲಾಗಿತ್ತು.  ಇದನ್ನೂ ಓದಿ: ಚಂದ್ರಯಾನ-3 ಮಿಷನ್‍ನಲ್ಲಿ ಇಸ್ರೋದ ಮತ್ತೊಂದು ಸಾಧನೆ: ಕ್ರಯೋಜೆನಿಕ್ ಎಂಜಿನ್ ಪರೀಕ್ಷೆ ಯಶಸ್ವಿ ಮತ್ತೊಂದು ಹಂತದ ಈ ಪ್ಯಾರಾಚೂಟ್ ತಂತ್ರಜ್ಞಾನವನ್ನು ಚಂಡೀಗಡದ ಟರ್ಮಿನಲ್ ಬ್ಯಾಲಿಸ್ಟಿಕ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ (ಟಿಬಿಆರ್‌ಎಲ್) ಪರೀಕ್ಷಿಸಲಾಗಿದೆ. ಗಗನಯಾನಿಗಳನ್ನು ಹೊತ್ತ ಕೋಶವು ಬಾಹ್ಯಾಕಾಶದಿಂದ ಭೂಮಿಯ ವಾತಾವರಣವನ್ನು ಪ್ರವೇಶಿಸಿ, ನೆಲಕ್ಕೆ ಇಳಿಯುವಾಗ ಇರಬಹುದಾದ ಭೌತಿಕ ಸ್ಥಿತಿಯನ್ನು, ತೆರೆದ ಪ್ರಯೋಗಾಲಯದಲ್ಲಿ ನಿರ್ಮಿಸಿ ಈ ಪರೀಕ್ಷೆ ನಡೆಸಲಾಗಿದೆ ಎಂದು ಇಸ್ರೋ ತಿಳಿಸಿದೆ. (1/4) Today, ISRO received Simulated Crew Module (SCM) Structure Assembly for the Gaganyaan project. This first indigenous SCM is developed by VSSC and realized by Manjira Machine Builders Pvt Ltd., Hyderabad. pic.twitter.com/yV1WkKMz4U — ISRO (@isro) February 24, 2023 ಈ ಪ್ರಯೋಗಾಲಯದಲ್ಲಿ ಇರುವ ಹಳಿಗಳ ಮೇಲೆ ರಾಕೆಟ್ ಚಾಲಿತ ಯಂತ್ರವನ್ನು ಅಳವಡಿಸಿ ವೇಗವಾಗಿ ಚಲಿಸುವಂತೆ ಮಾಡಲಾಗಿದೆ. ಯಂತ್ರದ ಹಿಂಭಾಗದಲ್ಲಿ ಈ ಪ್ಯಾರಾಚೂಟ್‌ಗಳನ್ನು ಅಳವಡಿಸಲಾಗಿತ್ತು. ಪ್ಯಾರಾಚೂಟ್‌ಗಳು ಸರಿಯಾಗಿ ಕೆಲಸ ಮಾಡಿವೆ ಎಂದು ಇಸ್ರೊ ಹೇಳಿದೆ. ಇದನ್ನೂ ಓದಿ: ಚಂದ್ರಯಾನ-3: ಪ್ರಮುಖ ಪರೀಕ್ಷೆ ಯಶಸ್ವಿ- ಇಸ್ರೋ ಗಗನಯಾನ ಕಾರ್ಯಾಚರಣೆಗೆಂದೇ ಇಸ್ರೊ, ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ಮತ್ತು ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ಜಂಟಿಯಾಗಿ ಈ ಪ್ಯಾರಾಚೂಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಮಾನವಸಹಿತ ಬಾಹ್ಯಾಕಾಶ ಯಾನವನ್ನು ಸಾಧ್ಯವಾಗಿಸುವುದು ಗಗನಯಾನ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಮೂವರು ಗಗನಯಾನಿಗಳನ್ನು 400 ಕಿಲೋಮೀಟರ್ ಎತ್ತರದ ಕಕ್ಷೆಗೆ ಸೇರಿಸಲಾಗುತ್ತದೆ. ಮೂರು ದಿನಗಳ ಬಳಿಕ ಅವರು ಭೂಮಿಗೆ ವಾಪಸಾಗಲಿದ್ದಾರೆ. ದೇಶದ ಮೊದಲ ಮಾನವಸಹಿತ ಗಗನಯಾನವು 2024ರ ಕೊನೆಯಲ್ಲಿ ಕೈಗೂಡಲಿದೆ ಎಂದು ಕೇಂದ್ರ ಸರ್ಕಾರ ಇತ್ತೀಚಿಗೆ ಮಾಹಿತಿ ನೀಡಿತ್ತು.

ಗಗನಯಾನ: ಇಸ್ರೋದ ಬಹು ನಿರೀಕ್ಷಿತ ಪ್ಯಾರಾಚೂಟ್ ಪರೀಕ್ಷೆ ಯಶಸ್ಸು
Linkup
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನ ಯೋಜನೆಯ ಭಾಗದ ಬಹು ನಿರೀಕ್ಷಿತ ಪ್ಯಾರಾಚೂಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನ ಯೋಜನೆಯ ಭಾಗದ ಬಹು ನಿರೀಕ್ಷಿತ ಪ್ಯಾರಾಚೂಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಗಗನಯಾನಿಗಳನ್ನು ಹೊತ್ತ ಕೋಶವನ್ನು (ಮಾಡ್ಯೂಲ್) ಇಳಿಸುವಲ್ಲಿ ಬಳಕೆಯಾಗುವ ಪ್ಯಾರಾಚೂಟ್‌ಗಳ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ತಿಳಿಸಿದೆ. ಸದ್ಯ ಇಸ್ರೊ ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ನಡುವೆ ಗಗನಯಾನಿಗಳನ್ನು ಹೊತ್ತ ಕೋಶವು ಭೂಮಿಗೆ ಇಳಿಯುವಾಗ ಒಟ್ಟು 10 ಪ್ಯಾರಾಚೂಟ್‌ಗಳು ಹಲವು ಹಂತಗಳಲ್ಲಿ ಕೆಲಸ ಮಾಡುತ್ತವೆ. ಮೊದಲ ಎರಡು ಹಂತದಲ್ಲಿ ಕೆಲಸ ಮಾಡುವ ಒಟ್ಟು ನಾಲ್ಕು ಪ್ಯಾರಾಚೂಟ್‌ಗಳ ವ್ಯವಸ್ಥೆಯನ್ನು ಮಾರ್ಚ್ 1 ಮತ್ತು ಮಾರ್ಚ್ 3ರಂದು ಪರೀಕ್ಷೆಗೆ ಒಳಪಡಿಸಲಾಗಿತ್ತು.  ಇದನ್ನೂ ಓದಿ: ಚಂದ್ರಯಾನ-3 ಮಿಷನ್‍ನಲ್ಲಿ ಇಸ್ರೋದ ಮತ್ತೊಂದು ಸಾಧನೆ: ಕ್ರಯೋಜೆನಿಕ್ ಎಂಜಿನ್ ಪರೀಕ್ಷೆ ಯಶಸ್ವಿ ಮತ್ತೊಂದು ಹಂತದ ಈ ಪ್ಯಾರಾಚೂಟ್ ತಂತ್ರಜ್ಞಾನವನ್ನು ಚಂಡೀಗಡದ ಟರ್ಮಿನಲ್ ಬ್ಯಾಲಿಸ್ಟಿಕ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ (ಟಿಬಿಆರ್‌ಎಲ್) ಪರೀಕ್ಷಿಸಲಾಗಿದೆ. ಗಗನಯಾನಿಗಳನ್ನು ಹೊತ್ತ ಕೋಶವು ಬಾಹ್ಯಾಕಾಶದಿಂದ ಭೂಮಿಯ ವಾತಾವರಣವನ್ನು ಪ್ರವೇಶಿಸಿ, ನೆಲಕ್ಕೆ ಇಳಿಯುವಾಗ ಇರಬಹುದಾದ ಭೌತಿಕ ಸ್ಥಿತಿಯನ್ನು, ತೆರೆದ ಪ್ರಯೋಗಾಲಯದಲ್ಲಿ ನಿರ್ಮಿಸಿ ಈ ಪರೀಕ್ಷೆ ನಡೆಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಈ ಪ್ರಯೋಗಾಲಯದಲ್ಲಿ ಇರುವ ಹಳಿಗಳ ಮೇಲೆ ರಾಕೆಟ್ ಚಾಲಿತ ಯಂತ್ರವನ್ನು ಅಳವಡಿಸಿ ವೇಗವಾಗಿ ಚಲಿಸುವಂತೆ ಮಾಡಲಾಗಿದೆ. ಯಂತ್ರದ ಹಿಂಭಾಗದಲ್ಲಿ ಈ ಪ್ಯಾರಾಚೂಟ್‌ಗಳನ್ನು ಅಳವಡಿಸಲಾಗಿತ್ತು. ಪ್ಯಾರಾಚೂಟ್‌ಗಳು ಸರಿಯಾಗಿ ಕೆಲಸ ಮಾಡಿವೆ ಎಂದು ಇಸ್ರೊ ಹೇಳಿದೆ. ಇದನ್ನೂ ಓದಿ: ಚಂದ್ರಯಾನ-3: ಪ್ರಮುಖ ಪರೀಕ್ಷೆ ಯಶಸ್ವಿ- ಇಸ್ರೋ ಗಗನಯಾನ ಕಾರ್ಯಾಚರಣೆಗೆಂದೇ ಇಸ್ರೊ, ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ಮತ್ತು ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ಜಂಟಿಯಾಗಿ ಈ ಪ್ಯಾರಾಚೂಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಮಾನವಸಹಿತ ಬಾಹ್ಯಾಕಾಶ ಯಾನವನ್ನು ಸಾಧ್ಯವಾಗಿಸುವುದು ಗಗನಯಾನ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಮೂವರು ಗಗನಯಾನಿಗಳನ್ನು 400 ಕಿಲೋಮೀಟರ್ ಎತ್ತರದ ಕಕ್ಷೆಗೆ ಸೇರಿಸಲಾಗುತ್ತದೆ. ಮೂರು ದಿನಗಳ ಬಳಿಕ ಅವರು ಭೂಮಿಗೆ ವಾಪಸಾಗಲಿದ್ದಾರೆ. ದೇಶದ ಮೊದಲ ಮಾನವಸಹಿತ ಗಗನಯಾನವು 2024ರ ಕೊನೆಯಲ್ಲಿ ಕೈಗೂಡಲಿದೆ ಎಂದು ಕೇಂದ್ರ ಸರ್ಕಾರ ಇತ್ತೀಚಿಗೆ ಮಾಹಿತಿ ನೀಡಿತ್ತು. ಗಗನಯಾನ: ಇಸ್ರೋದ ಬಹು ನಿರೀಕ್ಷಿತ ಪ್ಯಾರಾಚೂಟ್ ಪರೀಕ್ಷೆ ಯಶಸ್ಸು