ಕಳೆದ 5 ದಿನಗಳಲ್ಲಿ ಬೆಂಗಳೂರಿನ 242 ಮಕ್ಕಳಿಗೆ ಕೊರೊನಾ..! ರಾಜಧಾನಿಯಲ್ಲಿ ಹೆಚ್ಚಾದ 3ನೇ ಅಲೆ ಆತಂಕ

ಈಗಾಗಲೇ ತಜ್ಞರು ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ ಎಂದು ಅಂದಾಜಿಸಿದ್ದಾರೆ. ಅದರ ಲಕ್ಷಣಗಳು ಬೆಂಗಳೂರಿನಲ್ಲಿ ಗೋಚರಿಸುತ್ತಿದ್ದು, ಕಳೆದ 5 ದಿನಗಳಲ್ಲಿ 242 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಮೂರು ಪಟ್ಟು ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ 5 ದಿನಗಳಲ್ಲಿ ಬೆಂಗಳೂರಿನ 242 ಮಕ್ಕಳಿಗೆ ಕೊರೊನಾ..! ರಾಜಧಾನಿಯಲ್ಲಿ ಹೆಚ್ಚಾದ 3ನೇ ಅಲೆ ಆತಂಕ
Linkup
ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಅಂದಾಜಿಸಿರುವಂತೆಯೇ ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ ಕನಿಷ್ಠ 242 ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವುದು ಬಹಿರಂಗವಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಹೇಳಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಬೃಹತ್‌ ಮಹಾನಗರ ಪಾಲಿಕೆಯ ಮಾಹಿತಿ ಪ್ರಕಾರ ಕಳೆದ 5 ದಿನಗಳಲ್ಲಿ 19 ವರ್ಷದ 242 ಮಕ್ಕಳಿಗೆ ಕೋವಿಡ್ ‌ಪಾಸಿಟಿವ್‌ ದೃಢಪಟ್ಟಿದೆ. ಅದರಲ್ಲಿ 9 ವರ್ಷದ 106 ಮಕ್ಕಳಿಗೆ ಸೋಂಕು ತಗುಲಿದ್ದರೆ, 9 ರಿಂದ 19 ವರ್ಷದೊಳಗಿನ 136 ಮಕ್ಕಳಿಗೆ ಕೊರೊನಾ ಖಚಿತವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಇರಿಸಿ, ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಆರೋಗ್ಯ ಅಧಿಕಾರಿಗಳು ಪೋಷಕರಿಗೆ ಸೂಚಿಸಿದ್ದಾರೆ. ಸದ್ಯ ಇರುವ ಮಕ್ಕಳ ಕೋವಿಡ್‌ ಪ್ರಕರಣಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಮಕ್ಕಳಿಗೆ ಮುಂದೆ ಭಾರೀ ಅಪಾಯ ಕಾದಿದೆ ಎಂಬುದು ತಜ್ಞರ ಆತಂಕವಾಗಿದೆ. ಈಗಾಗಲೇ ಸರ್ಕಾರ ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಮಂಗಳವಾರವಷ್ಟೇ ಕೇರಳ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪ್ರಯಾಣಿಸುವ ಪ್ರಯಾಣಿಕರು ರೈಲು ಹತ್ತುವ ಮುಂಚೆಯೇ ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ ಎಂದು ಭಾರತೀಯ ರೈಲ್ವೇಗೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂವನ್ನು ಕೂಡ ಜಾರಿಗೆ ತರಲಾಗಿದ್ದು, ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವವರಿಗೆ ಆರ್‌ಟಿಪಿಸಿಆರ್‌ ನೆಗೆಟಿವ್‌ ಕಡ್ಡಾಯಗೊಳಿಸಲಾಗಿದೆ. ಆಗಸ್ಟ್‌ 16 ರಿಂದ ರಾಜ್ಯದಲ್ಲಿ ಭಾಗಶಃ ಲಾಕ್‌ಡೌನ್‌ ಮಾಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಸುಮಾರು 1,500 ಪಾಸಿಟಿವ್‌ ಕೇಸ್‌ಗಳು ಪ್ರತಿದಿನ ಕಂಡುಬರುತ್ತಿವೆ.