ಏಷ್ಯನ್ ಗೇಮ್ಸ್ 2023: ಇತಿಹಾಸ ಬರೆದ 'ಕುದುರೆ ಸವಾರಿ' ತಂಡ, 41 ವರ್ಷಗಳ ಬಳಿಕ ಭಾರತಕ್ಕೆ ಚಿನ್ನ

ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದಲ್ಲಿ ಮಂಗಳವಾರ ಭಾರತ ಐತಿಹಾಸಿಕ ಸಾಧನೆ ಮಾಡಿದ್ದು ಈಕ್ವೇಸ್ಟ್ರಿಯನ್ ಅಥವಾ ಕುದುರೆ ಸವಾರಿಯಲ್ಲಿ ಬರೊಬ್ಬರಿ 41 ವರ್ಷಗಳ ಬಳಿಕ ಭಾರತ ತಂಡಕ್ಕೆ ಚಿನ್ನದ ಪದಕ ಲಭಿಸಿದೆ. ಹ್ಯಾಂಗ್ ಝೌ: ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದಲ್ಲಿ ಮಂಗಳವಾರ ಭಾರತ ಐತಿಹಾಸಿಕ ಸಾಧನೆ ಮಾಡಿದ್ದು ಈಕ್ವೇಸ್ಟ್ರಿಯನ್ ಅಥವಾ ಕುದುರೆ ಸವಾರಿಯಲ್ಲಿ ಬರೊಬ್ಬರಿ 41 ವರ್ಷಗಳ ಬಳಿಕ ಭಾರತ ತಂಡಕ್ಕೆ ಚಿನ್ನದ ಪದಕ ಲಭಿಸಿದೆ.
ಹೌದು..2023 ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕುದುರೆ ಸವಾರಿ ತಂಡವು ಇತಿಹಾಸವನ್ನು ನಿರ್ಮಿಸಿದ್ದು, ಟೀಮ್ ಡ್ರೆಸ್ಸೇಜ್ ಈವೆಂಟ್‌ನಲ್ಲಿ, ತಂಡವು ಅಗ್ರಸ್ಥಾನಕ್ಕೇರಿ ಚಿನ್ನ ಪದಕವನ್ನು ಗೆದ್ದುಕೊಂಡಿದೆ. ಆ ಮೂಲಕ ಬರೊಬ್ಬರಿ 41 ವರ್ಷಗಳ ಬಳಿಕ ಭಾರತ ಕುದುರೆ ಸವಾರಿ ತಂಡ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಈ ಕ್ರೀಡೆಯಲ್ಲಿ 1982 ರ ಬಳಿಕ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕ ಇದಾಗಿದೆ.
Gold for Ages #TeamIndia #AsianGames2022 #IndiaAtAG22 pic.twitter.com/8w7yRz4M5c
— Doordarshan Sports (@ddsportschannel) September 26, 2023
ಇದನ್ನೂ ಓದಿ: Asian Games Hockey: ಸಿಂಗಾಪುರ ವಿರುದ್ಧ ಭಾರತಕ್ಕೆ 16–1 ಅಂತರದ ಭರ್ಜರಿ ಜಯ, 2 ಪಂದ್ಯಗಳಲ್ಲಿ 32 ಗೋಲು ಬಾರಿಸಿದ ಹರ್ಮನ್ ಪ್ರೀತ್ ಸಿಂಗ್ ಪಡೆ
ಟೀಮ್ ಡ್ರೆಸ್ಸೇಜ್ ಈವೆಂಟ್‌ನಲ್ಲಿ ಭಾರತ ತಂಡವು ಒಟ್ಟು 209.205 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಚೀನಾ 204.882 ರೊಂದಿಗೆ ಬೆಳ್ಳಿಯೊಂದಿಗೆ ಮತ್ತು ಹಾಂಗ್ ಕಾಂಗ್ ಚೀನಾ 204.852 ರೊಂದಿಗೆ 3ನೇ ಸ್ಥಾನದಲ್ಲಿ ಕಂಚಿನ ಪದಕ ಪಡೆದುಕೊಂಡಿದೆ. ಸುದೀಪ್ತಿ ಹಜೇಲಾ, ಹೃದಯ್ ವಿಪುಲ್ ಛೇಡಾ, ಅನುಷ್ ಗರ್ವಾಲಾ ಮತ್ತು ದಿವ್ಯಕೃತಿ ಸಿಂಗ್ ಅವರ ಭಾರತ ತಂಡವು ಕುದುರೆ ಸವಾರಿಯಲ್ಲಿ ಡ್ರೆಸ್ಸೇಜ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಬರೆದಿದೆ.
#EquestrianExcellence at the
After 41 long years, Team clinchesin Dressage Team Event at #AsianGames2022
Many congratulations to all the team members #Cheer4India#HallaBol#JeetegaBharat#BharatAtAG22 pic.twitter.com/CpsuBkIEAw
— SAI Media (@Media_SAI) September 26, 2023
ಡ್ರೆಸ್ಸೇಜ್ ಟೀಮ್ ಈವೆಂಟ್‌ನಲ್ಲಿ ತಂಡದ ಒಟ್ಟಾರೆ ಸ್ಕೋರ್‌ಗೆ ಅಗ್ರ 3 ತಂಡಗಳ ಸ್ಕೋರ್ ಅನ್ನು ಮಾತ್ರ ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್ ಮಹಿಳಾ ಟಿ20 ಕ್ರಿಕೆಟ್ ಫೈನಲ್: ಶ್ರೀಲಂಕಾ ವಿರುದ್ಧ ಜಯ, ಚಿನ್ನ ಗೆದ್ದ ಭಾರತ ತಂಡ
ಅಂತೆಯೇ ಇದು ಏಷ್ಯನ್ ಗೇಮ್ಸ್‌ನಲ್ಲಿ ಈಕ್ವೆಸ್ಟ್ರಿಯನ್‌ನಲ್ಲಿ ಭಾರತದ ನಾಲ್ಕನೇ ಚಿನ್ನದ ಪದಕವಾಗಿದ್ದು, ಕ್ರೀಡಾಕೂಟದಲ್ಲಿ ಒಟ್ಟಾರೆ 13ನೇ ಪದಕವಾಗಿದೆ. ಈಕ್ವೆಸ್ಟ್ರಿಯನ್‌ನಲ್ಲಿ ಭಾರತದ ಎಲ್ಲಾ 3 ಚಿನ್ನದ ಪದಕಗಳು 1982 ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಬಂದಿದ್ದವು.