ಶರದ್ ಪವಾರ್ V/S ಅಜಿತ್ ಪವಾರ್! ಎನ್‌ಸಿಪಿ ಶಾಸಕರ ಸಂಖ್ಯಾಬಲ ಯಾರಿಗೆ ಹೆಚ್ಚು?

ಮುಂಬೈ (ಮಹಾರಾಷ್ಟ್ರ): ಶಿವಸೇನೆ ಮಾದರಿಯಲ್ಲೇ ಎನ್‌ಸಿಪಿ ಕೂಡಾ ಒಡೆದು ಹೋಳಾಗುವ ಹಾದಿಯಲ್ಲಿದೆ. ಎನ್‌ಸಿಪಿ ವರಿಷ್ಠ ಶರದ್ ಪವಾರ್ ವಿರುದ್ಧ ಸಿಡಿದೆದ್ದು ಶಿಂಧೆ ಸರ್ಕಾರಕ್ಕೆ ಬೆಂಬಲ ಘೋಷಿಸಿರುವ ಅಜಿತ್ ಪವಾರ್, ತಮ್ಮ ಬಳಿ 40 ಶಾಸಕರ ಸಂಖ್ಯಾ ಬಲ ಇದೆ ಎಂದು ಹೇಳಿಕೊಂಡಿದ್ದಾರೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಒಟ್ಟು 53 ಶಾಸಕರನ್ನು ಹೊಂದಿದೆ. ಒಂದು ವೇಳೆ ಅಜಿತ್ ಪವಾರ್ ಹೇಳುತ್ತಿರುವಂತೆ 40 ಶಾಸಕರು ಅವರಿಗೆ ಬೆಂಬಲ ಘೋಷಿಸಿದರೆ, ಶರದ್ ಪವಾರ್ ಅವರಿಗೆ ಭಾರೀ ಹಿನ್ನಡೆ ಆಗಲಿದೆ. ತಮ್ಮ ಚಿಕ್ಕಪ್ಪನ ವಿರುದ್ಧವೇ ಸಿಡಿದೆದ್ದಿರುವ ಅಜಿತ್ ಪವಾರ್, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮಾದರಿಯಲ್ಲೇ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಕಳೆದ ವರ್ಷ ಶಿವಸೇನೆಯ ನಾಯಕ, ಆಗಿನ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದಿದ್ದ ಏಕನಾಥ್ ಶಿಂಧೆ, ತಮ್ಮ ಬಣದ 40 ಶಾಸಕರ ಜೊತೆ ಬಿಜೆಪಿ ಸೇರ್ಪಡೆಯಾಗಿ ಸಿಎಂ ಪಟ್ಟ ಅಲಂಕರಿಸಿದ್ದರು.

Linkup