ಯಾವುದೇ ಆತಂಕ ಬೇಡ, ಎಲ್ಲವೂ ಒಳ್ಳೆಯದಾಗುತ್ತೆ ಅಂತಾ ಬಿಎಸ್‌ವೈ ಹೇಳಿದ್ದಾರೆ; ಎಂಟಿಬಿ ನಾಗರಾಜ್

ಯಡಿಯೂರಪ್ಪ ರಾಜೀನಾಮೆಯಿಂದ ನಮಗೆ ಯಾವುದೇ ಆತಂಕ ಇಲ್ಲ, ಯಾರೇ ಸಿಎಂ ಆದರೂ ನಮಗೆ ಆತಂಕ ಇಲ್ಲ ಎಂದರು. ರಾಜ್ಯದಲ್ಲಿ ಒಳ್ಳೆಯ ರೀತಿಯ ಆಡಳಿತ ಕೊಡುವವರು ಸಿಎಂ ಆಗಲಿ, ಸಂಪುಟದಲ್ಲಿ ಯಾರನ್ನು ಕೈ ಬಿಡುತ್ತಾರೆ ಉಳಿಸುತ್ತಾರೆ ಎಂಬ ಮಾಹಿತಿ ಇಲ್ಲ. ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆ ಆಗುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ಇವೆಲ್ಲವೂ ಈಗ ಆದ ನಿರ್ಧಾರ ಎಂದು ಎಂಟಿಬಿ ನಾಗರಾಜ್ ಹೇಳಿದರು.

ಯಾವುದೇ ಆತಂಕ ಬೇಡ, ಎಲ್ಲವೂ ಒಳ್ಳೆಯದಾಗುತ್ತೆ ಅಂತಾ ಬಿಎಸ್‌ವೈ ಹೇಳಿದ್ದಾರೆ; ಎಂಟಿಬಿ ನಾಗರಾಜ್
Linkup
ಬೆಂಗಳೂರು: ಯಾವುದೇ ಆತಂಕ ಬೇಡ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಬಿಎಸ್ ಯಡಿಯೂರಪ್ಪ ಅವರು ಅಭಯ ನೀಡಿದ್ದಾರೆ ಎಂದು ಮಾಜಿ ಸಚಿವ ಹೇಳಿದರು.‌ ಯಡಿಯೂರಪ್ಪ ಅವರನ್ನು ಭೇಟಿ ಆದ ಬಳಿಕ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪ ರಾಜೀನಾಮೆಯಿಂದ ನಮಗೆ ಯಾವುದೇ ಆತಂಕ ಇಲ್ಲ, ಯಾರೇ ಸಿಎಂ ಆದರೂ ನಮಗೆ ಆತಂಕ ಇಲ್ಲ ಎಂದರು. ರಾಜ್ಯದಲ್ಲಿ ಒಳ್ಳೆಯ ರೀತಿಯ ಆಡಳಿತ ಕೊಡುವವರು ಸಿಎಂ ಆಗಲಿ, ಸಂಪುಟದಲ್ಲಿ ಯಾರನ್ನು ಕೈ ಬಿಡುತ್ತಾರೆ ಉಳಿಸುತ್ತಾರೆ ಎಂಬ ಮಾಹಿತಿ ಇಲ್ಲ. ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆ ಆಗುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ಇವೆಲ್ಲವೂ ಈಗ ಆದ ನಿರ್ಧಾರ ಎಂದರು. ಇನ್ನು ಯಡಿಯೂರಪ್ಪ ರಾಜೀನಾಮೆ ನೀಡುವಾಗ ಅವರ ರಾಜಕೀಯ ಏಳು ಬೀಳು ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಭಾವುಕರಾಗಿದ್ದಾರೆ ಎಂದ ಅವರು, ವಿಜಯೇಂದ್ರ ವಿರುದ್ಧದ ವಿಶ್ವನಾಥ್ ಆರೋಪ ವೈಯುಕ್ತಿಕವಾಗಿದೆ. ನಾನು ಅಧಿಕಾರದ ಆಸೆಯಿಂದ ರಾಜಕೀಯ ಮಾಡಿಲ್ಲ, ಸಚಿವ ಸ್ಥಾನದ ಸಿಗುವ ಕೈತಪ್ಪುವ ಬಗ್ಗೆ ನನಗೆ ಯಾವುದೇ ಆತಂಕ ಇಲ್ಲ ಎಂದರು. ಇನ್ನು ಮಿತ್ರಮಂಡಳಿ ಒಗ್ಗಟ್ಟಾಗಿದ್ದೇವೆ, ವರಿಷ್ಠರ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ನಾವು ಬಿಜೆಪಿಗೆ ಯಡಿಯೂರಪ್ಪ ಒಬ್ಬರನ್ನು ನಂಬಿ ಬಂದಿಲ್ಲ, ಮೋದಿ ಅವರ ಪಾರದರ್ಶಕ ಆಡಳಿತ ನೋಡಿ ಬಂದಿದ್ದೇವೆ. ವರಿಷ್ಠರು ಯಾರನ್ನಾದರೂ ಮಾಡಲಿ, ಆದರೆ ಉತ್ತಮ ಆಡಳಿತ ನೀಡುವ ಪ್ರಾಮಾಣಿಕರು ಆಗಲಿ ಎಂದರು.