ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ಕೊರೊನಾ ಪಾಸಿಟಿವ್: ದಿಲ್ಲಿ ಏಮ್ಸ್‌ಗೆ ದಾಖಲು

ದೇಶದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ವೈರಸ್ ಕುರಿತಾಗಿ ಕಳವಳ ವ್ಯಕ್ತಪಡಿಸಿದ್ದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಭಾನುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ಕೊರೊನಾ ಪಾಸಿಟಿವ್: ದಿಲ್ಲಿ ಏಮ್ಸ್‌ಗೆ ದಾಖಲು
Linkup
: ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್‌ ಅವರಿಗೆ ಸೋಂಕು ತಗುಲಿದೆ. ಸಿಂಗ್ ಅವರಿಗೆ ಕೊರೊನಾ ಪಾಸಿಟಿವ್ ಆಗಿರೋದು ದೃಢಪಟ್ಟ ಕೂಡಲೇ ಅವರನ್ನು ದಿಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. 88 ವರ್ಷ ವಯಸ್ಸಿನ ಅವರ ಆರೋಗ್ಯ ಸ್ಥಿತಿ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ. ಭಾನುವಾರವೂ ಸುದ್ದಿಯಲ್ಲಿದ್ದ ಸಿಂಗ್: ದೇಶದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ವೈರಸ್ ಕುರಿತಾಗಿ ಕಳವಳ ವ್ಯಕ್ತಪಡಿಸಿದ್ದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಭಾನುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಕೋವಿಡ್‌ ನಿಯಂತ್ರಣಕ್ಕೆ 5 ಸಲಹೆಗಳನ್ನು ನೀಡಿದ್ದರು. ಸಿಂಗ್ ಅವರು ತಮ್ಮ ಪತ್ರದಲ್ಲಿ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮವನ್ನು ವ್ಯಾಪಕವಾಗಿ ವಿಸ್ತರಿಸುವಂತೆ ಒತ್ತಾಯಿಸಿದ್ದರು. ನಾವು ಇದುವರೆಗೆ ಎಷ್ಟು ಜನಕ್ಕೆ ಲಸಿಕೆ ನೀಡಿದ್ದೇವೆ ಎಂಬುದನ್ನು ನೋಡುತ್ತಾ ಕೂರುವ ಬದಲು, ದೇಶದಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾವಾರು ಎಷ್ಟು ಜನಕ್ಕೆ ಲಸಿಕೆ ನೀಡಿದ್ದೇವೆ ಎಂಬುದರತ್ತ ಗಮನಹರಿಸಬೇಕು ಎಂದು ಮನಮೋಹನ್‌ ಸಿಂಗ್‌ ಸಲಹೆ ನೀಡಿದ್ದರು.