ಕೋರ್ಟ್ ತರಾಟೆ ಬಳಿಕ ಭಾರತದಲ್ಲಿ ದೂರು ಸ್ವೀಕಾರ ಅಧಿಕಾರಿ ನೇಮಿಸಿದ ಟ್ವಿಟ್ಟರ್

ಕೇಂದ್ರ ಸರಕಾರದ ಹೊಸ ಐಟಿ ನಿಯಮದಂತೆ ಟ್ವಿಟ್ಟರ್ ಇಂಡಿಯಾ, ಭಾರತೀಯ ಪ್ರಜೆ ವಿನಯ್ ಪ್ರಕಾಶ್ ಅವರನ್ನು ತನ್ನ ಪ್ರಾದೇಶಿಕ ಅಹವಾಲು ಸ್ವೀಕಾರ ಅಧಿಕಾರಿಯನ್ನಾಗಿ ನೇಮಕ ಮಾಡಿದೆ.

ಕೋರ್ಟ್ ತರಾಟೆ ಬಳಿಕ ಭಾರತದಲ್ಲಿ ದೂರು ಸ್ವೀಕಾರ ಅಧಿಕಾರಿ ನೇಮಿಸಿದ ಟ್ವಿಟ್ಟರ್
Linkup
ಹೊಸದಿಲ್ಲಿ: ಕೋರ್ಟ್ ತರಾಟೆಯ ಬಳಿಕ ಇಂಡಿಯಾ, ನೂತನ ಐಟಿ ನಿಯಮಗಳ ಅಡಿಯಲ್ಲಿ ಭಾರತೀಯ ಪ್ರಜೆಯನ್ನು ಪ್ರಾದೇಶಿಕ ಅಹವಾಲು ಸ್ವೀಕಾರ ಅಧಿಕಾರಿಯನ್ನಾಗಿ ನೇಮಕ ಮಾಡಿದೆ. ಅವರನ್ನು ತನ್ನ ದೂರು ನಿರ್ವಹಣಾ ಅಧಿಕಾರಿಯನ್ನಾಗಿ ನೇಮಿಸಿರುವ ಟ್ವಿಟ್ಟರ್, ಅವರ ಇಮೇಲ್ ಸಂಪರ್ಕ ವಿಳಾಸವನ್ನು ಹಂಚಿಕೊಂಡಿದೆ. ಕೇಂದ್ರ ಸರಕಾರದ ಜತೆಗೆ ತೀವ್ರ ಸಂಘರ್ಷ ನಡೆಯುತ್ತಿರುವ ನಡುವೆಯೇ ಅದು ಈ ನೇಮಕ ಮಾಡಿದೆ. ಇದಕ್ಕೂ ಮುನ್ನ ಟ್ವಿಟ್ಟರ್ ಇಂಡಿಯಾ, ಧರ್ಮೇಂದ್ರ ಚಾತುರ್ ಅವರನ್ನು ನಿಯಮಗಳ ಪ್ರಕಾರ ಭಾರತೀಯ ಅಹವಾಲು ಸ್ವೀಕಾರ ಅಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಆದರೆ ಕಳೆದ ತಿಂಗಳು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೇ ಅಂತ್ಯದಲ್ಲಿ ಜಾರಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಟ್ವಿಟ್ಟರ್ ತನ್ನ ಮೊದಲ ದೂರು ಪರಿಹಾರ ವರದಿಯನ್ನು ಸಲ್ಲಿಸಿದೆ. ಈವರೆಗೂ ಕಿರುಕುಳದಿಂದ ಖಾಸಗಿತನಕ್ಕೆ ಧಕ್ಕೆ ತರುವವರೆಗಿನ 133 ಪೋಸ್ಟ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಹಾಗೂ ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವ ಮತ್ತು ಸಮ್ಮತಿಯಿಲ್ಲದ ನಗ್ನತೆ ಕಾರಣಗಳಿಂದ 18,000ಕ್ಕೂ ಅಧಿಕ ಖಾತೆಗಳನ್ನು ಅಮಾನತುಗೊಳಿಸಿರುವುದಾಗಿ ಅದು ತಿಳಿಸಿದೆ. ಟ್ವಿಟ್ಟರ್ ಖಾತೆ ಅಮಾನತಿಗಾಗಿ ಕೋರಿ 56 ಅಹವಾಲುಗಳನ್ನು ಪ್ರಕ್ರಿಯೆಗೊಳಿಸಿದ್ದು, ಅವುಗಳನ್ನೆಲ್ಲ ಪರಿಹರಿಸಲಾಗಿದೆ ಮತ್ತು ಸೂಕ್ತ ಪ್ರತಿಕ್ರಿಯೆಗಳನ್ನು ರವಾನಿಸಲಾಗಿದೆ ಎಂದು ಮೇ 25 ರಿಂದ ಜೂನ್ 26ರವರೆಗಿನ ಅವಧಿಯ ಪ್ರಕರಣಗಳ ವರದಿಯಲ್ಲಿ ಅದು ತಿಳಿಸಿದೆ.