ಅರವಕುರಿಚಿಯಲ್ಲಿ ಅಣ್ಣಾಮಲೈ ಅಬ್ಬರದ ಪ್ರಚಾರ; ಮಾಜಿ ಐಪಿಎಸ್‌ಗೆ ಮುನಿರತ್ನ ಸಾಥ್‌

ಅಣ್ಣಾಮಲೈ ಪರ ಕರ್ನಾಟಕದ ಶಾಸಕ ಮುನಿರತ್ನ ಕೂಡ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಅಣ್ಣಾಮಲೈ ಅವರನ್ನು ಚುನಾಯಿಸುವಂತೆ ಚಿತ್ರನಟಿ ಗೌತಮಿ ಅವರೊಂದಿಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮುನಿರತ್ನರವರು ಬಿರುಸಿನ‌ ಪ್ರಚಾರ ನಡೆಸಿ ಮತಯಾಚಿಸಿದರು.

ಅರವಕುರಿಚಿಯಲ್ಲಿ ಅಣ್ಣಾಮಲೈ ಅಬ್ಬರದ ಪ್ರಚಾರ; ಮಾಜಿ ಐಪಿಎಸ್‌ಗೆ ಮುನಿರತ್ನ ಸಾಥ್‌
Linkup
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಮತದಾರರನ್ನು ಓಲೈಸಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಈ ಮಧ್ಯೆ ಕರ್ನಾಟಕದ ಮಾಜಿ ಐಪಿಎಸ್‌ ಅಧಿಕಾರಿ, ತಮಿಳುನಾಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡ್ತಿರೋ ಕೂಡ ತನ್ನ ಪ್ರಚಾರ ಕಾರ್ಯವನ್ನು ಬಿರುಸುಗೊಳಿಸಿದ್ದು, ಅಣ್ಣಾಮಲೈ ಪರ ಕರ್ನಾಟಕದ ಶಾಸಕ ಕೂಡ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಅಣ್ಣಾಮಲೈ ಅವರನ್ನು ಚುನಾಯಿಸುವಂತೆ ಚಿತ್ರನಟಿ ಗೌತಮಿ ಅವರೊಂದಿಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮುನಿರತ್ನರವರು ಬಿರುಸಿನ‌ ಪ್ರಚಾರ ನಡೆಸಿ ಮತಯಾಚಿಸಿದರು. ಕರ್ನಾಟಕದ ಜೊತೆ ವಿಶೇಷ ಬಾಂಧವ್ಯ ಹೊಂದಿರುವ ಅಣ್ಣಾಮಲೈ ನಾಮಪತ್ರ ಸಲ್ಲಿಕೆ ವೇಳೆಯೂ ಪ್ರಚಾರಕ್ಕೆ ಕರ್ನಾಟಕದ ಬಿಜೆಪಿ ನಾಯಕರು ಕೂಡ ತೊಡಗಿಸಿಕೊಂಡಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಮತ್ತು ಆರ್‌ಆರ್‌ನಗರ ಶಾಸಕ ಮುನಿರತ್ನ ಹಾಜರಾಗಿ ಅಣ್ಣಾಮಲೈಗೆ ಸಾಥ್ ನೀಡಿದ್ದರು. ನಾಮಪತ್ರ ಸಲ್ಲಿಕೆಗೂ ಮುನ್ನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಪಾರ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಂಸದ ತೇಜಸ್ವಿಸೂರ್ಯ, ರಾಜರಾಜೇಶ್ವರಿನಗರ ಶಾಸಕರಾದ ‌ಮುನಿರತ್ನ, ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯ ವೇಲು ನಾಯಕರ್ ಸೇರಿದಂತೆ ಹಲವರು ಭಾಗಿಯಾಗಿದ್ರು.