ಅಥ್ಲೀಟ್ ಬಿಂದು ರಾಣಿ ಮೇಲೆ ಕೋಚ್ ಪತ್ನಿ ದೌರ್ಜನ್ಯ; ಚಪ್ಪಲಿ ತೋರಿಸಿ ಆಕ್ರೋಶ!

ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯದ ಅಥ್ಲೀಟ್ ಬಿಂದುರಾಣಿ ಮೇಲೆ ಕೋಚ್ ಪತ್ನಿಯೊಬ್ಬರು ದೌರ್ಜನ್ಯ ನಡೆಸಿದ್ದು ಅಲ್ಲದೆ ಚಪ್ಪಲಿ ತೋರಿಸಿ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯದ ಅಥ್ಲೀಟ್ ಬಿಂದುರಾಣಿ ಮೇಲೆ ಕೋಚ್ ಪತ್ನಿಯೊಬ್ಬರು ದೌರ್ಜನ್ಯ ನಡೆಸಿದ್ದು ಅಲ್ಲದೆ ಚಪ್ಪಲಿ ತೋರಿಸಿ ಆಕ್ರೋಶ ಹೊರಹಾಕಿದ್ದಾರೆ.
ಬಿಂದುರಾಣಿಯನ್ನು ಕಳ್ಳಿ ಎಂದು ಕರೆದಿದ್ದು ಜುಲೈ 3ರಂದು ಬೆಳಗಿನ ಜಾವ ಈ ಘಟನೆ ನಡೆದಿದೆ. ಈ ಸಂಬಂಧ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜ್ಯದ ಹಿರಿಯ ಕೋಚ್ ಯತೀಶ್ ಅವರ ಪತ್ನಿ ಶ್ವೇತ ಕ್ರೀಡಾಂಗಣಕ್ಕೆ ಆಗಮಿಸಿ ಬಿಂದುರಾಣಿಗೆ ಅಡ್ಡಗಟ್ಟಿ ನಿಂದಿಸಲು ಆರಂಭಿಸಿದರು. ನಿಮ್ಮಂತವರಿಂದ ಕರ್ನಾಟಕದ ಮರ್ಯಾದೆ ಹಾಳಾಗುತ್ತಿದೆ. ನಿನಗೆ ಖೇಲ್ ರತ್ನ ಪ್ರಶಸ್ತಿ ಸಿಕ್ಕಿದೆಯಾ ಎಂದು ಬೈದಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಶ್ವೇತ ಬಿಂದುರಾಣಿಗೆ ಚಪ್ಪಲಿ ತೋರಿಸಿ ನೀನು ಕಳ್ಳಿ ಲಕ್ಷಾಂತರ ಮೌಲ್ಯದ ಕ್ರೀಡಾ ಸಾಮಗ್ರಿಯನ್ನು ಕದ್ದಿದ್ದೀಯ ಎಂದು ಆರೋಪ ಮಾಡಿದರು. ಇದೆಲ್ಲಾ ನಡೆಯುತ್ತಿದ್ದರು. ಬಿಂದು ರಾಣಿ ಮಾತ್ರ ಯಾವುದೇ ಪ್ರತಿರೋಧ ತೋರದೆ ಸುಮ್ಮನೆ ನಿಂತಿದ್ದರು.
ಇದನ್ನೂ ಓದಿ: ಸ್ಯಾಫ್ ಫುಟ್‌ಬಾಲ್ ಟೂರ್ನಿ: ಲೆಬನಾನ್ ಮಣಿಸಿ ಫೈನಲ್‌ಗೆ ಭಾರತ ಲಗ್ಗೆ
ಟೆಡ್ ಎಕ್ಸ್ ಶೋನಲ್ಲಿ ಬಿಂದುರಾಣಿ ಭಾಗಹಿಸಿದ್ದರ ಕುರಿತಂತೆ ಶ್ವೇತ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಂದುರಾಣಿ ನಮ್ಮ ಕಂಠೀರವ ಸ್ಟೇಡಿಯಂ ಗ್ರೂಪ್‌ನಲ್ಲಿ ನನ್ನ ಟೆಡ್ ಎಕ್ಸ್ ಶೋ ಬಗ್ಗೆ ವಾಟ್ಸಾಪ್ ಗ್ರೂಪ್‌ನಲ್ಲಿ ಯತೀಶ್ ಪೋಸ್ಟ್ ಮಾಡಿದ್ದರು. ನಾನು ಖೇಲ್ ರತ್ನ ಸ್ಟಾರ್ ಅಲ್ಲ ಅಂತೆಲ್ಲಾ ಹಾಕಿದ್ದರು. ಇನ್ನು ಅಥ್ಲೀಟ್ ಹೆಸರಲ್ಲಿ ದುಡ್ಡು ಮಾಡುತ್ತೀಯಾ ಅಂತ ಇನ್ನೊಂದು ಪೋಸ್ಟ್ ಹಾಕಿದ್ದರು. ಈ ವಿಷಯವಾಗಿ ನನ್ನ ಗಂಡ ಹಿರಿಯ ಕೋಚ್‌ಗೆ ಫೋನ್ ಮಾಡಿ ಮಾತನಾಡಿದ್ದರು. ಈ ವೇಳೆ ಯತೀಶ್ ಅವರ ಪತ್ನಿ ಫೋನ್ ರಿಸೀವ್ ಮಾಡಿ ಏಕವಚನದಲ್ಲೇ ಮಾತನಾಡಿದ್ದರು ಎಂದು ಬಿಂದು ರಾಣಿ ಆರೋಪಿಸಿದ್ದಾರೆ.
ಅಲ್ಲದೆ ಇಂದು ಬೆಳಗ್ಗೆ ಕ್ರೀಡಾಂಗಣಕ್ಕೆ ಬಂದು ಮತ್ತೆ ನನ್ನ ಮೇಲೆ ನಿಂದನೆ ಮಾಡಿದ್ದಾರೆ. ನಮ್ಮ ಅಸೋಸಿಯೇಷನ್‌ನಿಂದ ಬಂದು ಯಾರಾದರೂ ಪ್ರಶ್ನೆ ಮಾಡಿದ್ದರೆ ಉತ್ತರ ಕೊಡುತ್ತಿದ್ದೆ. ನನಗೂ ಅವರಿಗೂ ಈ ಹಿಂದೆ ಯಾವುದೇ ಪರಿಚಯವಿಲ್ಲ. ಅವರು ಕೋಚ್ ಹೆಂಡತಿಯಷ್ಟೇ. ಗಂಡನ ಜತೆ ಈ ಹಿಂದೆ ಅಲ್ಲಿಗೆ ಬರುತ್ತಿದ್ದರು ಎಂದು ಬಿಂದು ರಾಣಿ ಹೇಳಿದ್ದಾರೆ.