ರತ್ನಾಗಿರಿ ಸುರಂಗದಲ್ಲಿ ಹಳಿ ತಪ್ಪಿದ ದಿಲ್ಲಿ-ಗೋವಾ ರಾಜಧಾನಿ ಎಕ್ಸ್‌ಪ್ರೆಸ್ ರೈಲು

ದಿಲ್ಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಮಹಾರಾಷ್ಟ್ರದ ರತ್ನಾಗಿರಿ ಸಮೀಪದ ಸುರಂಗವೊಂದರಲ್ಲಿ ಹಳಿ ತಪ್ಪಿದ ಘಟನೆ ಶನಿವಾರ ನಸುಕಿನಲ್ಲಿ ಸಂಭವಿಸಿದೆ. ಎಲ್ಲ ಪ್ರಯಾಣಿಕರೂ ಅಪಾಯದಿಂದ ಪಾರಾಗಿದ್ದಾರೆ.

ರತ್ನಾಗಿರಿ ಸುರಂಗದಲ್ಲಿ ಹಳಿ ತಪ್ಪಿದ ದಿಲ್ಲಿ-ಗೋವಾ ರಾಜಧಾನಿ ಎಕ್ಸ್‌ಪ್ರೆಸ್ ರೈಲು
Linkup
ಮುಂಬಯಿ: ದಿಲ್ಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ರಾಜಧಾನಿ ಮಹಾರಾಷ್ಟ್ರದ ರತ್ನಾಗಿರಿಯ ಸುರಂಗವೊಂದರಲ್ಲಿ ಶನಿವಾರ ನಸುಕಿನಲ್ಲಿ ಹಳಿ ತಪ್ಪಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. 'ದಿಲ್ಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಮಡ್ಗಾಂವ್ ನಿಲ್ದಾಣಕ್ಕೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲು, ರತ್ನಾಗಿರಿ ಸಮೀಪದ ಕಾರ್ಬುಡೆ ಸುರಂಗದಲ್ಲಿ ಇಂದು ಹಳಿ ತಪ್ಪಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬಯಿ ನಗರದಿಂದ ಸುಮಾರು 325 ಕಿಮೀ ದೂರದಲ್ಲಿ ದಿಲ್ಲಿ-ಗೋವಾ ರೈಲು ದುರಂತ ಸಂಭವಿಸಿದೆ. ರೈಲು ಅವಘಡದಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಅವರು ಹೇಳಿದ್ದಾರೆ. ನಸುಕಿನ 4.15ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಕೊಂಕಣ ರೈಲ್ವೆ ವಕ್ತಾರರೊಬ್ಬರು ತಿಳಿಸಿದ್ದಾರೆ. ಉಕ್ಷಿ ಮತ್ತು ಭೋಕೆ ರೈಲು ನಿಲ್ದಾಣಗಳ ನಡುವಿನ ಪ್ರದೇಶದಲ್ಲಿ ಕಲ್ಲು ಬಂಡೆಯೊಂದು ಹಳಿಗಳ ಮೇಲೆ ಬಿದ್ದಿದ್ದರಿಂದ ರೈಲು ಹಳಿ ತಪ್ಪುವಂತಾಗಿದೆ. ರೈಲು ನಿರ್ವಹಣಾ ವಾಹನವೊಂದು ಸ್ಥಳಕ್ಕೆ ತೆರಳಿದೆ. ಪರಿಹಾರ ವೈದ್ಯಕೀಯ ವಾಹನ (ಎಆರ್‌ಎಂವಿ), ರೈಲನ್ನು ಮತ್ತೆ ಹಳಿ ಮೇಲೆ ತರುವ ಕಾರ್ಯಕ್ಕಾಗಿ ರತ್ನಾಗಿರಿಯಿಂದ ತೆರಳಿದೆ ಎಂದು ಅವರು ಹೇಳಿದ್ದಾರೆ.