ಬೆಂಗಳೂರು ಇಂಟರ್ನ್ಯಾಷನಲ್ ಓಪನ್ ಚೆಸ್ ಟೂರ್ನಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಬೆಂಗಳೂರು ಇಂಟರ್ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಮೆಂಟ್​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಶ್ವ ಚಾಂಪಿಯನ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಚಾಲನೆ ನೀಡಿದರು.  ಬೆಂಗಳೂರು: ಬೆಂಗಳೂರು ಇಂಟರ್ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಮೆಂಟ್​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಶ್ವ ಚಾಂಪಿಯನ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಚಾಲನೆ ನೀಡಿದರು.  ಈ ಚೆಸ್ ಟೂರ್ನಿಯನ್ನು ಜನವರಿ 18 ರಿಂದ 26 ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ  ಅಖಿಲ ಭಾರತ ಚೆಸ್ ಫೆಡರೇಶನ್ ಮತ್ತು ಇಂಟರ್ನ್ಯಾಷನಲ್ ಚೆಸ್ ಫೆಡರೇಶನ್ ಸಹಯೋಗದಲ್ಲಿ ಬೆಂಗಳೂರು ನಗರ ಜಿಲ್ಲಾ ಚೆಸ್ ಅಸೋಸಿಯೇಷನ್ ಆಯೋಜಿಸುತ್ತಿದೆ. ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಬಿ ನಾಗೇಂದ್ರ ಹಾಗೂ ಕರ್ನಾಟಕ ಚೆಸ್ ಅಸೋಷಿಯೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.   ಬೆಂಗಳೂರು ಇಂಟರ್ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ ಉದೇ ಮೊದಲ ಬಾರಿಗೆ ನಡೆಯುತ್ತಿದ್ದು, ಒಟ್ಟು 3 ವಿಭಾಗಗಳಲ್ಲಿ ಆಯೋಜಿಸಲಾಗುತ್ತಿದೆ. ಎ’ ವಿಭಾಗದಲ್ಲಿ  35 ಕ್ಕೂ ಹೆಚ್ಚು ಗ್ರ್ಯಾಂಡ್ ಮಾಸ್ಟರ್‌ಗಳು ಮತ್ತು ವಿಶ್ವದಾದ್ಯಂತದ ಅಂತಾರಾಷ್ಟ್ರೀಯ ಮಾಸ್ಟರ್‌ಗಳು ಸ್ಪರ್ಧಿಸಲಿದ್ದಾರೆ. ಇದನ್ನೂ ಓದಿ: ಕರ್ನಾಟಕ್ಕೆ ಕೂಚ್ ಬೆಹಾರ್ ಟ್ರೋಫಿ: ಪ್ರಖರ್ ಚತುರ್ವೇದಿ ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ ‘ಬಿ’ ವಿಭಾಗದಲ್ಲಿ 2000 ಕ್ಕಿಂತ ಕಡಿಮೆ ರೇಟಿಂಗ್ ಹೊಂದಿರುವ ಪ್ರಬಲ ಸ್ಪರ್ಧಿಗಳಿರಲಿದ್ದಾರೆ. ಇನ್ನು ‘ಸಿ’ ವಿಭಾಗದಲ್ಲಿ 1600 ಕ್ಕಿಂತ ಕಡಿಮೆ ರೇಟಿಂಗ್ ಹೊಂದಿರುವ ಸ್ಪರ್ಧಾಳುಗಳು ಸೆಣೆಸಲಿದ್ದಾರೆ. 9 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 2500 ಪಂದ್ಯಗಳು ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಬೆಂಗಳೂರು ಇಂಟರ್ನ್ಯಾಷನಲ್ ಓಪನ್ ಚೆಸ್ ಟೂರ್ನಿಗೆ ಸಿಎಂ ಸಿದ್ದರಾಮಯ್ಯ ಚಾಲನೆ
Linkup
ಬೆಂಗಳೂರು ಇಂಟರ್ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಮೆಂಟ್​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಶ್ವ ಚಾಂಪಿಯನ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಚಾಲನೆ ನೀಡಿದರು.  ಬೆಂಗಳೂರು: ಬೆಂಗಳೂರು ಇಂಟರ್ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಮೆಂಟ್​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಶ್ವ ಚಾಂಪಿಯನ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಚಾಲನೆ ನೀಡಿದರು.  ಈ ಚೆಸ್ ಟೂರ್ನಿಯನ್ನು ಜನವರಿ 18 ರಿಂದ 26 ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ  ಅಖಿಲ ಭಾರತ ಚೆಸ್ ಫೆಡರೇಶನ್ ಮತ್ತು ಇಂಟರ್ನ್ಯಾಷನಲ್ ಚೆಸ್ ಫೆಡರೇಶನ್ ಸಹಯೋಗದಲ್ಲಿ ಬೆಂಗಳೂರು ನಗರ ಜಿಲ್ಲಾ ಚೆಸ್ ಅಸೋಸಿಯೇಷನ್ ಆಯೋಜಿಸುತ್ತಿದೆ. ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಬಿ ನಾಗೇಂದ್ರ ಹಾಗೂ ಕರ್ನಾಟಕ ಚೆಸ್ ಅಸೋಷಿಯೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.   ಬೆಂಗಳೂರು ಇಂಟರ್ನ್ಯಾಷನಲ್ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ ಉದೇ ಮೊದಲ ಬಾರಿಗೆ ನಡೆಯುತ್ತಿದ್ದು, ಒಟ್ಟು 3 ವಿಭಾಗಗಳಲ್ಲಿ ಆಯೋಜಿಸಲಾಗುತ್ತಿದೆ. ಎ’ ವಿಭಾಗದಲ್ಲಿ  35 ಕ್ಕೂ ಹೆಚ್ಚು ಗ್ರ್ಯಾಂಡ್ ಮಾಸ್ಟರ್‌ಗಳು ಮತ್ತು ವಿಶ್ವದಾದ್ಯಂತದ ಅಂತಾರಾಷ್ಟ್ರೀಯ ಮಾಸ್ಟರ್‌ಗಳು ಸ್ಪರ್ಧಿಸಲಿದ್ದಾರೆ. ಇದನ್ನೂ ಓದಿ: ಕರ್ನಾಟಕ್ಕೆ ಕೂಚ್ ಬೆಹಾರ್ ಟ್ರೋಫಿ: ಪ್ರಖರ್ ಚತುರ್ವೇದಿ ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ ‘ಬಿ’ ವಿಭಾಗದಲ್ಲಿ 2000 ಕ್ಕಿಂತ ಕಡಿಮೆ ರೇಟಿಂಗ್ ಹೊಂದಿರುವ ಪ್ರಬಲ ಸ್ಪರ್ಧಿಗಳಿರಲಿದ್ದಾರೆ. ಇನ್ನು ‘ಸಿ’ ವಿಭಾಗದಲ್ಲಿ 1600 ಕ್ಕಿಂತ ಕಡಿಮೆ ರೇಟಿಂಗ್ ಹೊಂದಿರುವ ಸ್ಪರ್ಧಾಳುಗಳು ಸೆಣೆಸಲಿದ್ದಾರೆ. 9 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 2500 ಪಂದ್ಯಗಳು ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಬೆಂಗಳೂರು ಇಂಟರ್ನ್ಯಾಷನಲ್ ಓಪನ್ ಚೆಸ್ ಟೂರ್ನಿಗೆ ಸಿಎಂ ಸಿದ್ದರಾಮಯ್ಯ ಚಾಲನೆ