ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಿ; ಅಲಹಾಬಾದ್ ಕೋರ್ಟ್ ಸಲಹೆ

ದನದ ಮಾಂಸ ತಿನ್ನುವವರಿಗೆ ಮಾತ್ರವೇ ಮೂಲಭೂತ ಹಕ್ಕುಗಳು ಇರುವುದಿಲ್ಲ. ಗೋವನ್ನು ಪೂಜಿಸುವವರು, ಜೀವನ ನಿರ್ವಹಣೆಗೆ ಗೋವು ಸಾಕುತ್ತಿರುವವರಿಗೂ ಹಕ್ಕುಗಳು ಇವೆ. ಕೊಲ್ಲುವ ಹಕ್ಕಿಗಿಂತಲೂ, ಬದುಕುವ ಹಕ್ಕು ಬಹಳ ದೊಡ್ಡದು ಎಂದು ಅಲಹಾಬಾದ್‌ ಕೋರ್ಟ್‌ ಹೇಳಿದೆ.

ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಿ; ಅಲಹಾಬಾದ್ ಕೋರ್ಟ್ ಸಲಹೆ
Linkup
ಲಖನೌ: ನೆಲದ ಸಂಸ್ಕೃತಿ, ಪರಂಪರೆ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾದರೆ ದೇಶವು ದುರ್ಬಲಗೊಳ್ಳುತ್ತದೆ. ಹಾಗಾಗಿ ಗೋವನ್ನು ಆಗಿಸಿ, ಅದರ ರಕ್ಷಣೆಯ ಹೊಣೆಯನ್ನು ಹಿಂದೂಗಳ ಮೂಲಭೂತ ಕರ್ತವ್ಯವಾಗಿಸುವುದು ಸೂಕ್ತ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಕ್ರಮ ಸಾಗಣೆ, ಅವುಗಳ ಹತ್ಯೆಯಲ್ಲಿ ನಿರತನಾಗಿದ್ದ ಆರೋಪಿ ಜಾವೇದ್‌ ಎಂಬಾತನಿಗೆ ಜಾಮೀನು ತಿರಸ್ಕರಿಸುವ ವೇಳೆ ಹೈಕೋರ್ಟ್‌ ಈ ರೀತಿ ಹೇಳಿದೆ. ಆರೋಪಿಯು ಹಲವು ಬಾರಿ ಇಂಥ ಕೃತ್ಯಗಳನ್ನು ಎಸಗಿದ್ದಾನೆ. ಅದರಿಂದ ಸಮಾಜದ ಸ್ವಾಸ್ಥ್ಯ ಕೆಟ್ಟಿದೆ. ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುತ್ತಿದೆ. ಜಾಮೀನು ನೀಡಿದಲ್ಲಿ ಆತ ಪುನಃ ಗೋವಿನ ಹತ್ಯೆಗೈದು ಸಮಾಜದಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡುತ್ತಾನೆ. ಹಾಗಾಗಿ ಜಾಮೀನು ನೀಡಲ್ಲ ಎಂದು ನ್ಯಾ. ಶೇಖರ ಕುಮಾರ್‌ ಯಾದವ್‌ ಹೇಳಿದ್ದಾರೆ. ಅಲ್ಲದೇ ದನದ ಮಾಂಸ ತಿನ್ನುವವರಿಗೆ ಮಾತ್ರವೇ ಮೂಲಭೂತ ಹಕ್ಕುಗಳು ಇರುವುದಿಲ್ಲ. ಗೋವನ್ನು ಪೂಜಿಸುವವರು, ಜೀವನ ನಿರ್ವಹಣೆಗೆ ಗೋವು ಸಾಕುತ್ತಿರುವವರಿಗೂ ಹಕ್ಕುಗಳು ಇವೆ. ಕೊಲ್ಲುವ ಹಕ್ಕಿಗಿಂತಲೂ, ಬದುಕುವ ಹಕ್ಕು ಬಹಳ ದೊಡ್ಡದು ಎಂದು ಅಲಹಾಬಾದ್‌ ಕೋರ್ಟ್‌ ಹೇಳಿದೆ. ಜೀವಿಸುವ ಹಕ್ಕು ಕೊಲ್ಲುವ ಹಕ್ಕನ್ನು ಮೀರಿದ್ದು ಮತ್ತು ಗೋಮಾಂಸ ತಿನ್ನುವ ಹಕ್ಕನ್ನು ಎಂದಿಗೂ ಮೂಲಭೂತ ಹಕ್ಕಾಗಿ ಪರಿಗಣಿಸಲಾಗದು ಎಂದಿರುವ ಕೋರ್ಟ್‌, ಗೋವಿನ ಮಹತ್ವವನ್ನು ಹಿಂದೂಗಳಂತೆಯೇ ಮುಸ್ಲಿಂ ಆಡಳಿತಗಾರರು ಅರ್ಥ ಮಾಡಿಕೊಂಡಿದ್ದರು. ಗೋವನ್ನು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗ ಎಂದು ಅವರೂ ಪರಿಗಣಿಸಿದ್ದರು. ಉದಾಹರಣೆಗೆ ಬಾಬರ್, ಹುಮಾಯೂನ್ ಮತ್ತು ಅಕ್ಬರ್ ತಮ್ಮ ಧಾರ್ಮಿಕ ಹಬ್ಬಗಳಲ್ಲಿ ಗೋವುಗಳ ಬಲಿ ನಿಷೇಧಿಸಿದ್ದರು. ಮೈಸೂರಿನ ಆಡಳಿತಗಾರ ಹೈದರ್ ಅಲಿ ಆಡಳಿತಾವಧಿಯಲ್ಲಿ ಕೂಡ ಗೋಹತ್ಯೆ ಶಿಕ್ಷಾರ್ಹ ಅಪರಾಧವಾಗಿತ್ತು ಎಂದು ನ್ಯಾಯಾಲಯ ಉಲ್ಲೇಖಿಸಿದೆ.