BitCoin Scam : ಸರ್ಕಾರಿ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಶ್ರೀಕಿ 11 ಕೋಟಿ ರು. ದೋಚಿದ್ದು ಸಾಬೀತು

ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಸೇರಿ 18 ಆರೋಪಿಗಳ ವಿರುದ್ಧ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಇ-ಪ್ರಕ್ಯೂರ್‌ಮೆಂಟ್‌ ಸೆಲ್‌, ಸೆಂಟರ್‌ ಫಾರ್‌ ಇ-ಗರ್ವನೆನ್ಸ್‌ ಹ್ಯಾಕ್‌ ಮಾಡಿ ಠೇವಣಿ ಇಟ್ಟಿದ್ದ 11.55 ಕೋಟಿ ರೂ. ಹಣ ಎಗರಿಸಿದ್ದ ಪ್ರಕರಣದಲ್ಲಿ ಜಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

BitCoin Scam : ಸರ್ಕಾರಿ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಶ್ರೀಕಿ 11 ಕೋಟಿ ರು. ದೋಚಿದ್ದು ಸಾಬೀತು
Linkup
ಬೆಂಗಳೂರು: ಇ-ಪ್ರಕ್ಯೂರ್‌ಮೆಂಟ್‌ ಸೆಲ್‌, ಸೆಂಟರ್‌ ಫಾರ್‌ ಇ-ಗರ್ವನೆನ್ಸ್‌ ಹ್ಯಾಕ್‌ ಮಾಡಿ ಠೇವಣಿ ಇಟ್ಟಿದ್ದ 11.55 ಕೋಟಿ ರೂ. ಹಣ ಎಗರಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಸೇರಿ 18 ಆರೋಪಿಗಳ ವಿರುದ್ಧ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳು ಸರಕಾರಿ ಪೋರ್ಟಲ್‌ಗಳನ್ನು ಹ್ಯಾಕ್‌ ಮಾಡಿ ಠೇವಣಿ ಹಣ ಕಳವು ಮಾಡಿದ್ದರು. ಹೀಗಾಗಿ, ಆರೋಪಿಗಳ ವಿರುದ್ಧ ಹ್ಯಾಕಿಂಗ್‌ ಮತ್ತು ಡೇಟಾ ಕಳ್ಳತನ ಆರೋಪದ ಮೇಲೆ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕೆಲವು ಗುತ್ತಿಗೆದಾರರು ಹಾಗೂ ಸಹಚರ ನೀಡಿದ ನಿರ್ದೇಶನದ ಮೇರೆಗೆ ಶ್ರೀಕೃಷ್ಣ, ಸರಕಾರಿ ಪೋರ್ಟಲ್‌ ಹ್ಯಾಕ್‌ ಮಾಡಿ 11.55 ಕೋಟಿ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ಈ ಬಗ್ಗೆ ತನಿಖೆ ನಡಿಸಿದ ಸಿಐಡಿ ಕೆಲವು ದಾಖಲೆಗಳನ್ನು ಸಂಗ್ರಹಿಸಿ ತನಿಖೆ ಪೂರ್ಣಗೊಳಿಸಿತ್ತು. ಹಾಗಾಗಿ, ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಇವೆಲ್ಲದರ ನಡುವೆ ರಾಜ್ಯ ರಾಜಕಾರಣ ಹಾಗೂ ದೇಶದೆಲ್ಲೆಡೆ ಸದ್ದು ಮಾಡಿದ್ದ ಬಿಟ್‌ಕಾಯಿನ್‌ ಪ್ರಕರಣದ ತನಿಖೆ ನಡೆಸಿರುವ ಮಾಹಿತಿಯನ್ನೂ ಹಂಚಿಕೊಳ್ಳುವಂತೆ ಜಾರಿನಿರ್ದೇಶನಾಲಯ ಸಿಐಡಿ ಹಾಗೂ ಕೇಂದ್ರ ಅಪರಾಧ ವಿಭಾಗಕ್ಕೆ ಪತ್ರ ಬರೆದಿದೆ ಎನ್ನಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಜಾರಿ ನಿರ್ದೇಶನಾಲಯ ಆರೋಪಿ ಶ್ರೀಕೃಷ್ಣನಿಂದ ಕಳೆದ ಆಗಸ್ಟ್‌ನಲ್ಲಿ 1.44 ಕೋಟಿ ರೂ.ಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು. ಆಸ್ತಿ ಜಪ್ತಿ ಮಾಡಿಸಿದ್ದ ಸಿಐಡಿ! ರಾಜ್ಯ ಸರ್ಕಾರದ ಇ ಪ್ರಕ್ಯೂರ್‌ಮೆಂಟ್‌ ವೆಬ್‌ಸೈಟ್‌ ಹ್ಯಾಕ್‌ ಮಾಡಿದ್ದ ದೋಚಿದ್ದ ಹಣವನ್ನು ಶ್ರೀಕಿ, ಮಹಾರಾಷ್ಟ್ರದ ನಾಗ್ಪುರ ಮೂಲದ ಸ್ವಯಂ ಸೇವಾ ಸಂಸ್ಥೆಗಳಾದ ಉದಯ್‌ ಗ್ರಾಮ ವಿಕಾಶ್‌ಸಂಸ್ಥೆ ಹಾಗೂ ಉತ್ತರ ಪ್ರದೇಶದ ನಿಮ್ಮಿ ಎಂಟರ್‌ಪ್ರೆಸಸ್‌ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿದ್ದ. ಆನಂತರ ಆ ಎರಡು ಸಂಸ್ಥೆಗಳಿಂದ ತನ್ನ ಪರಿಚಿತರ ಬ್ಯಾಂಕ್‌ ಖಾತೆಗಳಿಗೆ ಶ್ರೀಕಿ ಹಣ ವರ್ಗಾಯಿಸಿಕೊಂಡು ಮೋಜು ಮಸ್ತಿ ಮಾಡಿದ್ದ. ತರುವಾಯ ಸಿಐಡಿ ವರದಿ ಆಧರಿಸಿ ಶ್ರೀಕಿಗೆ ನೆರವು ನೀಡಿದ್ದ ಆ ಎರಡು ಎನ್‌ಜಿಓಗಳಿಗೆ ಸೇರಿದ 1.44 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಜಪ್ತಿ ಮಾಡಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.