2013ರಲ್ಲಿದ್ದ ಮಾತಿನ ದರ್ಪ, ದಕ್ಷತೆ ಸಿದ್ದರಾಮಯ್ಯಗೆ ಈಗಿಲ್ಲ: ನನ್ನ ಬಂಡಾಯಕ್ಕೆ ಸತೀಶ್‌ ಮೂಲಕ ಉತ್ತರ ಸಿಕ್ಕಿದೆ; ರಮೇಶ್‌ ಜಾರಕಿಹೊಳಿ

ಸಿದ್ದರಾಮಯ್ಯ ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಕೆಲವರು ಅವರನ್ನು ಕಟ್ಟಿ ಹಾಕಿದ್ದಾರೆ. 2013ರಲ್ಲಿ ಸಿಎಂ ಆಗಿದ್ದಾಗ ಕಾಣಿಸುತ್ತಿದ್ದ ಸಿದ್ದರಾಮಯ್ಯನವರ ಮಾತಿನ ದರ್ಪ, ದಕ್ಷತೆ ಈಗ ಕಾಣುತ್ತಿಲ್ಲ. ಅವರು ಯಾಕೆ ಸೈಲೆಂಟ್‌ ಆಗಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಹಿಂಸೆಯಾಗುತ್ತಿದೆ. ಸಿದ್ದರಾಮಯ್ಯ ಸಿಎಂ ಇದ್ದಾಗಲೇ ಸತೀಶ್‌ಗೆ ಇಂಥ ಪರಿಸ್ಥಿತಿ ಬಂದಿದೆ. ಬೇರೆ ಯಾರಾದರೂ ಸಿಎಂ ಆದರೆ ಸತೀಶ್‌ ಪರಿಸ್ಥಿತಿ ಏನು? ಎಂದು ಶಾಸಕ ರಮೇಶ್‌ ಜಾರಕಿಹೊಳಿ ಕಳವಳ ವ್ಯಕ್ತಪಡಿಸಿದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಳಗಾವಿಗೆ ಆಗಮಿಸಿ  ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್‌ನಲ್ಲಿ ಬಂಡಾಯವಿದೆ ಎಂದಾಗ ಕೆಲವರು ನನ್ನನ್ನು ಟೀಕಿಸಿದರು. ಅವರಿಗೆ ಈಗ ವಾಸ್ತವ ಗೊತ್ತಾಗಿದೆ. ಸತೀಶ್‌ ನಡೆಯಿಂದ ಇಂದು ಉತ್ತರ ಸಿಕ್ಕಿದೆ ಎಂದಿದ್ದಾರೆ. ಇದನ್ನೂ ಓದಿ: ವೆಸ್ಟೆಂಡ್‌ನಲ್ಲಿ ಕೂತು ಆಡಳಿತ ನಡೆಸಿಲ್ಲ ಎನ್ನುವ ಗಿಲೀಟು ಗಿರಾಕಿ, ಆವತ್ತು ಮುಖ್ಯಮಂತ್ರಿ ನಿವಾಸವನ್ನೇಕೆ ತೆರವು ಮಾಡಲಿಲ್ಲ? ಸಿದ್ದರಾಮಯ್ಯ ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಕೆಲವರು ಅವರನ್ನು ಕಟ್ಟಿ ಹಾಕಿದ್ದಾರೆ. 2013ರಲ್ಲಿ ಸಿಎಂ ಆಗಿದ್ದಾಗ ಕಾಣಿಸುತ್ತಿದ್ದ ಸಿದ್ದರಾಮಯ್ಯನವರ ಮಾತಿನ ದರ್ಪ, ದಕ್ಷತೆ ಈಗ ಕಾಣುತ್ತಿಲ್ಲ. ಅವರು ಯಾಕೆ ಸೈಲೆಂಟ್‌ ಆಗಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಅವರು ಹೇಳಿದರು. ಜಗದೀಶ ಶೆಟ್ಟರ್‌ ಅವರು ಎಲ್ಲಿದ್ದರೂ ನಮ್ಮ ಹಿರಿಯರು. ಅವರನ್ನು ನಾನು ಹಲವಾರು ಸಲ ಭೇಟಿಯಾಗಿದ್ದೇನೆ. ಈ ಸಲ ಅವರ ಭೇಟಿಯ ವಿಚಾರ ಲೀಕ್‌ ಆಗಿದೆ. ಅವರು ಬಿಜೆಪಿ ಬಿಡಬಾರದಿತ್ತು. ಅವರೊಂದಿಗೆ ರಾಜಕೀಯ ಚರ್ಚೆ ನಡೆಸಿಲ್ಲ. ವೈಯಕ್ತಿಕ ವಿಚಾರಕ್ಕೆ ಭೇಟಿಯಾಗಿದ್ದೇನೆ  ಎಂದು ರಮೇಶ್‌ ತಿಳಿಸಿದರು.

2013ರಲ್ಲಿದ್ದ ಮಾತಿನ ದರ್ಪ, ದಕ್ಷತೆ ಸಿದ್ದರಾಮಯ್ಯಗೆ ಈಗಿಲ್ಲ: ನನ್ನ ಬಂಡಾಯಕ್ಕೆ ಸತೀಶ್‌ ಮೂಲಕ ಉತ್ತರ ಸಿಕ್ಕಿದೆ; ರಮೇಶ್‌ ಜಾರಕಿಹೊಳಿ
Linkup
ಸಿದ್ದರಾಮಯ್ಯ ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಕೆಲವರು ಅವರನ್ನು ಕಟ್ಟಿ ಹಾಕಿದ್ದಾರೆ. 2013ರಲ್ಲಿ ಸಿಎಂ ಆಗಿದ್ದಾಗ ಕಾಣಿಸುತ್ತಿದ್ದ ಸಿದ್ದರಾಮಯ್ಯನವರ ಮಾತಿನ ದರ್ಪ, ದಕ್ಷತೆ ಈಗ ಕಾಣುತ್ತಿಲ್ಲ. ಅವರು ಯಾಕೆ ಸೈಲೆಂಟ್‌ ಆಗಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಹಿಂಸೆಯಾಗುತ್ತಿದೆ. ಸಿದ್ದರಾಮಯ್ಯ ಸಿಎಂ ಇದ್ದಾಗಲೇ ಸತೀಶ್‌ಗೆ ಇಂಥ ಪರಿಸ್ಥಿತಿ ಬಂದಿದೆ. ಬೇರೆ ಯಾರಾದರೂ ಸಿಎಂ ಆದರೆ ಸತೀಶ್‌ ಪರಿಸ್ಥಿತಿ ಏನು? ಎಂದು ಶಾಸಕ ರಮೇಶ್‌ ಜಾರಕಿಹೊಳಿ ಕಳವಳ ವ್ಯಕ್ತಪಡಿಸಿದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಳಗಾವಿಗೆ ಆಗಮಿಸಿ  ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್‌ನಲ್ಲಿ ಬಂಡಾಯವಿದೆ ಎಂದಾಗ ಕೆಲವರು ನನ್ನನ್ನು ಟೀಕಿಸಿದರು. ಅವರಿಗೆ ಈಗ ವಾಸ್ತವ ಗೊತ್ತಾಗಿದೆ. ಸತೀಶ್‌ ನಡೆಯಿಂದ ಇಂದು ಉತ್ತರ ಸಿಕ್ಕಿದೆ ಎಂದಿದ್ದಾರೆ. ಇದನ್ನೂ ಓದಿ: ವೆಸ್ಟೆಂಡ್‌ನಲ್ಲಿ ಕೂತು ಆಡಳಿತ ನಡೆಸಿಲ್ಲ ಎನ್ನುವ ಗಿಲೀಟು ಗಿರಾಕಿ, ಆವತ್ತು ಮುಖ್ಯಮಂತ್ರಿ ನಿವಾಸವನ್ನೇಕೆ ತೆರವು ಮಾಡಲಿಲ್ಲ? ಸಿದ್ದರಾಮಯ್ಯ ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಕೆಲವರು ಅವರನ್ನು ಕಟ್ಟಿ ಹಾಕಿದ್ದಾರೆ. 2013ರಲ್ಲಿ ಸಿಎಂ ಆಗಿದ್ದಾಗ ಕಾಣಿಸುತ್ತಿದ್ದ ಸಿದ್ದರಾಮಯ್ಯನವರ ಮಾತಿನ ದರ್ಪ, ದಕ್ಷತೆ ಈಗ ಕಾಣುತ್ತಿಲ್ಲ. ಅವರು ಯಾಕೆ ಸೈಲೆಂಟ್‌ ಆಗಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಅವರು ಹೇಳಿದರು. ಜಗದೀಶ ಶೆಟ್ಟರ್‌ ಅವರು ಎಲ್ಲಿದ್ದರೂ ನಮ್ಮ ಹಿರಿಯರು. ಅವರನ್ನು ನಾನು ಹಲವಾರು ಸಲ ಭೇಟಿಯಾಗಿದ್ದೇನೆ. ಈ ಸಲ ಅವರ ಭೇಟಿಯ ವಿಚಾರ ಲೀಕ್‌ ಆಗಿದೆ. ಅವರು ಬಿಜೆಪಿ ಬಿಡಬಾರದಿತ್ತು. ಅವರೊಂದಿಗೆ ರಾಜಕೀಯ ಚರ್ಚೆ ನಡೆಸಿಲ್ಲ. ವೈಯಕ್ತಿಕ ವಿಚಾರಕ್ಕೆ ಭೇಟಿಯಾಗಿದ್ದೇನೆ  ಎಂದು ರಮೇಶ್‌ ತಿಳಿಸಿದರು. 2013ರಲ್ಲಿದ್ದ ಮಾತಿನ ದರ್ಪ, ದಕ್ಷತೆ ಸಿದ್ದರಾಮಯ್ಯಗೆ ಈಗಿಲ್ಲ: ನನ್ನ ಬಂಡಾಯಕ್ಕೆ ಸತೀಶ್‌ ಮೂಲಕ ಉತ್ತರ ಸಿಕ್ಕಿದೆ; ರಮೇಶ್‌ ಜಾರಕಿಹೊಳಿ