'ಮೆಸ್ಸಿ ವಿಶ್ವಕಪ್ ಗೆಲ್ಲಲು ಜೀವವನ್ನೇ ನೀಡುತ್ತೇನೆ' ಎಂದಿದ್ದ ಫಿಫಾ ವಿಶ್ವಕಪ್ ಫೈನಲ್ ಹೀರೋ 'ಗೋಲ್ ಕೀಪರ್ ಎಮಿಲಿಯಾನೋ ಮಾರ್ಟಿನೆಜ್'

ಮೆಸ್ಸಿ ವಿಶ್ವಕಪ್ ಗೆಲ್ಲಲು ಜೀವವನ್ನೇ ನೀಡುತ್ತೇನೆ ಎಂದು ಪಣ ತೊಟ್ಟಿದ್ದ ಅರ್ಜೆಂಟಿನಾ ತಂಡದ ಗೋಲ್ ಕೀಪರ್ ಎಮಿಲಿಯಾನೋ ಮಾರ್ಟಿನೆಜ್ ಕೊನೆಗೂ ತಮ್ಮ ತಂಡದ ಐತಿಹಾಸಿಕ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿ ತಾವು ನೀಡಿದ್ದ ಮಾತು ಉಳಿಸಿಕೊಂಡಿದ್ದಾರೆ. ದೋಹಾ: ಮೆಸ್ಸಿ ವಿಶ್ವಕಪ್ ಗೆಲ್ಲಲು ಜೀವವನ್ನೇ ನೀಡುತ್ತೇನೆ ಎಂದು ಪಣ ತೊಟ್ಟಿದ್ದ ಅರ್ಜೆಂಟಿನಾ ತಂಡದ ಗೋಲ್ ಕೀಪರ್ ಎಮಿಲಿಯಾನೋ ಮಾರ್ಟಿನೆಜ್ ಕೊನೆಗೂ ತಮ್ಮ ತಂಡದ ಐತಿಹಾಸಿಕ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿ ತಾವು ನೀಡಿದ್ದ ಮಾತು ಉಳಿಸಿಕೊಂಡಿದ್ದಾರೆ.
ಹೌದು.. ಲುಸೈಲ್ ಕ್ರೀಡಾಂಗಣದಲ್ಲಿ ಭಾನುವಾರ ತಡರಾತ್ರಿ ದಿಗ್ಗಜ ಆಟಗಾರ ಲಯೊನೆಲ್ ಮೆಸ್ಸಿ ಅವರಿಗೆ ಬಹುದಿನಗಳ ಕನಸು ನನಸಾದ ಸಂಭ್ರಮ. ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಬೇಕೆಂಬ ಅವರ ಆಸೆ ಈಡೇರಿದ ಸಂತಸ. ಫೈನಲ್ ಹಣಾಹಣಿಯಲ್ಲಿ ಪೆನಾಲ್ಟಿ ಶೂಟೌಟ್ನಲ್ಲಿ 4–2ರಿಂದ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಪರಾಭವಗೊಳಿಸಿದ ಅರ್ಜೆಂಟೀನಾ ಬರೊಬ್ಬರಿ 36 ವರ್ಷಗಳ ಬಳಿಕ ಮೂರನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿತು.
ಇದನ್ನೂ ಓದಿ: 7 ವರ್ಷಗಳ ಹಿಂದೆಯೇ ಮೆಸ್ಸಿ ವಿಶ್ವಕಪ್ ಗೆಲುವು ಭವಿಷ್ಯ ನುಡಿದಿದ್ದ ಟ್ವಿಟರ್ ಖಾತೆದಾರ, ಹಳೆಯ ಟ್ವೀಟ್ ವೈರಲ್
ಈ ಟೂರ್ನಿ ಆರಂಭಕ್ಕೂ ಮುನ್ನ ಎಲ್ಲರಿಗೂ ಲಿಯೋನಲ್ ಮೆಸ್ಸಿಗೆ ಇದು ಕೊನೆಯ ವಿಶ್ವಕಪ್ ಎಂದು ಹೇಳಲಾಗಿತ್ತು. ಹೀಗಾಗಿಯೇ ತಂಡದ ಹಿರಿಯ ಲೆಜೆಂಡ್ ಆಟಗಾರನಿಗೆ ಟ್ರೋಫಿಯ ಮೂಲಕ ವಿದಾಯ ಹೇಳಬೇಕು ಎನ್ನುವ ಕಾರಣಕ್ಕೇ ಇಡೀ ತಂಡ ಟ್ರೋಫಿಗಾಗಿ ಜಗತ್ತಿನ ಬಲಾಢ್ಯ ತಂಡಗಳ ವಿರುದ್ಧ ಜಿದ್ದಾಜಿದ್ದಿನ ಪೈಪೋಟಿ ನಡೆಸಿ ಕೊನೆಗೂ ಫೈನಲ್ ನಲ್ಲಿ ಗೆಲುವು ಸಾಧಿಸಿತು.
There when it matters most Argentina
Emi Martinez takes the @adidas Golden Glove Award! #FIFAWorldCup | #Qatar2022
— FIFA World Cup (@FIFAWorldCup) December 18, 2022
ಭಾನುವಾರ ನಡೆದ ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2–2ರಿಂದ ಸಮಬಲ ಸಾಧಿಸಿದ್ದವು. ಮೆಸ್ಸಿ 23ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದರು. 36ನೇ ನಿಮಿಷದಲ್ಲಿ ಎಂಜೆಲ್ ಡಿ ಮರಿಯಾ ತೋರಿದ ಕಾಲ್ಚಳಕ ಅರ್ಜೆಂಟೀನಾ ಅಭಿಮಾನಿಗಳು ಹುಚ್ಚೆಂದು ಕುಣಿಯುವಂತೆ ಮಾಡಿತು. ಅದಾದ ಬಳಿಕ ಹೆಚ್ಚು ಹೊತ್ತು ಗೋಲು ದಾಖಲಾಗದಿದ್ದಾಗ ಅರ್ಜೆಂಟೀನಾ ಗೆದ್ದಿತೆಂದೇ ಬಹುತೇಕರು ಭಾವಿಸಿದ್ದರು.
ಇದನ್ನೂ ಓದಿ: FIFA World Cup 2022: ಭಾರತದಲ್ಲಿ ಇತಿಹಾಸ ನಿರ್ಮಿಸಿದ ಫಿಫಾ ವಿಶ್ವಕಪ್, ಟಿವಿ ಪ್ರೇಕ್ಷಕರ ಹಿಂದಿಕ್ಕಿ ಡಿಜಿಟಲ್ ದಾಖಲೆ
ಆದರೆ ಯುವ ಪ್ರತಿಭೆ ಎಂಬಾಪೆ 80ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಿ ಫ್ರಾನ್ಸ್ ತಂಡದ ನಿರೀಕ್ಷೆಗೆ ಕಾರಣರಾದರು. ಮರು ನಿಮಿಷದಲ್ಲೇ ಮತ್ತೊಮ್ಮೆ ಮೋಡಿ ಮಾಡಿದ 23 ವರ್ಷದ ಆಟಗಾರ ಅರ್ಜೆಂಟೀನಾ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರೆರೆಚಿದರು. ಹೆಚ್ಚುವರಿ ಅವಧಿಯಲ್ಲಿ ಇನ್ನಷ್ಟು ಜಿದ್ದಾಜಿದ್ದಿ ಕಂಡುಬಂತು. 108ನೇ ನಿಮಿಷದಲ್ಲಿ ಮತ್ತೊಮ್ಮೆ ಮೋಡಿ ಮಾಡಿದ ಮೆಸ್ಸಿ ತಮ್ಮ ಎರಡನೇ ಗೋಲು ಗಳಿಸಿದರು. ಈ ವೇಳೆ ಅರ್ಜೆಂಟೀನಾ 3–2ರಿಂದ ಮುನ್ನಡೆ ಸಾಧಿಸಿತು. ಆದರೆ ಹೆಚ್ಚುವರಿ ಅವಧಿ ಕೊನೆಗೊಳ್ಳಲು ಎರಡು ನಿಮಿಷಗಳಿರುವಾಗ ಪೆನಾಲ್ಟಿ ಅವಕಾಶವನ್ನು ಗೋಲಾಗಿಸಿದ ಎಂಬಾಪೆ ಹ್ಯಾಟ್ರಿಕ್ ಸಾಧಿಸಿದರು. ಈ ವೇಳೆಗೆ ಪೆನಾಲ್ಟಿ ಶೂಟೌಟ್ ಮೊರೆಹೋಗಲಾಯಿತು.
ಇದನ್ನೂ ಓದಿ: ವಿಶ್ವಕಪ್ ಚಾಂಪಿಯನ್ ತಂಡದ ಪರವಾಗಿ, ದೇಶಕ್ಕಾಗಿ ಇನ್ನೂ ಒಂದಷ್ಟು ಕಾಲ ಆಡಲು ಬಯಸುತ್ತೇನೆ: ಲಯೊನಲ್ ಮೆಸ್ಸಿ
ಪೆನಾಲ್ಟಿ ಶೂಟೌಟ್ನಲ್ಲಿ ಅರ್ಜೆಂಟೀನಾ ಪರ ಮೆಸ್ಸಿ, ಪೌಲೊ ಡಿಬಾಲಾ, ಲಿಯಾಂಡ್ರೊ ಪೆರೆಡೆಸ್, ಗೊಂಜಾಲೊ ಮೊಂಟಿಯಲ್ ಚೆಂಡನ್ನು ಗುರಿ ಸೇರಿಸಿದರು. ಆದರೆ ಫ್ರಾನ್ಸ್ ಪರ ಎಂಬಾಪೆ ಮತ್ತು ರಂಡಲ್ ಕೊಲೊ ಮುವಾನಿ ಮಾತ್ರ ಯಶಸ್ಸುಸಾಧಿಸಿದರು. ಈ ಹಂತದಲ್ಲಿ ಫ್ರಾನ್ಸ್ ನ 2 ಗೋಲುಗಳನ್ನು ತಡೆದ ಅರ್ಜೆಂಟಿನಾ ಗೋಲ್ ಕೀಪರ್ ಎಮಿಲಿಯಾನೋ ಮಾರ್ಟಿನೆಜ್ ಫೈನಲ್ ಪಂದ್ಯದ ಹೀರೋ ಆಗಿ ಮಿಂಚಿದರು. ಅಷ್ಟು ಮಾತ್ರವಲ್ಲದೇ ಟೂರ್ನಿಯಲ್ಲಿ ಅತೀ ಹೆತ್ತು ಗೋಲುಗಳನ್ನು ರಕ್ಷಿಸಿದ ಕಾರಣಕ್ಕೆ ಗೋಲ್ಡನ್ ಗ್ಲೌವ್ಸ್ ಪ್ರಶಸ್ತಿಗೂ ಗೋಲ್ ಕೀಪರ್ ಎಮಿಲಿಯಾನೋ ಮಾರ್ಟಿನೆಜ್ ಪಾತ್ರರಾಗಿದ್ದಾರೆ.