'ಮೃತ ವಿವೇಕ್‌ಗೆ ನ್ಯಾಯ ಸಿಗುವ ತನಕ ನಾನು ಶೂಟಿಂಗ್‌ಗೆ ಹೋಗಲ್ಲ'- ನಟ ಅಜಯ್ ರಾವ್

'ಕೃಷ್ಣ' ಅಜಯ್ ರಾವ್ & ರಚಿತಾ ರಾಮ್ ನಟನೆಯ 'ಲವ್ ಯೂ ರಚ್ಚು' ಸಿನಿಮಾದ ಶೂಟಿಂಗ್‌ನಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ವಿವೇಕ್ ಎಂಬ ಫೈಟರ್ ನಿಧನರಾಗಿದ್ದಾರೆ. ಆ ಕುರಿತು ಅಜಯ್ ರಾವ್ ಪ್ರತಿಕ್ರಿಯಿಸಿದ್ದಾರೆ.

'ಮೃತ ವಿವೇಕ್‌ಗೆ ನ್ಯಾಯ ಸಿಗುವ ತನಕ ನಾನು ಶೂಟಿಂಗ್‌ಗೆ ಹೋಗಲ್ಲ'- ನಟ ಅಜಯ್ ರಾವ್
Linkup
ಮತ್ತು ಅಭಿನಯದ '' ಸಿನಿಮಾದ ಶೂಟಿಂಗ್‌ನಲ್ಲಿ ವಿದ್ಯುತ್ ಅವಘಡ ಸಂಭವಿಸಿ, ವಿವೇಕ್ ಎಂಬ ಫೈಟರ್ ನಿಧನರಾಗಿದ್ದಾರೆ. ಇದೀಗ ಚಿತ್ರದ ಹೀರೋ ಅಜಯ್ ರಾವ್ ಈ ದುರ್ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, 'ವಿವೇಕ್‌ ಸಾವಿಗೆ ನ್ಯಾಯ ಸಿಗುವವರೆಗೂ ನಾನು ಶೂಟಿಂಗ್‌ ಸೆಟ್‌ಗೆ ಹೋಗುವುದಿಲ್ಲ' ಎಂದಿದ್ದಾರೆ. ಶೂಟಿಂಗ್ ವೇಳೆ ಅಜಯ್ ಅಲ್ಲಿರಲಿಲ್ಲ! ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅಜಯ್ ರಾವ್, ಮೆಟಲ್ ರೋಪ್ ಬಳಸಿದ್ದರಿಂದ ದುರಂತ ಸಂಭವಿಸಿದೆ. ಈ ದೃಶ್ಯದ ಚಿತ್ರೀಕರಣದ ವೇಳೆ ನಾನು ಅಲ್ಲಿ ಇರಲಿಲ್ಲ. ನಾನು ಅಲ್ಲಿ ಇದ್ದಿದ್ದರೆ, ಮುಂಜಾಗ್ರತೆ ಬಗ್ಗೆ ಮೊದಲೇ ಹೇಳುತ್ತಿದ್ದೆ. ಫೈಟರ್ ವಿವೇಕ್ ರೋಪ್ ಎಳೆಯುವಾಗ ಈ ದುರಂತ ಸಂಭವಿಸಿದೆ. ರೋಪ್ ಜಾಕೇಟ್ ಹಾಕಿದ್ದವನಿಗೂ ಶಾಕ್ ಹೊಡೆದಿದೆ. ಆ ಸೀನ್‌ನಲ್ಲಿ ನಾನು ಇರಲಿಲ್ಲ. ಹಾಗಾಗಿ, 200 ಮೀಟರ್‌ ದೂರದಲ್ಲಿ ನಾನು ಕುಳಿತಿದ್ದೆ. ಜೋರಾಗಿ ಸದ್ದು ಬಂದ ಮೇಲಷ್ಟೇ ನಮಗೆ ಅಲ್ಲೇನೋ ಆಗಿದೆ ಎಂಬುದು ತಿಳಿಯಿತು' ಎಂದಿದ್ದಾರೆ ಅಜಯ್ ರಾವ್. 'ನನಗೆ ಇನ್ನು ಸಾಹಸ ನಿರ್ದೇಶಕ ವಿನೋದ್ ಜೊತೆ ಮಾತನಾಡಲು ಆಗಿಲ್ಲ. ನಾನು ಯಾವಾಗಲೂ ಮುಂಜಾಗ್ರತೆಗೆ ಜಾಸ್ತಿ ಮಹತ್ವ ನೀಡುತ್ತೇನೆ. ನಾವು ಏನಾದರೂ ಹೇಳಲು ಹೋದರೆ, ಮೂಗು ತೂರಿಸುತ್ತಾರೆ ಅಂತ ಹೇಳುತ್ತಾರೆ. ಈಚೆಗಷ್ಟೇ ಮೆಟಲ್ ರೋಪ್ ಬಳಸುವ ಬಗ್ಗೆ ಪ್ರಶ್ನಿಸಿ ಕೆಟ್ಟವನಾಗಿದ್ದೇನೆ. ಚಿತ್ರದ ಬಗ್ಗೆ ಜಾಸ್ತಿ ಕೇಳಿದರೆ ನಾವು ಕೆಟ್ಟವರಾಗಿಬಿಡುತ್ತೇವೆ. ಇದು ತುಂಬಾ ಬೇಸರವಾದ ವಿಷಯ. ಮೃತ ವಿವೇಕ್ಗೆ ನ್ಯಾಯ ಸಿಗುವವರೆಗೂ ನಾನು ಶೂಟಿಂಗ್ಗೆ ಹೋಗಲ್ಲ' ಎಂದಿದ್ದಾರೆ ಅವರು. ಘಟನೆ ಹೇಗಾಯ್ತು? ಈ ಸಾಹಸ ದೃಶ್ಯಗಳ ಚಿತ್ರೀಕರಣ ಐದು ದಿನಗಳಿಂದ‌ ನಡೆಯುತ್ತಿತ್ತು. ಇಂದು ಕೊನೆ‌ಯ ದಿನದ ಚಿತ್ರೀಕರಣ ನಡೆಯುತ್ತಿತ್ತು. ಆದರೆ, ಸುಮಾರು 12 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ತಂತಿ ಹಾದು ಹೋಗಿರುವುದನ್ನು ಗಮನಿಸದೆಯೇ ಫೈಟರ್‌ಗೆ ರೋಪ್‌ ಕಟ್ಟಿ, ಅದನ್ನು ಕ್ರೇನ್‌ ಮೂಲಕ ಮೆಲಕ್ಕೆತ್ತಲಾಗಿದೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿ ವಿವೇಕ್ ಸಾವನ್ನಪ್ಪಿದ್ದಾರೆ. ಈ ಚಿತ್ರೀಕರಣಕ್ಕೆ ಪೊಲೀಸರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂಬ ಮಾಹಿತಿ ಸಿಕ್ಕಿದ್ದು, ಬಿಡದಿ ಪೊಲೀಸರು ಸದ್ಯ ಕ್ರೇನ್ ಚಾಲಕ ಹಾಗೂ ಫೈಟ್ ಮಾಸ್ಟರ್‌ರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ತೆಂಗಿನ ತೋಟದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಇಲ್ಲದೇ ಚಿತ್ರೀಕರಣ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಸದ್ಯ ತೆಂಗಿನ ತೋಟದ ಮಾಲೀಕ ಪುಟ್ಟರಾಜು ಎಂಬುವವರು ನಾಪತ್ತೆ ಆಗಿದ್ದಾರೆ.