ಸಂಕ್ರಾಂತಿ ವಿಶೇಷ: ಪುನೀತ್ ರಾಜ್‌ಕುಮಾರ್ ನಟನೆಯ ‘ಜೇಮ್ಸ್’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

ಸಂಕ್ರಾಂತಿ ಹಬ್ಬದ ಪ್ರಯುಕ್ತ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್’ ಹೊಸ ಪೋಸ್ಟರ್ ಬಿಡುಗಡೆ ಆಗಿದೆ.

ಸಂಕ್ರಾಂತಿ ವಿಶೇಷ: ಪುನೀತ್ ರಾಜ್‌ಕುಮಾರ್ ನಟನೆಯ ‘ಜೇಮ್ಸ್’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ
Linkup
ಇಂದು ಸಂಕ್ರಾಂತಿ ಹಬ್ಬ. ವೀಕೆಂಡ್ ಕರ್ಫ್ಯೂ ಇರುವ ಕಾರಣ ಸಂಕ್ರಾಂತಿ ಕಳೆ ಕೊಂಚ ಕಡಿಮೆ ಆಗಿರಬಹುದು. ಆದರೆ, ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬವನ್ನು ಮನೆಗಳಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ಹಬ್ಬದ ಪ್ರಯುಕ್ತ ಇಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅಭಿಮಾನಿಗಳಿಗೆ ಸರ್‌ಪ್ರೈಸ್ ಸಿಕ್ಕಿದೆ. ಆ ಸರ್‌ಪ್ರೈಸ್ ಏನಪ್ಪಾ ಅಂದ್ರೆ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಭಿನಯದ ಕೊನೆಯ ಚಿತ್ರ ‘’ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ‘ಜೇಮ್ಸ್’ ಹೊಸ ಪೋಸ್ಟರ್ ಔಟ್ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರುವ ಪುನೀತ್ ರಾಜ್‌ಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರದ ಪೋಸ್ಟರ್‌ನಲ್ಲಿ ರಿಲೀಸ್ ಮಾಡಲಾಗಿದೆ. ಎಲ್ಲರ ಪ್ರೀತಿಯ ಅಪ್ಪು ಬೈಕ್ ಮೇಲೆ ಆಸೀನರಾಗಿ ಮಸ್ತ್ ಲುಕ್ ನೀಡಿರುವುದು ಹೊಸ ಪೋಸ್ಟರ್‌ನಲ್ಲಿದೆ. ಟಾಪ್ ಟು ಬಾಟಂ ಬ್ಲಾಕ್ ಔಟ್‌ಫಿಟ್‌ನಲ್ಲಿ ಪುನೀತ್ ರಾಜ್‌ಕುಮಾರ್ ನೀಡಿರುವ ಖಡಕ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್‌ ಮತ್ತು ಟ್ರೈಲರ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ ‘ಜೇಮ್ಸ್’ ಸಿನಿಮಾದ ಹೊಸ ಪೋಸ್ಟರ್‌ ನೋಡಿ ಖುಷಿಯಾಗಿರುವ ಅಭಿಮಾನಿಗಳು ಟೀಸರ್ ಹಾಗೂ ಟ್ರೈಲರ್‌ಅನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಅಂದ್ಹಾಗೆ, ‘ಜೇಮ್ಸ್’ ಚಿತ್ರವನ್ನು ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಬೇಕು ಎಂದುಕೊಂಡಿರುವ ಚಿತ್ರತಂಡ ಟೀಸರ್ ಮತ್ತು ಟ್ರೈಲರ್ ರಿಲೀಸ್‌ ಡೇಟ್‌ಅನ್ನು ಬಹಿರಂಗಗೊಳಿಸಿಲ್ಲ. ಸದ್ಯಕ್ಕೆ ‘ಜೇಮ್ಸ್’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ನಿರ್ದೇಶಕ ಮಾತು ‘’ಅಪ್ಪು ಸರ್‌ ನೆನಪುಗಳನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಅವರ ಕೊನೆಯ ಸಿನಿಮಾವನ್ನು ನಾನು ನಿರ್ದೇಶನ ಮಾಡುವಂತಾಯಿತು. ಸದ್ಯಕ್ಕೆ ಈ ಸಿನಿಮಾದ ಡಿಐ ಕೆಲಸಗಳು ನಡೆಯುತ್ತಿದ್ದು, ಪ್ರತಿದಿನವೂ ಅವರ ನಟನೆಯ ಫುಟೇಜ್‌ಗಳನ್ನು ನೋಡುತ್ತಿರುತ್ತೇನೆ. ಅದನ್ನು ನೋಡುತ್ತಾ, ನೋಡುತ್ತಾ ನನ್ನ ಕಣ್ಣುಗಳಲ್ಲಿ ನೀರು ಬರುತ್ತದೆ. ಅವರಿಗೆ ಅಂತಹ ಶಕ್ತಿ ಇದೆ. ಎಷ್ಟೇ ಕಂಟ್ರೋಲ್‌ ಮಾಡಿಕೊಂಡರೂ ಅವರನ್ನು ತೆರೆಯ ಮೇಲೆ ನೋಡಿದ ತಕ್ಷಣ ಭಾವುಕನಾಗುತ್ತೇನೆ. ಕೆಲವು ದೃಶ್ಯಗಳಲ್ಲಂತೂ ಅವರು ನಿಜಕ್ಕೂ ಅದ್ಭುತವಾಗಿ ನಟಿಸಿದ್ದಾರೆ’’ ಎಂದು ಚೇತನ್‌ ಕುಮಾರ್‌ ಇತ್ತೀಚೆಗಷ್ಟೇ ಹೇಳಿದ್ದರು. ‘ಜೇಮ್ಸ್’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಧ್ವನಿ ನೀಡುವವರು ಯಾರು? ‘’ಜೇಮ್ಸ್‌’ ಸಿನಿಮಾದಲ್ಲಿ ಅಪ್ಪು ಅವರಿಗೆ ಯಾರ ಧ್ವನಿ ನೀಡಬಹುದು ಎಂಬ ಚರ್ಚೆ ಹೊರಗಡೆ ನಡೆಯುತ್ತಿದೆ. ಒಂದಷ್ಟು ಮಂದಿ ಅವರದ್ದೇ ಧ್ವನಿಯನ್ನು ಉಳಿಸಿಕೊಳ್ಳುತ್ತಾರೆ ಎಂದಿದ್ದಾರೆ. ಆದರೆ ನಾವು ಚಿತ್ರೀಕರಣದ ಸಮಯದಲ್ಲಿ ರೆಕಾರ್ಡ್‌ ಆಗಿರುವ ಅಪ್ಪು ಧ್ವನಿಯನ್ನು ಉಳಿಸಿಕೊಳ್ಳಬೇಕು ಎಂದು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ಸುತ್ತಮುತ್ತಲಿನ ಶಬ್ದಗಳನ್ನು ಆದಷ್ಟು ಡಿಲೀಟ್‌ ಮಾಡಿ ಅವರ ಧ್ವನಿ ಮಾತ್ರ ಉಳಿಸಿಕೊಳ್ಳಲು ಸಾಧ್ಯವೇ ಮುಂತಾದ ವಿಷಯಗಳ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಒಂದು ವೇಳೆ ಇದು ಸರಿಯಾಗದೆ ಹೋದರೆ ಶಿವಣ್ಣ ಡಬ್ಬಿಂಗ್‌ ಮಾಡಿಕೊಡುತ್ತೇನೆ ಎಂದಿದ್ದಾರೆ. ಇವೆಲ್ಲ ನಮಗೆ ಗೊತ್ತಾಗಲು ಇನ್ನೂ ಸಮಯ ಹಿಡಿಯುತ್ತದೆ. ಟೆಕ್ನಿಕಲಿ ಒಂದಷ್ಟು ಕೆಲಸಗಳಿವೆ. ಈ ಸಿನಿಮಾವನ್ನು ಎಷ್ಟು ಚೆನ್ನಾಗಿ ತೆರೆಯ ಮೇಲೆ ತರಬೇಕೋ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಅಂತಲೂ ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದರು.