ಪತಿಯಿಂದ ದೂರಾದ ಬಳಿಕ ಮನಃ ಶಾಂತಿಗಾಗಿ ಆಶ್ರಮಕ್ಕೆ ಭೇಟಿ ಕೊಟ್ರಾ ನಟಿ ಸಮಂತಾ?

ಪತಿ ನಾಗ ಚೈತನ್ಯರಿಂದ ದೂರಾದ ಬಳಿಕ ಕೇಳಿಬಂದ ವದಂತಿಗಳ ಬಗ್ಗೆ ಬೇಸರಗೊಂಡಿದ್ದ ನಟಿ ಸಮಂತಾ ‘’ವಿಚ್ಛೇದನವೇ ಒಂದು ದೀರ್ಘವಾದ ನೋವಿನ ಪ್ರಕ್ರಿಯೆ, ಇದರಿಂದ ಗುಣವಾಗಲು ನನಗೆ ಸಮಯ ನೀಡಿ’’ ಎಂದು ಟ್ವೀಟ್ ಮಾಡಿದ್ದರು. ಇದೀಗ ನಟಿ ಸಮಂತಾ ರಿಷಿಕೇಶ್‌ನಲ್ಲಿನ ಆಶ್ರಮವೊಂದಕ್ಕೆ ಭೇಟಿ ನೀಡಿದ್ದಾರೆ.

ಪತಿಯಿಂದ ದೂರಾದ ಬಳಿಕ ಮನಃ ಶಾಂತಿಗಾಗಿ ಆಶ್ರಮಕ್ಕೆ ಭೇಟಿ ಕೊಟ್ರಾ ನಟಿ ಸಮಂತಾ?
Linkup
ನಟಿ ತಮ್ಮ ವೈವಾಹಿಕ ಬದುಕಿಗೆ ಅಂತ್ಯ ಹಾಡಿದರು. ಪ್ರೀತಿಸಿ ಮದುವೆಯಾಗಿದ್ದ ನಟ ನಾಗ ಚೈತನ್ಯರಿಂದ ಸಮಂತಾ ದೂರಾದರು. ಕಳೆದ ಅಕ್ಟೋಬರ್ 2 ರಂದು ತಾವು ಬೇರೆ ಬೇರೆಯಾಗುತ್ತಿರುವ ಸಂಗತಿಯನ್ನು ನಟಿ ಸಮಂತಾ ಹಾಗೂ ಸಾಮಾಜಿಕ ಜಾಲತಾಣಗಳ ಮುಖಾಂತರ ಘೋಷಿಸಿದರು. ಪತಿ ನಾಗ ಚೈತನ್ಯರಿಂದ ದೂರಾದ ಬಳಿಕ ಕೇಳಿಬಂದ ವದಂತಿಗಳ ಬಗ್ಗೆ ಬೇಸರಗೊಂಡಿದ್ದ ನಟಿ ಸಮಂತಾ ‘’ವಿಚ್ಛೇದನವೇ ಒಂದು ದೀರ್ಘವಾದ ನೋವಿನ ಪ್ರಕ್ರಿಯೆ, ಇದರಿಂದ ಗುಣವಾಗಲು ನನಗೆ ಸಮಯ ನೀಡಿ’’ ಎಂದು ಟ್ವೀಟ್ ಮಾಡಿದ್ದರು. ಇದೀಗ ನಟಿ ಸಮಂತಾ ರಿಷಿಕೇಶ್‌ನಲ್ಲಿನ ಆಶ್ರಮವೊಂದಕ್ಕೆ ಭೇಟಿ ನೀಡಿದ್ದಾರೆ. ರಿಷಿಕೇಶ್‌ನಲ್ಲಿದ್ದಾರೆ ನಟಿ ಸಮಂತಾ ನಟಿ ಸಮಂತಾ ಇದೀಗ ಉತ್ತರಾಖಂಡ್‌ನಲ್ಲಿರುವ ರಿಷಿಕೇಶ್‌ನಲ್ಲಿದ್ದಾರೆ. ಅತ್ಮೀಯರ ಜೊತೆಗೆ ರಿಷಿಕೇಶ್‌ಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ರೆಸಾರ್ಟ್‌ ಹಾಗೂ ಆಶ್ರಮಕ್ಕೆ ನಟಿ ಸಮಂತಾ ತೆರಳಿದ್ದಾರೆ. ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ರಿಷಿಕೇಶ್‌ನಲ್ಲಿರುವ ರೆಸಾರ್ಟ್ ಹಾಗೂ ಶ್ರೀ ಸ್ವಾಮಿ ಪುರುಷೋತ್ತಮಾನಂದಜೀ ಮಹಾರಾಜ್ ವಸಿಷ್ಠ್ ಆಶ್ರಮದ ಫೋಟೋಗಳನ್ನು ನಟಿ ಸಮಂತಾ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘’ಖುಷಿ ಬೇರೆಲ್ಲೂ ಇಲ್ಲ, ನಮ್ಮೊಳಗಿದೆ’’ ಎಂದು ಆಶ್ರಮದಲ್ಲಿ ಹಾಕಲಾಗಿರುವ ಫಲಕದ ಫೋಟೋವನ್ನೂ ನಟಿ ಸಮಂತಾ ಶೇರ್ ಮಾಡಿದ್ದಾರೆ. ಇದನ್ನೆಲ್ಲ ನೋಡಿದ ಅಭಿಮಾನಿಗಳು ಮಾನಸಿಕ ನೆಮ್ಮದಿ ಹಾಗೂ ಶಾಂತಿಗಾಗಿ ನಟಿ ಸಮಂತಾ ಆಶ್ರಮಕ್ಕೆ ಭೇಟಿ ನೀಡಿರಬಹುದು ಎನ್ನುತ್ತಿದ್ದಾರೆ. ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿದ್ದ ನಟಿ ಸಮಂತಾ ‘'ಇಂತಹ ಸಂದರ್ಭದಲ್ಲಿ ನನ್ನ ಜೊತೆಗೆ ಇರುವ ಎಲ್ಲರಿಗೂ ನನ್ನ ಕಡೆಯಿಂದ ಧನ್ಯವಾದಗಳು. ನನ್ನ ಕುರಿತಾಗಿ ಹಲವು ರೀತಿಯ ವದಂತಿಗಳು ಹಬ್ಬಿವೆ. ನನಗೆ ಬೇರೆಯವರೊಂದಿಗೆ ಸಂಬಂಧ ಇತ್ತು, ನನಗೆ ಮಕ್ಕಳು ಬೇಕಿರಲಿಲ್ಲ, ನಾನು ಅವಕಾಶವಾದಿಯಾಗಿದ್ದೆ, ಈಗ ನಾನು ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎಂದೆಲ್ಲ ಹೇಳಿದ್ದಾರೆ. ಆದರೆ ಈ ವದಂತಿಗಳು ನಿಜವಲ್ಲ, ವಿಚ್ಛೇದನವೇ ಒಂದು ದೀರ್ಘವಾದ ನೋವಿನ ಪ್ರಕ್ರಿಯೆ, ಇದರಿಂದ ಗುಣವಾಗಲು ನನಗೆ ಸಮಯ ನೀಡಿ. ವೈಯಕ್ತಿಕವಾಗಿ ಇಂತಹ ದಾಳಿಗಳ ಮೂಲಕ ನನ್ನ ಮನಸ್ಸನ್ನು ಘಾಸಿಗೊಳಿಸಲಾಗುತ್ತಿದೆ. ಆದರೆ ನಾನು ಒಂದು ಪ್ರಾಮಿಸ್ ಮಾಡುತ್ತೇನೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ ಮತ್ತು ಈ ರೀತಿಯ ದಾಳಿಯಿಂದ ನನ್ನನ್ನು ಮುರಿಯಲು ಸಾಧ್ಯವಿಲ್ಲ'’ ಎಂದು ಕೆಲ ದಿನಗಳ ಹಿಂದೆಯಷ್ಟೇ ನಟಿ ಸಮಂತಾ ಟ್ವೀಟ್ ಮಾಡಿದ್ದರು. ದೂರಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿದ ಸಮಂತಾ-ನಾಗ ಚೈತನ್ಯ ‘’ಹೆಚ್ಚು ಆಲೋಚನೆ ಮಾಡಿದ ನಂತರ ನಾವು ದೂರಾಗಲು ನಿರ್ಧರಿಸಿದ್ದೇವೆ. ಗಂಡ ಮತ್ತು ಹೆಂಡತಿಯಾಗಿದ್ದ ನಾವು ಈಗ ನಮ್ಮದೇ ಮಾರ್ಗಗಳನ್ನು ಅನುಸರಿಸಲು ನಿರ್ಧರಿಸಿದ್ದೇವೆ. ಸ್ನೇಹವೇ ನಮ್ಮ ಸಂಬಂಧದ ಹೂರಣ. ಒಂದು ದಶಕದಿಂದ ನಾವಿಬ್ಬರು ಸ್ನೇಹಿತರಾಗಿದ್ದದ್ದು ನಮ್ಮ ಅದೃಷ್ಟ. ಈ ಕಷ್ಟದ ಪರಿಸ್ಥಿತಿಯಲ್ಲಿ ನಮಗೆ ಸಪೋರ್ಟ್ ಮಾಡಿ ಹಾಗೂ ನಮ್ಮ ವೈಯಕ್ತಿಕ ಬದುಕನ್ನ ಗೌರವಿಸಲು ಅಭಿಮಾನಿಗಳು, ಹಿತೈಷಿಗಳು ಹಾಗೂ ಮಾಧ್ಯಮಗಳಿಗೆ ಈ ಮೂಲಕ ಮನವಿ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು’’ ಎಂದು ನಾಗ ಚೈತನ್ಯ ಹಾಗೂ ನಟಿ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಟೋಬರ್ 2 ರಂದು ಪೋಸ್ಟ್ ಮಾಡಿದ್ದರು.