ಪಕ್ಷದ ನಿಷ್ಠಾವಂತರ ಹಿತಾಸಕ್ತಿಗಳ ಕಾಪಾಡುತ್ತೇನೆ: ವೀರಪ್ಪ ಮೊಯ್ಲಿ

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಚುನಾವಣಾ ಸಮಿತಿಯು ಗೆಲ್ಲುವ ಅಭ್ಯರ್ಥಿಗಳ ಪರಿಶೀಲನೆಯನ್ನು ಆರಂಭಿಸಿದೆ. ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಚುನಾವಣಾ ಸಮಿತಿಯು ಗೆಲ್ಲುವ ಅಭ್ಯರ್ಥಿಗಳ ಪರಿಶೀಲನೆಯನ್ನು ಆರಂಭಿಸಿದೆ. ಚುನಾವಣೆಗಾಗಿ ಭರ್ಜರಿ ಸಿದ್ಥತೆಗಳ ನಡೆಸಿರುವ ಕಾಂಗ್ರೆಸ್, ಈಗಾಗಲೇ ಶೀಘ್ರವೇ ಮೊದಲ ಪಟ್ಟಿಯನ್ನು ಪ್ರಕಟಿಸಲು ಸಿದ್ಧತೆ ನಡೆಸಿದೆ, ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಚುನಾವಣಾ ಸಮಿತಿಯು ಸದಸ್ಯ ವೀರಪ್ಪ ಮೊಯ್ಲಿಯವರು, ಮೂಲ ಕಾಂಗ್ರೆಸ್ ಕಾರ್ಯಕರ್ತರ ಹಿತ ಕಾಪಾಡುತ್ತೇನೆಂದು ಹೇಳಿದರು. ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನಿರಾಕರಿಸಲು ಯಾರಿಂದಲೂ ಸಾಧ್ಯವಿಲ್ಲ. ಪಕ್ಷದ ಮೊದಲ ಪಟ್ಟಿಯಲ್ಲಿ ಚಾಮರಾಜ ಕ್ಷೇತ್ರದ ತಮ್ಮ ನಿಷ್ಠಾವಂತ ಮಾಜಿ ಶಾಸಕ ವಾಸು ಅವರ ಹೆಸರು ಇರಲಿದೆ ಎಂದು ತಿಳಿಸಿದರು. ಇಲ್ಲಿ ಸಿದ್ದರಾಮಯ್ಯ ಬಣ ಅಥವಾ ಡಿಕೆಎಸ್ ಬಣ ಎಂಬುದೇ ಇಲ್ಲ, ಇರುವುದು ಒಂದೇ ಬಣ ಅದು ಕಾಂಗ್ರೆಸ್ ಬಣ ಎಂದರು. ನರಸಿಂಹರಾಜ ಕ್ಷೇತ್ರದಿಂದ ಹಲವು ಬಾರಿ ಗೆದ್ದಿರುವ ತನ್ವೀರ್ ಸೇಠ್ ಅವರ ಬೇರು ಪಕ್ಷದಲ್ಲಿ ಭದ್ರವಾಗಿದೆ, ಸಚಿವರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಗೆಲ್ಲಬಹುದಾದ ಎಲ್ಲ ಅರ್ಹ ಅಭ್ಯರ್ಥಿಗಳನ್ನು ಪಕ್ಷ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜಿ ಪರಮೇಶ್ವರ ರಾಜೀನಾಮೆ ನೀಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಪರಮೇಶ್ವರ್ ಅವರು ರಾಜೀನಾಮೆ ನೀಡಿಲ್ಲ, ವಿವಿಧ ಪ್ರದೇಶಗಳಿಗೆ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದಾರೆಂದು ಹೇಳಿದರು.

ಪಕ್ಷದ ನಿಷ್ಠಾವಂತರ ಹಿತಾಸಕ್ತಿಗಳ ಕಾಪಾಡುತ್ತೇನೆ: ವೀರಪ್ಪ ಮೊಯ್ಲಿ
Linkup
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಚುನಾವಣಾ ಸಮಿತಿಯು ಗೆಲ್ಲುವ ಅಭ್ಯರ್ಥಿಗಳ ಪರಿಶೀಲನೆಯನ್ನು ಆರಂಭಿಸಿದೆ. ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಚುನಾವಣಾ ಸಮಿತಿಯು ಗೆಲ್ಲುವ ಅಭ್ಯರ್ಥಿಗಳ ಪರಿಶೀಲನೆಯನ್ನು ಆರಂಭಿಸಿದೆ. ಚುನಾವಣೆಗಾಗಿ ಭರ್ಜರಿ ಸಿದ್ಥತೆಗಳ ನಡೆಸಿರುವ ಕಾಂಗ್ರೆಸ್, ಈಗಾಗಲೇ ಶೀಘ್ರವೇ ಮೊದಲ ಪಟ್ಟಿಯನ್ನು ಪ್ರಕಟಿಸಲು ಸಿದ್ಧತೆ ನಡೆಸಿದೆ, ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಚುನಾವಣಾ ಸಮಿತಿಯು ಸದಸ್ಯ ವೀರಪ್ಪ ಮೊಯ್ಲಿಯವರು, ಮೂಲ ಕಾಂಗ್ರೆಸ್ ಕಾರ್ಯಕರ್ತರ ಹಿತ ಕಾಪಾಡುತ್ತೇನೆಂದು ಹೇಳಿದರು. ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನಿರಾಕರಿಸಲು ಯಾರಿಂದಲೂ ಸಾಧ್ಯವಿಲ್ಲ. ಪಕ್ಷದ ಮೊದಲ ಪಟ್ಟಿಯಲ್ಲಿ ಚಾಮರಾಜ ಕ್ಷೇತ್ರದ ತಮ್ಮ ನಿಷ್ಠಾವಂತ ಮಾಜಿ ಶಾಸಕ ವಾಸು ಅವರ ಹೆಸರು ಇರಲಿದೆ ಎಂದು ತಿಳಿಸಿದರು. ಇಲ್ಲಿ ಸಿದ್ದರಾಮಯ್ಯ ಬಣ ಅಥವಾ ಡಿಕೆಎಸ್ ಬಣ ಎಂಬುದೇ ಇಲ್ಲ, ಇರುವುದು ಒಂದೇ ಬಣ ಅದು ಕಾಂಗ್ರೆಸ್ ಬಣ ಎಂದರು. ನರಸಿಂಹರಾಜ ಕ್ಷೇತ್ರದಿಂದ ಹಲವು ಬಾರಿ ಗೆದ್ದಿರುವ ತನ್ವೀರ್ ಸೇಠ್ ಅವರ ಬೇರು ಪಕ್ಷದಲ್ಲಿ ಭದ್ರವಾಗಿದೆ, ಸಚಿವರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಗೆಲ್ಲಬಹುದಾದ ಎಲ್ಲ ಅರ್ಹ ಅಭ್ಯರ್ಥಿಗಳನ್ನು ಪಕ್ಷ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜಿ ಪರಮೇಶ್ವರ ರಾಜೀನಾಮೆ ನೀಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಪರಮೇಶ್ವರ್ ಅವರು ರಾಜೀನಾಮೆ ನೀಡಿಲ್ಲ, ವಿವಿಧ ಪ್ರದೇಶಗಳಿಗೆ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದಾರೆಂದು ಹೇಳಿದರು. ಪಕ್ಷದ ನಿಷ್ಠಾವಂತರ ಹಿತಾಸಕ್ತಿಗಳ ಕಾಪಾಡುತ್ತೇನೆ: ವೀರಪ್ಪ ಮೊಯ್ಲಿ