ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 3ನೇ ಘಾಟಿ ರಸ್ತೆ ನಿರ್ಮಿಸಲು ಟಿಟಿಡಿ ನಿರ್ಧಾರ

​​ಈಗಾಗಲೇ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರನ ದೇಗುಲಕ್ಕೆ ತೆರಳಲು ಎರಡು ರಸ್ತೆಗಳಿವೆ. ಆದರೆ ಇತ್ತೀಚೆಗೆ ಮಳೆಯಿಂದಾಗಿ ಬೆಟ್ಟಗಳು ಕುಸಿದು 2ನೇ ಘಾಟಿ ರಸ್ತೆಗೆ ಸಾಕಷ್ಟು ಹಾನಿಯಾಗಿತ್ತು. ಹೀಗಾಗಿ 3ನೇ ರಸ್ತೆಯೊಂದನ್ನು ನಿರ್ಮಿಸಲು ಇತ್ತೀಚೆಗೆ ನಡೆದ ಟಿಟಿಡಿಯ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 3ನೇ ಘಾಟಿ ರಸ್ತೆ ನಿರ್ಮಿಸಲು ಟಿಟಿಡಿ ನಿರ್ಧಾರ
Linkup
ತಿರುಪತಿ: ಇತ್ತೀಚೆಗೆ ಬಿದ್ದ ಭಾರೀ ಮಳೆಯ ಸಂದರ್ಭದಲ್ಲಿ ಕುಸಿತಕ್ಕೊಳಗಾಗಿದ್ದ ಬೆಟ್ಟದ ಘಾಟಿ ರಸ್ತೆಗಳನ್ನು ಮರು ನಿರ್ಮಿಸುವುದರ ಜತೆಗೆ ಭಕ್ತರ ಸುಗಮ ಯಾತ್ರೆಗೆ ಅನುಕೂಲವಾಗುವಂತೆ ಮತ್ತೊಂದು ರಸ್ತೆ ನಿರ್ಮಿಸಲು ತಿರುಮಲ ದೇವಸ್ಥಾನಂ () ನಿರ್ಧರಿಸಿದೆ. ಈಗಾಗಲೇ ಶ್ರೀ ವೆಂಕಟೇಶ್ವರನ ದೇಗುಲಕ್ಕೆ ತೆರಳಲು ಎರಡು ರಸ್ತೆಗಳಿವೆ. ಆದರೆ ಇತ್ತೀಚೆಗೆ ಮಳೆಯಿಂದಾಗಿ ಬೆಟ್ಟಗಳು ಕುಸಿದು ಎರಡನೇ ಘಾಟಿ ರಸ್ತೆಗೆ ಸಾಕಷ್ಟು ಹಾನಿಯಾಗಿತ್ತು. ಇದರಿಂದ ಬೆಟ್ಟವನ್ನೇರುವುದು ಕಷ್ಟವಾಗಿದೆ. ಹೀಗಾಗಿ ಮೂರನೇ ರಸ್ತೆಯೊಂದನ್ನು ನಿರ್ಮಿಸಲು ಇತ್ತೀಚೆಗೆ ನಡೆದ ಟಿಟಿಡಿಯ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಡಪಾ ಜಿಲ್ಲೆಯಿಂದ ತಿರುಮಲ ದೇಗುಲಕ್ಕೆ ಸಂಪರ್ಕ ಕಲ್ಪಿಸಲಿರುವ ರಸ್ತೆಯೊಂದರ ನಿರ್ಮಾಣದ ಕುರಿತು ಈ ಹಿಂದಿನಿಂದಲೂ ಚರ್ಚೆ ನಡೆಯುತ್ತಿತ್ತು. ಆದರೆ ಇದಕ್ಕೆ ಸಾಕಷ್ಟು ವಿರೋಧವೂ ಇದ್ದ ಕಾರಣ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈಗ ಈ ಸಂಬಂಧ ತೀರ್ಮಾನ ತೆಗೆದುಕೊಂಡಿರುವ ಟಿಟಿಡಿ, ರಸ್ತೆಯ ನಿರ್ಮಾಣದ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲು ತನ್ನ ಎಂಜಿನಿಯರಿಂಗ್‌ ವಿಭಾಗಕ್ಕೆ ಸೂಚಿಸಿದೆ. ದಾಸ ಪರಂಪರೆಗೆ ಸೇರಿದ ಸಂತ ಅನ್ನಮಾಚಾರ್ಯ ತಮ್ಮ ಊರು ತೆಳ್ಳಪಾಕದಿಂದ ವೆಂಕಟೇಶ್ವರನ ಸನ್ನಿಧಾನಕ್ಕೆ ಬರುತ್ತಿದ್ದ ಕಾಲ್ನಡಿಗೆಯ ದಾರಿಯನ್ನೇ ರಸ್ತೆ ಮಾಡಲು ಉದ್ದೇಶಿಸಲಾಗಿದೆ. ಶೇಷಾಚಲಂ ಬೆಟ್ಟದ ಮೂಲಕ ಈ ರಸ್ತೆ ನಿರ್ಮಾಣವಾಗಬೇಕಿದೆ. ಈ ರಸ್ತೆ ನಿರ್ಮಾಣವಾದರೆ ಕಡಪಾ ಮತ್ತು ತಿರುಮಲ ನಡುವಿನ ಅಂತರ 40 ಕಿ.ಮೀ. ಕಡಿಮೆಯಾಗಲಿದೆ. ಆಗ ತಿರುಪತಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಉದ್ದೇಶಿತ ಮಾರ್ಗವು ರೈಲ್ವೆ ಕೋಡೂರು, ಕುಕ್ಕಲದೊಡ್ಡಿ, ಮಾಮಂಡೂರು ಮತ್ತು ಶೇಷಾಚಲಂ ಬೆಟ್ಟಗಳ ಮೂಲಕ ತಿರುಮಲ ತಲುಪಲಿದೆ. ಸುಮಾರು 18 ಕಿ.ಮೀ. ಮಾತ್ರ ಈ ರಸ್ತೆಯ ಉದ್ದವಿರಲಿದೆ. ಈಗಿರುವ ಎರಡು ಘಾಟ್‌ ರಸ್ತೆಗಳಿಗೆ ಹೋಲಿಸಿದರೆ ಇದು ಅತ್ಯಂತ ಸುಲಭದ ಮಾರ್ಗ ಎನಿಸಲಿದೆ. ಈ ಕಡೆಯಿಂದಲೇ ಇರುವ ಹಳೆಯದಾದ ಪಾದಚಾರಿ ಮಾರ್ಗವೊಂದನ್ನು ರೂಪಿಸುವ ಕುರಿತೂ ಚರ್ಚೆ ನಡೆದಿದೆ. ಟ್ರಕ್ಕಿಂಗ್‌ ಮಾಡುವವರು ಈ ಮಾರ್ಗದಲ್ಲಿ ಈಗ ತಿರುಮಲ ತಲುಪುತ್ತಿದ್ದಾರೆ. ಮರು ನಿರ್ಮಾಣಕುಸಿತದಿಂದ ಹಾಳಾಗಿದ್ದ ಘಾಟಿ ರಸ್ತೆಯನ್ನು ಐಐಟಿ ದಿಲ್ಲಿ ಮತ್ತು ಐಐಟಿ ಮದ್ರಾಸ್‌ನ ತಜ್ಞರ ಸಲಹೆಯಂತೆ ಮರು ನಿರ್ಮಿಸಲಾಗುತ್ತಿದೆ. ಮತ್ತೆ ಕುಸಿಯದಂತೆ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಎಂದು ಟಿಟಿಡಿ ಚೇರ್ಮನ್‌ ವೈವಿ ಸುಬ್ಬಾ ರೆಡ್ಡಿ ಹೇಳಿದ್ದಾರೆ. ಹಾನಿಗೀಡಾದ ಎರಡನೇ ಘಾಟಿ ರಸ್ತೆಯನ್ನು ಸರಿಪಡಿಸಲು 3.95 ಕೋಟಿ ಮತ್ತು ಸಂಪೂರ್ಣ ಹಾನಿಗೀಡಾದ ಶ್ರೀವಾರಿಮೆಟ್ಟು ಕಾಲ್ನಡಿಗೆ ಹಾದಿಯನ್ನು ಸರಿಪಡಿಸಲು 3.60 ಕೋಟಿ ರೂ. ವಿನಿಯೋಗಿಸಲು ಟಿಟಿಡಿ ಟ್ರಸ್ಟ್‌ ಅನುಮತಿ ನೀಡಿದೆ. ದರ್ಶನ ಕೋಟಾ ಹೆಚ್ಚಳಕೋವಿಡ್‌-19 ಸೋಂಕು ಪ್ರಕರಣ ತಗ್ಗುತ್ತಿರುವುದರಿಂದ ಹೊಸ ವರ್ಷದ ಅರ್ಜಿತ ಸೇವೆಗಳನ್ನು (ಪಾವತಿ ಸೇವೆಗಳು) ಪುನಾರಂಭಿಸಲು ಮತ್ತು ದರ್ಶನ ಕೋಟಾವನ್ನು ಹೆಚ್ಚಿಸಲು ಟಿಟಿಡಿ ನಿರ್ಧರಿಸಿದೆ. "ಇದಕ್ಕೆ ಸಂಬಂಧಪಟ್ಟಂತೆ ಅನುಮತಿ ಕೋರಿ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗುವುದು," ಎಂದು ಸುಬ್ಬಾ ರೆಡ್ಡಿ ಹೇಳಿದ್ದಾರೆ.